ಅಥ್ಲೆಟಿಕ್ಸ್ ಸ್ವರ್ಣ ಡಬಲ್: ಟ್ರೈಬಲ್ ಗೇಮ್ಸ್‌ನಲ್ಲಿ ಕರ್ನಾಟಕ ಪಾರಮ್ಯ
ರಾಯ್ಪುರ: ಅಥ್ಲೆಟಿಕ್ಸ್‌ನಲ್ಲಿ ನಾಗಿನಿ ಹಾಗೂ ರಿತುಶ್ರೀ ಚಿನ್ನದ ಪದಕ ಗೆಲ್ಲುವುದರೊಂದಿಗೆ ಒಟ್ಟು 23 ಚಿನ್ನದ ಪದಕಗಳೊಂದಿಗೆ
38 ಪದಕಗಳನ್ನು ಗೆದ್ದಿರುವ ಕರ್ನಾಟಕ ಮೊದಲ ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್‌ನ ಪದಕಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. Khelo India Tribal Games: Karnataka in the hunt for overall champion title.
ಏಪ್ರಿಲ್ 3 ಕ್ರೀಡಾಕೂಟದ ಕೊನೆಯ ದಿನವಾಗಿದ್ದು, ಕರ್ನಾಟಕ 23 ಚಿನ್ನ, 8 ಬೆಳ್ಳಿ ಹಾಗೂ 7 ಕಂಚಿನ ಪದಗಳು ಸೇರಿ ಒಟ್ಟು 38 ಪದಕಗಳೊಂದಿಗೆ ಸಮಗ್ರ ಚಾಂಪಿಯನ್ ಸ್ಥಾನದಲ್ಲಿದೆ.
ಮೊದಲು ವನಿತೆಯರ 800 ಮೀಟರ್ ಓಟದಲ್ಲಿ ಚಿನ್ನ ಗೆದ್ದಿದ್ದ ಕರ್ನಾಟಕದ ನಾಗಿನಿ 1500 ಮೀಟರ್ ಓಟದಲ್ಲೂ ಚಿನ್ನದ ಸಾಧನೆ ಮಾಡಿದರು. ಮೊದಲ ದಿನದಲ್ಲಿ 400 ಮೀ ಓಟದಲ್ಲಿ ಚಿನ್ನ ಗೆದ್ದಿದ್ದ ರಿತುಶ್ರೀ ಗುರುವಾರ 200 ಮೀ, ಓಟದಲ್ಲಿ ಅಗ್ರ ಸ್ಥಾನ ಪಡೆದು ರಾಜ್ಯಕ್ಕೆ ಮತ್ತೊಂದು ಚಿನ್ನದ ಉಡುಗೊರೆ ನೀಡಿದರು.
ಕರ್ನಾಟಕ ಈಜಿನಲ್ಲಿ 15 ಚಿನ್ನ, ವೇಟ್‌ಲಿಫ್ಟಿಂಗ್‌ನಲ್ಲಿ 3 ಹಾಗೂ ಅಥ್ಲೆಟಿಕ್ಸ್‌ನಲ್ಲಿ 5 ಚಿನ್ನದ ಸಾಧನೆ ಮಾಡಿದೆ. ಅಥ್ಲೆಟಿಕ್ಸ್‌ನಲ್ಲಿ 1 ಬೆಳ್ಳಿ ಹಾಗೂ 1 ಕಂಚಿನ ಪದಕ ಸೇರಿದೆ.
ವನಿತೆಯರ ಫುಟ್ಟಾಲ್‌ನಲ್ಲಿ ಬೆಂಗಳೂರಿನ ಕಿಕ್‌ಸ್ಟಾರ್ಟ್ ತಂಡದ ಆಟಗಾರ್ತಿ ಕಿರಣ್ ಪಿಸ್ಡಾ ಅವರ ನಾಯಕತ್ವದ ಛತ್ತೀಸ್‌ಗಢ 1-0 ಗೋಲಿನಿಂದ ಜಾರ್ಖಂಡ್ ವಿರುದ್ಧ ಜಯ ಗಳಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಫುರುಷರ ಫುಟ್ಬಾಲ್ ಫೈನಲ್‌ನಲ್ಲಿ ಶುಕ್ರವಾರ ಛತ್ತೀಸ್‌ಗಢ ಹಾಗೂ ಪಶ್ಚಿಮ ಬಂಗಾಳ ತಂಡಗಳು ಚಿನ್ನದ ಪದಕಕ್ಕಾಗಿ ಮುಖಾಮುಖಿಯಾಗಲಿವೆ.

