ಬೆಂಗಳೂರು: ಭಾನುವಾರದಿಂದ ದೆಹಲಿಯಲ್ಲಿ ಆರಂಭಗೊಳ್ಳಲಿರುವ ವಿಶ್ವಕಪ್ ಖೋ ಖೋ ಚಾಂಪಿಯನ್‌ಷಿಪ್‌ಗೆ ಭಾರತದ ತಂಡದಲ್ಲಿ ಮೈಸೂರಿನ ಗ್ರಾಮೀಣ ಪ್ರದೇಶದ ಆಟಗಾರ್ತಿ ಚೈತ್ರ ಅವರು ಆಯ್ಕೆಯಾಗಿದ್ದಾರೆ. ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಚೈತ್ರ ಕೃಷಿ ಕುಟುಂಬದಿಂದ ಬಂದ ಪ್ರತಿಭಾವಂತ ಆಟಗಾರ್ತಿ. Karnataka’s B. Chaitra single player from South India in Indian Kho Kho women world Cup Team
ಮೈಸೂರು ತಾಲೂಕು ತಿ. ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಚೈತ್ರ ದೆಹಲಿಯಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ತೋರಿದ ಹಿನ್ನೆಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಚೈತ್ರ ಅವರ ಈ ಸಾಧನೆಯ ಹಿಂದೆ ಆ ಶಾಲೆಯ ಶಿಕ್ಷಕರಾದ ಕೆ. ಮಂಜುನಾಥ್ ಅವರ ಪಾತ್ರ ಪ್ರಮುಖವಾಗಿತ್ತು. ಪ್ರಸ್ತುತ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿರುವ ಶ್ರೀ ಶಂಭುಲಿಂಗೇಶ್ವರ ಕಾಲೇಜಿನಲ್ಲಿ ಎರಡನೇ ವರ್ಷದ ದೈಹಿಕ ಶಿಕ್ಷಣ ತರಬೇತಿಯನ್ನು ಪಡೆಯುತ್ತಿರುವ ಚೈತ್ರ ಚಿಕ್ಕಂದಿನಿಂದಲೇ ಖೋ ಖೋ ಆಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
2022ರಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವನಿದ್ಯಾನಿಲಯದ ಖೋ ಖೋ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೈಸೂರು ವಿಶ್ವವಿದ್ಯಾನಿಲಯ ತಂಡದ ಸದಸ್ಯೆಯಾಗಿದ್ದ ಚೈತ್ರ 2014ರಲ್ಲಿ ಭಾರತೀಯ ಖೋ ಖೋ ಫೆಡರೇಷನ್‌ನಿಂದ ಅತ್ಯುತ್ತಮ ಸಬ್ ಜೂನಿಯರ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಖೇಲೋ ಇಂಡಿಯಾ ಚಾಂಪಿಯನ್‌ಷಿಪ್‌ನಲ್ಲೂ ಎರಡು ಬಾರಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು.
ಕುರಬೂರು ಗ್ರಾಮದ ರೈತ ದಂಪತಿ ಬಸವಣ್ಣ ಹಾಗೂ ನಾಗರತ್ನ ದಂಪತಿಯ ಪುತ್ರಿ ಬಿ. ಚೈತ್ರ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರಿ, ಭಾರತ ತಂಡದ ಜಯಕ್ಕೆ ನೆರವಾಗಲಿ ಎಂಬುದೇ ಕನ್ನಡಿಗರ ಹಾರೈಕೆ.