Thursday, September 21, 2023

ಕರಾಟೆ ರೆಫರಿಯಾಗಿ ಆಯ್ಕೆ

ಸ್ಪೋರ್ಟ್ಸ್ ಮೇಲ್ ವರದಿ:ಭಾರತದ ಅತಿದೊಡ್ಡ ಮಾರ್ಷಲ್ ಆರ್ಟ್ಸ್ ಸಂಸ್ಥೆಗಳಲ್ಲಿ ಒಂದೆನಿಸಿರುವ ಒಕಿನಾವ ಶೋರಿನ್ ರಿಯು ಶೋರಿನ್ ಕಾನ್ ಕರಾಟೆ ಫೆಡರೇಷನ್ ಆಫ್ ಇಂಡಿಯಾ(ಒಎಸ್‌ಕೆ) ಅಧ್ಯಕ್ಷ ಶಿಹಾನ್ ಸುರೇಶ್ ಕೆನಿಚಿರ ಜಪಾನ್‌ನಲ್ಲಿ ಆಗಸ್ಟ್  ೮ರವರೆಗೆ ನಡೆಯಲಿರುವ ವಿಶ್ವ ಕರಾಟೆ ಮತ್ತು ಕೊಬುಡೊ ಚಾಂಪಿಯನ್‌ಷಿಪ್‌ಗೆ ರೆಫರಿಯಾಗಿ ಆಯ್ಕೆಯಾಗಿದ್ದಾರೆ.

 ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಇತರ ದೇಶಗಳ ನಾಲ್ಕು ರೆಫರಿಗಳ ಪೈಕಿ ಕರ್ನಾಟಕದ ಸುರೇಶ್ ಕೆನಿಚಿರ  ಭಾರತದಿಂದ ಆಯ್ಕೆಯಾಗಿರುವ ಏಕೈಕ ರೆಫರಿಯಾಗಿದ್ದಾರೆ. ೧೯೯೨ರಿಂದ ದೇಶದಲ್ಲಿ ಸಾಂಪ್ರದಾಯಿಕ ಕರಾಟೆ ತರಬೇತಿ ನೀಡುತ್ತಿರುವ ಸುರೇಶ್, ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಹಲವು ಬಾರಿ  ಭಾರತ ತಂಡವನ್ನು ಪ್ರತಿನಿಸಿದ್ದಾರೆ.

Related Articles