Sunday, May 26, 2024

ವಿಶ್ವ ಟೆಕ್ವಾಂಡೋ ಚಾಂಪಿಯನ್‌ಷಿಪ್ ಭಾರತಕ್ಕೆ ಕಂಚಿನ ಪದಕ ತಂದ ಕಿಶೋರ್

ಸ್ಪೋರ್ಟ್ಸ್ ಮೇಲ್ ವರದಿ 

ಬೆಲಾರೂಸ್‌ನಲ್ಲಿ ನಡೆದ ೧೩ನೇ ವಿಶ್ವ ಜೂನಿಯರ್ ಟೆಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿರತ ತಂಡವನ್ನು ಪ್ರತಿನಿಧಿಸಿದ್ದ ಕಿಶೋರ್ ಬಿ.ಕೆ. ಕಂಚಿನ ಪದಕ ಗೆದ್ದಿದ್ದಾರೆ.

ಈ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವದ ೭೦ ರಾಷ್ಟ್ರಗಳು ಪಾಲ್ಗೊಂಡಿದ್ದವು.  ೮ನೇ ಹಿರಿಯ ಟೆಕ್ವಾಂಡೋ ಚಾಂಪಿಯನ್‌ಷಿಪ್ ಕೂಡ ಇದೇ ಸಂದ‘ರ್ದಲ್ಲಿ ನಡೆಯಿತು.
ರಷ್ಯಾ, ಕಜಕಿಸ್ತಾನ್, ಅರ್ಜೆಂಟೀನಾ ಸ್ಪರ್ಧಿಗಳ ವಿರುದ್ಧ ಜಯ ಗಳಿಸಿದ ಕಿಶೋರ್ ದಕ್ಷಿಣ ಕೊರಿಯಾದ ಸ್ಪರ್ಧಿಗೆ ಶರಣಾದರು.

ಮನ ಗೆದ್ದ ರಾಮಮೂರ್ತಿ

೬೭ನೇ ವಯಸ್ಸಿನಲ್ಲೂ ಭ್ಯಾಸ ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವ ಕರ್ನಾಟಕದ ರಾಮಮೂರ್ತಿ ಹಿರಿಯರ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಪದಕ ಗೆಲ್ಲುವಲ್ಲಿ ವಿಲರಾದರೂ ರಾಮಮೂರ್ತಿ ಬೆಲಾರೂಸ್‌ನ ಸಂಘಟಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು. ಇಳಿ ವಯಸ್ಸಿನಲ್ಲೂ ಅತ್ಯಂತ ಉಲ್ಲಾಸದಿಂದ ಸ್ಪರ್ಧಿಸುತ್ತಿರುವ ರಾಮಮೂರ್ತಿ ಅವರು ಇತರರಿಗೆ ಸ್ಫೂರ್ತಿಯಾದರು. ಸಂಘಟಕರು ರಾಮಮೂರ್ತಿ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದರು.
ಕರ್ನಾಟಕ ರಾಜ್ಯ ಟೆಕ್ವಾಂಡೋ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಜನಾರ್ದನ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ರೆರಿಯಾಗಿ ಕಾರ್ಯನಿರ್ವಹಿಸಿದರು.

Related Articles