Saturday, July 27, 2024

ಕಿಕ್‌ಸ್ಟಾರ್ಟ್‌ ಎಫ್‌ಸಿ ಮತ್ತು ಟೋಟನ್‌ಹ್ಯಾಮ್‌ ಒಪ್ಪಂದ

ಬೆಂಗಳೂರು, ನವಂಬರ್ 28: ಭಾರತೀಯ ಫುಟ್‌ಬಾಲ್‌ನ ಚಿತ್ರಣವನ್ನು ಮರುವಿವರಿಸುವ ಪ್ರಯತ್ನದ ನಿಟ್ಟಿನಲ್ಲಿ, ಕರ್ನಾಟಕದ ಪ್ರೀಮಿಯರ್ ಫುಟ್‌ಬಾಲ್ ಕ್ಲಬ್ ಮತ್ತು ಅಕಾಡೆಮಿಯಾದ ಕಿಕ್‌ ಸ್ಟಾರ್ಟ್‌ ಎಫ್‌ಸಿ ಸುಪ್ರಸಿದ್ಧವಾದ ಇಂಗ್ಲಿಷ್ ಪ್ರೀಮಿಯಮ್ ಲೀಗ್ ಪಡೆಯಾದ ಟೋಟನ್‌ಹ್ಯಾಮ್ ಹಾಟ್‌ಸ್ಪರ್ ಫುಟ್‌ಬಾಲ್ ಕ್ಲಬ್‌ನೊಂದಿಗೆ ಪ್ರಮುಖ ಸಹಭಾಗಿತ್ವವನ್ನು ಹೆಮ್ಮೆಯಿಂದ ಘೋಷಿಸಿದೆ. Kickstart FC inks historic partnership deal with EPL side Tottenham Hotspur.

ಟೋಟನ್‌ಹ್ಯಾಮ್‌ನ ರಾಯಭಾರಿಗಳಾದ ಲೆಡ್ಲಿ ಕಿಂಗ್ ಮತ್ತು ಓಸ್ವಾಲ್ಡೊ ಆರ್ಡಿಲ್ಸ್ Ledley King & Osvaldo Ardiles ಹಾಜರಿದ್ದ ಈ ಐತಿಹಾಸಿಕ ಅನಾವರಣವು ಕರ್ನಾಟಕ ಮತ್ತು ಭಾರತೀಯ ಫುಟ್‌ಬಾಲ್ ಬೆಳವಣಿಗೆಯಲ್ಲಿ ಪ್ರಮುಖ ಕ್ಷಣವಾಗಿದೆ.

ಈ ಸಹಭಾಗಿತ್ವದ ಮೂಲಕ Kickstart FC ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ನಜಾಗತಿಕ ಫುಟ್‌ಬಾಲ್‌ ತರಬೇತುದಾರರ ತಂಡದಿಂದ ತಾಂತ್ರಿಕ ಬೆಂಬಲ ಪಡೆದುಕೊಳ್ಳಲ್ಲಿದ್ದು, ಇವರು ಕ್ಲಬ್‌ನ ತರಬೇತಿ ಪಠ್ಯಕ್ರಮ, ಮತ್ತು ಫುಟ್‌ಬಾಲ್‌ನ ಎಲ್ಲಾ ಅಂಶಗಳಿಗೆ ಆಕಾರ ಒದಗಿಸಲಿದ್ದಾರೆ. ಹೆಚ್ಚುವರಿಯಾಗಿ,  ಟೋಟನ್‌ಹ್ಯಾಮ್ ಹಾಟ್‌ಸ್ಪರ್ ತನ್ನ ತಾಂತ್ರಿಕ ಸಿಬ್ಬಂದಿಯನ್ನು ಬೆಂಗಳೂರಿನಲ್ಲೇ ಇರಿಸಿ, Kickstart FC ಇಂಗ್ಲಿಷ್ ಪ್ರಬಲಪಡೆಗೆ ಅನುಗುಣವಾಗಿ ಇರುವಂತೆ ಅದರ ತರಬೇತಿ ವಿಧಾನಗಳನ್ನು ತಯಾರಿಸಲಿದೆ.

ಈಗಾಗಲೇ ಪ್ರಶಂಸನೀಯ ದಾಖಲೆ ಹೊಂದಿರುವ ಕ್ಲಬ್‌ನ ಮಹಿಳಾ ತಂಡವು, ಇತ್ತೀಚೆಗೆ ಸಂಪೂರ್ಣಗೊಂಡ ಭಾರತೀಯ ಮಹಿಳಾ ಲೀಗ್ ಪಂದ್ಯಾವಳಿಯಲ್ಲಿ ರನ್ನರ್ಸ್ ಅಪ್ ಅಗಿದೆ. Kickstart FC, ಯಾವಾಗಲೂ ವಿವಿಧ ವರ್ಗಗಳಾದ್ಯಂತ ಆಟಗಾರ ಬೆಳವಣಿಗೆಗೆ ಒತ್ತು ನೀಡುತ್ತಾ ಬಂದಿದೆ. ಆದ್ದರಿಂದಲೇ ಈ ಸಹಭಾಗಿತ್ವವು ಕರ್ನಾಟಕ ರಾಜ್ಯದಲ್ಲಿ ಕ್ಲಬ್‌ನ ಪ್ರಯತ್ನಗಳನ್ನು ಇನ್ನಷ್ಟು ಬಲಪಡಿಸಿ ಅನುವುಗೊಳಿಸಲಿದೆ.

ಎರಡೂ ಕ್ಲಬ್‌ಗಳಿಗೆ ಪ್ರಯೋಜನಕಾರಿಯಾಗಿರುವ ಈ ಸಹಭಾಗಿತ್ವವು, ಸ್ಪರ್ಧಾತ್ಮಕ ಸ್ಪರ್ಧೆಯ ಮೂಲಕ ಯುವ ತಂಡಗಳನ್ನು ಬಲಪಡಿಸುವತ್ತ ಬಲವಾದ ಪ್ರೇರಣೆ ಒದಗಿಸಲಿದೆ.  ಪ್ರತಿಭಾ ಅಭಿವೃದ್ಧಿಗೆ ಸಹಯೋಗಗಳನ್ನು ರಚಿಸುತ್ತಾ, Kickstart FCದ ಯುವತಂಡವು, ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ನ ಯುವತಂಡಗಳೊಂದಿಗೆ ತರಬೇತಿ ಪಡೆದುಕೊಳ್ಳಲು ಯು.ಕೆ.ಗೆ ಪ್ರಯಾಣ ಬೆಳೆಸುವ ಅವಕಾಶವನ್ನೂ ಪಡೆದುಕೊಳ್ಳಲಿದೆ.

ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ನೊಂದಿಗಿನ ಸಹಯೋಗವು, Kickstart FCಅನ್ನು ಅಂತರರಾಷ್ಟ್ರೀಯ ರಂಗಕ್ಕೆ ವರ್ಧಿಸಲಿದ್ದು, ಅದಕ್ಕೆ ಸರಿಸಾಟಿಯಿಲ್ಲದ ಅವಕಾಶಗಳು ಮತ್ತು ಗುರುತಿಸುವಿಕೆಯನ್ನು ಒದಗಿಸಲಿದೆ. ಕಿಕ್‌ಶ್ಟಾರ್ಟ್ ಫುಟ್‌ಬಾಲ್‌ ಆಡಳಿತಮಂಡಳಿಯ ದಾರ್ಶನಿಕ ನಾಯಕತ್ವವು ಅಖಿಲ-ಭಾರತ ಮಟ್ಟದಲ್ಲಿ ಫುಟ್‌ಬಾಲ್‍ಅನ್ನು ಪ್ರೋತ್ಸಾಹಿಸುವ ಬದ್ಧತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

Related Articles