Tuesday, March 21, 2023

ಈಜು: ಕ್ಯಾಥ್ಲೀನ್ ವಿಶ್ವ ದಾಖಲೆ

ಅಮೆರಿಕ:ಅಮೆರಿಕದ ಯುವ ಈಜುಪಟು ಕ್ಯಾಥ್ಲೀನ್ ಬೆಕರ್, ಇಲ್ಲಿ ನಡೆಯುತ್ತಿರುವ ಯು.ಎಸ್ ಸ್ವಿಮಿಂಗ್ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದ ೧೦೦ ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ನೂತನ ವಿಶ್ವ ದಾಖಲೆ ಬರೆದಿದ್ದಾರೆ.

ರಿಯೊ ಒಲಿಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿರುವ ೨೧ ವರ್ಷದ ಈಜುಪಟು ಕ್ಯಾಥ್ಲೀನ್, ೧೦೦ ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ೫೮.೦೦ ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ನೂತನ ವಿಶ್ವ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ೨೦೧೭ರ ಜುಲೈನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕೆನಡಾದ ಈಜುಪಟು ಕೈಲಿ ಮಾಸೇ (೫೮.೧೦ ಸೆ.) ಅವರು ಬರೆದಿದ್ದ ವಿಶ್ವ ದಾಖಲೆಯನ್ನು ಮುರಿದರು.
೨೦೦ ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ರೆಗಾನ್ ಸ್ಮಿತ್ ಜತೆಗೆ ಜಂಟೀ ಪ್ರಥಮ ಸ್ಥಾನ ಪಡೆದಿದ್ದ ಬೆಕರ್, ೧೦೦ ಮೀ. ಬ್ಯಾಕ್‌ಸ್ಟ್ರೋಕ್ ಈಜಿನ ಮೊದಲ ೫೦ ಮೀ. ದೂರವನ್ನು ಗಮನಾರ್ಹ ೨೭.೯೦ ಸೆಕೆಂಡ್‌ಗಳಲ್ಲಿ ಪೂರೈಸಿದ್ದರು. ಈ ವಿಭಾಗದಲ್ಲಿನ ಸ್ವರ್ಣದೊಂದಿಗೆ ಮುಂದಿನ ತಿಂಗಳು ಟೋಕಿಯೋದಲ್ಲಿ ನಡೆಯಲಿರುವ ಪ್ಯಾನ್ ಪೆಸಿಫಿಕ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದಿದ್ದಾರೆ.

Related Articles