Thursday, October 10, 2024

ಕಿಕ್‌ ಬಾಕ್ಸಿಂಗ್‌: ನಾಕೌಟ್‌ಗೆ ಬಲಿಯಾದ ಮೈಸೂರಿನ ಫೈಟರ್‌ ನಿಖಿಲ್‌

ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ನಡೆದ K1 ಕಿಕ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೈಸೂರಿನ ಬಾಕ್ಸರ್‌ ನಿಖಿಲ್‌ ಸಾವನ್ನಪ್ಪಿದ್ದಾರೆ.

K1 ಕಿಕ್‌ ಬಾಕ್ಸಿಂಗ್‌ ಅಸೋಸಿಯೇಷನ್‌ ಜುಲೈ 9 ಮತ್ತು 10ರಂದು ಕಿಕ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ಆಯೋಜಿಸಿತ್ತು. ಮೈಸೂರಿನ ವಿಕ್ರಮ್‌ ಮೈಸೂರು ನಾಗರಾಜ್‌ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ನಿಖಿಲ್‌ ಉತ್ತಮ ಫೈಟರ್‌ ಕೂಡ ಹೌದು. ಆದರೆ ನಾಕೌಟ್‌ಗೆ ತುತ್ತಾದ ನಿಖಿಲ್‌ ಮತ್ತೆ ಚೇತರಿಸಿಕೊಳ್ಳದೆ ಸಾವಿಗೆ ಶರಣಾದರು.

ಸರಕಾರದ ಗಮನ ಅಗತ್ಯ: ಕ್ರೀಡಾ ಇಲಾಖೆಯ ಮಾನ್ಯತೆ ಪಡೆಯದೆ, ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಯ ಅನುಮತಿ ಇಲ್ಲದೆ, ತಜ್ಞರಿಂದ ತರಬೇತಿ ಪಡೆಯದೆ ಕಿಕ್‌ ಬಾಕ್ಸಿಂಗ್‌ ತರಬೇತಿ ನೀಡುವ ಕೋಚ್‌ಗಳು ಮತ್ತು ತರಬೇತಿ ಕೇಂದ್ರಗಳ ಕಡಿವಾಣದ ಅಗತ್ಯವಿದೆ. ಜೀವಕ್ಕೆ ಅಪಯಾದವಾಗಿರುವ ಈ ಕ್ರೀಡೆಗಳ ಕೂಟವನ್ನು ಆಯೋಜಿಸುವಾಗ ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಬೇಕು.

Related Articles