Thursday, October 10, 2024

SAAF ಚಾಂಪಿಯನ್‌ಷಿಪ್‌: ಸುಧೀಕ್ಷಾಗೆ ಬೆಳ್ಳಿ, ಬೋಪಣ್ಣಗೆ ಕಂಚು

ಬೆಂಗಳೂರು: ಚೆನ್ನೈನಲ್ಲಿ ಬುಧವಾರ ಆರಂಭಗೊಂಡ 4ನೇ ದಕ್ಷಿಣ ಏಷ್ಯಾ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕರ್ನಾಟಕದ  ಸುಧೀಕ್ಷಾ ಹಾಗೂ ಬೋಪಣ್ಣ ಅನುಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. Karnataka athletes won two medals at SAAF junior athletic championship at Chennai

ವನಿತೆಯರ 100 ಮೀಟರ್‌ ಓಟದಲ್ಲಿ ಸುಧೀಕ್ಷಾ 11.92 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು. ಈ ವಿಭಾಗದಲ್ಲಿ ಭಾರತದವರೇ ಆದ ಅಭಿನಯ ರಾಜರಂಜನ್‌ 11.77 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಪುರುಷರ 800 ಮೀ. ಓಟದಲ್ಲಿ ಕರ್ನಾಟಕದ ಬೋಪಣ್ಣ ಕಾಳಪ್ಪ 1 ನಿಮಿಷ 50.45 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು. ಭಾರತದ ವಿನೋದ್‌ ಕುಮಾರ್‌ ಬೆಳ್ಳಿ ಗೆದ್ದರೆ, ಶ್ರೀಲಂಕಾದ ಶವಿಂದು ಚಿನ್ನ ಗೆದ್ದರು.

Related Articles