Saturday, October 12, 2024

ರಾಜ್ಯ ಟೆಕ್ವಾಂಡೋ: ಆರ್ಯನ್‌ಗೆ ಚಿನ್ನ

 Sportsmail

ಬೆಂಗಳೂರಿನ ಸಹಕಾರ ನಗರದಲ್ಲಿರುವ ಡೇವ್-ಇನ್‌ ನ್ಯಾಷನಲ್‌ ಸ್ಕೂಲ್‌ನಲ್ಲಿ ಭಾನುವಾರ ಆರಂಭಗೊಂಡ 20 ನೇ ರಾಜ್ಯ ಮಟ್ಟದ ಟೆಕ್ವಾಂಡೋ ಚಾಂಪಿಯನ್ಷಿಪ್‌ನಲ್ಲಿ ಆರ್ಯನ್‌ ಚಿನ್ನದ ಪದಕ ಗೆದ್ದಿದ್ದಾರೆ.

10ರಿಂದ 13 ವರ್ಷ ವಯೋಮಿತಿಯ ವಿಭಾಗದಲ್ಲಿ ಆರ್ಯನ್‌ ಅಗ್ರ ಸ್ಥಾನ ಪಡೆದರೆ ಕೌಶಿಕ್‌ ಬೆಳ್ಳಿ, ಕುಶಲ್‌ ಮತ್ತು ಪ್ರಣವ್‌ ಕಂಚಿನ ಪದಕ ಗೆದ್ದರು.

 

10ವಯೋಮಿತಿಯ ವೈಯಕ್ತಿಕ ವಿಭಾಗದಲ್ಲಿ ಅಥಿರಕ್ಷ ಚಿನ್ನ, ರೆಯಾನ್‌ ಬೆಳ್ಳಿ ಹಾಗೂ ಆದಿತ್ಯ ಮತ್ತು ಅನೂಷ್‌ ಕಂಚಿನ ಪದಕ ತಮ್ಮದಾಗಿಸಿಕೊಂಡರು. 18 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಯುವರಾಜ್‌ ಚಿನ್ನ, ಹರೀಶ್‌ ಬೆಳ್ಳಿ ಹಾಗೂ ರವಿಶಂಕರ್‌ ಮತ್ತು ಲಕ್ಷ್ಮಣ್‌ ಕಂಚಿನ ಪದಕ ಗೆದ್ದರು.

14 ರಿಂದ  17 ವರ್ಷ ವಯೋಮಿತಿಯ ವಿಭಾಗದಲ್ಲಿ ದೀಪಕ್‌ ಚಿನ್ನ, ಬ್ರಿಜೇಶ್‌ ಬೆಳ್ಳಿ ಮತ್ತು ವರುಣ್‌ ಮತ್ತು ಓಂಸೃಷ್ಟಿ ಕಂಚು ತಮ್ಮದಾಗಿಸಿಕೊಂಡರು.

ಕಾವೇರಿ ಸಾಮಾಜಿಕ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಬಿ.ಎಂ. ದೇವರಾಜಪ್ಪ ಚಾಂಪಿಯನ್ಷಿಪ್‌ಗೆ ಚಾಲನೆ ನೀಡಿದರು. ಕರ್ನಾಟಕ ರಾಜ್ಯ ಟೆಕ್ವಾಂಡೋ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್‌ ಜನಾರ್ಧನ್‌ ಅವರ ಮುಂದಾಳತ್ವದಲ್ಲಿ ಈ ಚಾಂಪಿಯನ್ಷಿಪ್‌ ನಡೆಯುತ್ತಿದೆ. 15 ಜಿಲ್ಲೆಗಳಿಂದ ಸುಮಾರು ಒಂದು ಸಾವಿರಕ್ಕೂ ಅಧಿಕ ಸ್ಪರ್ಧಿಗಳು, ತರಬೇತುದಾರರು, ಅಧಿಕಾರಿಗಳು ಇಲ್ಲಿ ಪಾಲ್ಗೊಂಡಿದ್ದರು.

Related Articles