Friday, October 25, 2024

ಮಿಂಚಿದ ಮಿರಾಜ್, ದಬಾಂಗ್ ಡೆಲ್ಲಿಗೆ ಜಯ

ಸ್ಪೋರ್ಟ್ಸ್ ಮೇಲ್ ವರದಿ

ಮಿರಾಜ್ ಶೇಖ್ ಅವರ ಅದ್ಭುತ ಆಟದ ನೆರವಿನಿಂದ ದಬಾಂಗ್ ಡೆಲ್ಲಿ 37-31 ಅಂತರದಲ್ಲಿ  ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯ ಗಳಿಸಿದೆ. ಇದರೊಂದಿಗೆ ಬೆಂಗಾಲ್ ವಾರಿಯರ್ಸ್ ತಂಡದ ನಿರಂತರ ಓಟಕ್ಕೆ ಬ್ರೇಕ್ ಬಿದ್ದಿದೆ. ಬೆಂಗಾಲ್ ವಾರಿಯರ್ಸ್ ಪರ ಮಣಿಂದರ್ ಸಿಂಗ್ 9 ಅಂಕ ಗಳಿಸಿ ತಂಡದ ಪರ  ಉತ್ತಮ ಪ್ರದರ್ಶನ ತೋರಿದರು.

ಈ ಫಲಿತಾಂಶ ಇತ್ತಂಡಗಳ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ. ಏಕೆಂದರೆ ಇತ್ತಂಡಗಳು ಈಗಾಗಲೇ ಪ್ಲೇ ಆಫ್  ಹಂತ ತಲುಪಿವೆ.  ದಬಾಂಗ್ ಡೆಲ್ಲಿ ಈಗಾಗಲೇ 22 ಪಂದ್ಯಗಳನ್ನು ಆಡಿ 68 ಅಂಕಗಳೊಂದಿಗೆ ಲೀಗ್ ಹಂತದ ಪಂದ್ಯಗಳನ್ನು ಮುಗಿಸಿದೆ.
ಮೊದಲ ನಿಮಿಷದಲ್ಲೇ ಮಣಿಂದರ್ ಸಿಂಗ್ ಸೂಪರ್ ರೈಡ್ ಸಧನೆ ಮಾಡುವ ಮೂಲಕ ಬೆಂಗಾಲ್ ವಾರಿಯರ್ಸ್‌ಗೆ  ಉತ್ತಮ ಆರಂಭ  ಕಲ್ಪಿಸಿದರು. ತಂಡ 3-0 ಅಂತರದಲ್ಲಿ ಮುನ್ನಡೆ ಕಂಡಿತು. ಆರಂಭಿಕ ಆಘಾತ ಅನುಭವಿಸಿದ ದಿಲ್ಲಿ ನಂತರ ಚೇತರಿಸಿಕೊಂಡು 3-4ರಲ್ಲಿ ಪಂದ್ಯ ಸಾಗಿತು. ಪ್ರಥಮಾರ್ಧದಲ್ಲಿ ಪಂದ್ಯ ಅತ್ಯಂತ ರೋಚಕವಾಗಿಯೇ ನಡೆಯಿತು. ಬಂಗಾಳ ತಂಡ 10-8ರಲ್ಲಿ ಮೈಲುಗೈ ಸಾಧಿಸಿತ್ತು. 12ನೇ ನಿಮಿಷದಲ್ಲಿ ಪಂದ್ಯ 10-10ರಲ್ಲಿ ಸಮಬಲಗೊಂಡಿತು. ಮಿರಾಜ್ ಶೇಕ್ ಮಿಂಚಿನ ರೈಡ್ ಮೂಲಕ ದಿಲ್ಲಿ ಮೇಲುಗೈ ಸಾಧಿಸಿತು. ಪ್ರಥಮಾರ್ಧದಲ್ಲಿ  ದಿಲ್ಲಿ 20-14ರಲ್ಲಿ ಮುನ್ನಡೆಯಿತು.
ದ್ವಿತಿಯಾರ್ಧದಲ್ಲಿ  ಬೆಂಗಾಲ್ ವಾರಿಯರ್ಸ್ ದಿಟ್ಟ ತಿರುಗೇಟು ನೀಡಿತು. ಆರು ನಿಮಿಷಗಳ ಆಟದಲ್ಲಿ ಎಂಟು ಅಂಕ ಗಳಿಸಿತು. ಪರಿಣಾಮ 26ನೇ ನಿಮಿಷದಲ್ಲಿ ಪಂದ್ಯ 22-22ರಲ್ಲಿ ಸಮಬಲ.  33ನೇ ನಿಮಿಷದಲ್ಲಿ ಮಿರಾಜ್ ಶೇಖ್ ರೈಡಿಂಗ್‌ನಲ್ಲಿ ಎರಡು ಅಂಕ ಗಳಿಸುವ ಮೂಲಕ ದಿಲ್ಲಿ 26-24೪ರಲ್ಲಿ ಮೇಲುಗೈ ಸಾಧಿಸಿತು.  39ನೇ ನಿಮಿಷದಲ್ಲೂ ಪಂದ್ಯ 31-31ರಲ್ಲಿ ಸಮಬಲಗೊಂಡಿತ್ತು. ಆದರೆ ಮಿರಾಜ್ ಶೇಖ್ ಅಂತಿಮ ಕ್ಷಣದಲ್ಲಿ ಗಳಿಸಿದ ಅಂಕ ದಬಾಂಗ್ ತಂಡಕ್ಕೆ ಜಯ ತಂದುಕೊಟ್ಟಿತು.

Related Articles