Thursday, October 10, 2024

ಜನತಾ ಹೆಮ್ಮಾಡಿ ಇದು ಚಾಂಪಿಯನ್ನರಿಗೆ ಮುನ್ನುಡಿ!

ಕುಂದಾಪುರ: Sports teaches us to be together and united: Neeraj Chopra, Olympic Gold medalist

ಅವ್ಯವಸ್ಥೆಯ ವಿರುದ್ಧ ಸೆಟೆದು ನಿಂತು, ತನ್ನದೇ ಆದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ, ಶಿಕ್ಷಣ, ಕಲೆ, ಕ್ರೀಡೆ ಮತ್ತು ಸಂಸ್ಕೃತಿಯನ್ನೇ ಉಸಿರಾಗಿಸಿಕೊಂಡ ಗಣೇಶ್‌ ಮೋಗವೀರ ಅವರ ಸಾರಥ್ಯದ ಸಪರ್ಪಣ್‌ ಎಜ್ಯುಕೇಶನ್‌ ಟ್ರಸ್ಟ್‌ ಕುಂದಾಪುರ ಇದರ ಜನತಾ ಸ್ವತಂತ್ರ ಪಿ.ಯು. ಕಾಲೇಜು ಇಂದು ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು ಮಾತ್ರವಲ್ಲ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿ ಮಾದರಿ ಶಿಕ್ಷಣ ಸಂಸ್ಥೆ ಎನಿಸಿದೆ. Janatha Independent PU College Hemmady born to build the champions.

ಕುಂದಾಪುರ ತಾಲೂಕು ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆದ ಕ್ರೀಡಾ ಸ್ಪರ್ಧೆಗಳಲ್ಲಿ ಜನತಾ ಪಿಯು ಕಾಲೇಜು ವಿವಿಧ ವಿಭಾಗಳಲ್ಲಿ ಅಗ್ರ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ರಾಜ್ಯ ಕಂಡ ಉತ್ತಮ ಕುಸ್ತಿ ಪಟು ಕೃಷ್ಣ ಮೋಗವೀರ, ಹ್ಯಾಂಡ್‌ಬಾಲ್‌ ಮತ್ತು ಸಾಫ್ಟ್‌ಬಾಲ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಭುತ್ವ ಸಾಧಿಸಿರುವ ಕೊಡಗಿನ ಸುನೀತಾ ಎಚ್‌.ಬಿ, ಉತ್ತಮ ಕಬಡ್ಡಿ ಆಟಗಾರರನ್ನು ಸಿದ್ಧಗೊಳಿಸಿದ ಉಮೇಶ್‌ ನಾಯ್ಕ್‌, ರಾಷ್ಟ್ರೀಯ ಜೂನಿಯರ್‌ ವಾಲಿಬಾಲ್‌ ತಂಡವನ್ನು ಪ್ರತಿನಿಧಿಸಿ ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದ ಮೊಹಮ್ಮದ್‌ ಸಮೀರ್‌ ಅವರನ್ನೊಳಗೊಂಡ ದೈಹಿಕ ಶಿಕ್ಷಣ ತರಬೇತುದಾರರ ತಂಡ ಜನತಾ ಪಿಯು ಕಾಲೇಜಿನ ಕ್ರೀಡಾ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದೆ.

ಮೂರೇ ವರುಷ, ನೂರಾರು ಹರುಷ: ಜನತಾ ಸ್ವತಂತ್ರ ಪಿಯು ಕಾಲೇಜು ಆರಂಭಗೊಂಡು ಮೂರು ವರ್ಷ ಕಳೆದಿರುವುದು ಅಷ್ಟೇ, ಆದರೆ ಆಗಲೇ ನೂರಾರು ಜಯದ ಹೆಜ್ಜೆಗಳು ಇಲ್ಲಿ ಮೂಡಿವೆ. ಇದುವರೆಗೂ ನೂರಕ್ಕೂ ಹೆಚ್ಚು ಮಕ್ಕಳು ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. ಜನತಾ ಯಶಸ್ಸಿನ ನಡೆಯಲ್ಲಿ ಸಿಂಹಾವಲೋಕನ ಮಾಡಿದಾಗ ಅಲ್ಲಿ ಹಲವಾರು ಪ್ರತಿಭೆಗಳು ಈ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಪ್ರಥಮ ಪಿಸಿಎಂಬಿಯ ವಿದ್ಯಾರ್ಥಿ ಚಾಯಾ ಸಿ. ಪೂಜಾರಿ ಚೆಸ್‌ನಲ್ಲಿ ರಾಜ್ಯಮಟ್ಟದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಜನತಾ ಕಳೆದ ಎರಡು ವರ್ಷಗಳಿಂದ ಪ್ರಭುತ್ವ ಸಾಧಿಸುತ್ತಿದೆ. 1500 ಮೀ. ಓಟದಲ್ಲಿ ಉನ್ನತಿ ಶೆಟ್ಟಿ ಬೆಳ್ಳಿ ಗೆದ್ದಿದ್ದಾರೆ. ಡಿಸ್ಕಸ್‌ ಎಸೆತದಲ್ಲಿ ಅಭಿಜ್ಞಾ ಕಂಚಿನ ಪದಕದ ಸಾಧನೆ ಮಾಡಿದ್ದಾರೆ. ಜಾವೆಲಿನ್‌ ಎಸೆತದಲ್ಲಿ ಆರ್ತಿಕಾ ಶೆಟ್ಟಿ ಕಂಚಿನ ಪದಕದ ಸಾಧನೆ ಮಾಡಿದರೆ, ಸೂರಜ್‌ 800 ಮತ್ತು 400 ಮೀ. ಓಟದಲ್ಲಿ ಬೆಳ್ಳಿಯನ್ನು ಬೆಳಗಿದ್ದಾರೆ. ಆರ್ಯ ಶಾಟ್‌ಪಟ್‌ನಲ್ಲಿ ಮೂರನೇ ಸ್ಥಾನದ ಸಾಧನೆ ಮಾಡಿದ್ದಾರೆ. 3000 ಮತ್ತು 1500 ಮೀ. ಓಟದಲ್ಲಿ ಶಿವಾನಿ ಅನುಕ್ರವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ.

ಕಬಡ್ಡಿಯಲ್ಲಿ ಪ್ರಭುತ್ವ: ಪಿಯು ಶಿಕ್ಷಣ ಮಂಡಳಿ ಅಯೋಜಿಸಿದ ಕುಂದಾಪುರ ತಾಲೂಕು ಮಟ್ಟದ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಜನತಾ ಹುಡುಗರು ರನ್ನರ್‌ ಅಪ್‌ ಟ್ರೋಫಿಯನ್ನು ಗೆದ್ದಿರುತ್ತಾರೆ. ಆಯುಶ್‌ ಜಿ, ಸಾಥ್ವಿಕ್‌, ಪ್ರಜ್ವಲ್‌ ಮತ್ತು ಅನುಲ್‌ ಬಾಲಕರ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಆಡಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಉನ್ನತಿ ಶೆಟ್ಟಿ ಮತ್ತು ಅಮಿಶಾ ಚೌಧರಿ ಜಿಲ್ಲಾ ಮಟ್ಟದಲ್ಲಿ ಆಡಿರುತ್ತಾರೆ. ರಾಜ್ಯ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಜನತಾದ ಅಮಿಶಾ ಚೌಧರಿ, ಪ್ರಜ್ವಲ್‌ ಮತ್ತು ಸಾಥ್ವಿಕ್‌ ಭಾಗಿಯಾಗಿ ಉತ್ತಮ ಪ್ರದರ್ಶನ ತೋರಿರುತ್ತಾರೆ. ಕುಂದಾಪುರದ ಸೆವೆನ್‌ ರಾಕರ್ಸ್‌ ತಂಡ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಜನತಾ ಆಟಗಾರರು ಪಾಲ್ಗೊಂಡು ರನ್ನರ್ಸ್‌ ಅಪ್‌ ಟ್ರೋಫಿಯನ್ನು ಗೆದ್ದಿದ್ದಾರೆ.

ವಾಲಿಬಾಲ್‌ನಲ್ಲಿ ಜನತಾ ಮಿಂಚು: ಮೊಹಮ್ಮದ್‌ ಸಮೀರ್‌ ಅವರಲ್ಲಿ ಪಳಗಿರುವ ಜನತಾ ವಾಲಿಬಾಲ್‌ ಆಟಗಾರರು ಸಿಕ್ಕ ಅವಕಾಶದಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಜಿಲ್ಲಾ ಮಟ್ಟದ ವಾಲಿಬಾಲ್‌ ಟೂರ್ನಿಯಲ್ಲಿ ಜನತಾ ಪಿಯು ಕಾಲೇಜಿನ ವಿನೂತ್‌ ಹಾಗೂ ಗಣೇಶ್‌ ಕುಂದಾಪರು ತಾಲೂಕು ತಂಡವನ್ನು ಪ್ರತಿನಿಧಿಸಿರುತ್ತಾರೆ. ಪದವಿಪೂರ್ವ ಶಿಕ್ಷಣ ಮಂಡಳಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಫುಟ್ಬಾಲ್‌ ಟೂರ್ನಿಯಲ್ಲಿ ಕಾಲೇಜಿನ ಚೇತನ್‌ ಖಾರ್ವಿ ಕುಂದಾಪುರ ತಾಲೂಕನ್ನು ಪ್ರತಿನಿಧಿಸಿರುತ್ತಾರೆ. ಉಡುಪಿಯಲ್ಲಿ ಪದವಿಪೂರ್ವ ಶಿಕ್ಷಣ ಮಂಡಳಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಜನತಾ ಪ್ರತಿನಿಧಿ ಆರ್ಯ ಮೊಗವೀರ ಚಿನ್ನದ ಪದಕ ಗೆದ್ದು ಶಾಲೆಗೆ ಕೀರ್ತಿ ತಂದಿದ್ದಾರೆ.

ಉತ್ತಮ ಕುಸ್ತಿ ತರಬೇತುದಾರ ಕೃಷ್ಣ ಮೊಗವೀರ ಅವರಲ್ಲಿ ಪಳಗಿದ ಜನತಾದ ಕುಸ್ತಿಪಟುಗಳು ವಿವಿಧ ವಿಭಾಗದ ಸ್ಪರ್ಧೆಯಲ್ಲಿ ಗೆದ್ದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ರಾಜ್ಯ ಮಟ್ಟದ ಕುಸ್ತಿಯಲ್ಲಿ ಇಲ್ಲಿಯ ಕುಸ್ತಿಪಟುಗಳು ಮಾಡಿದ ಸಾಧನೆ ಸ್ತುತ್ಯರ್ಹ. ಗದಗ ಜಿಲ್ಲಾ ಪಿಯು ಶಿಕ್ಷಣ ಮಂಡಳಿ ಹಾಗೂ ಎಚ್‌ಸಿಇಎಸ್‌ ಪಿಯು ಕಾಲೇಜು ಆತಿಥ್ಯದಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿಯಲ್ಲಿ ಜನತಾ ಕುಸ್ತಿಪಟುಗಳು ಪಾಲ್ಗೊಂಡಿದ್ದು ಕಾಲೇಜಿನ ಕಾಲೇಜಿನ ಶ್ರೀಶಾ ಶೆಟ್ಟಿ 97 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 92 ಕೆಜಿ ವಿಭಾಗದಲ್ಲಿ ಆರ್ಯ ಮೊಗವೀರ ಕಂಚಿನ ಪದಕ ಗೆದ್ದಿದ್ದಾರೆ. 97 ಕೆಜಿ ವಿಭಾಗದಲ್ಲಿ ರೋಹಿತ್‌ ದೇವಾಡಿಗ ಕೂಡ ಕಂಚಿನ ಸಾಧನೆ ಮಾಡಿದ್ದಾರೆ. ರಾಜ್ಯ ಮಟ್ಟದಲ್ಲಿ 7 ಪದಕಗಳನ್ನು ಕುಸ್ತಿ ತಂಡ ಗೆದ್ದಿದೆ. 1 ಬೆಳ್ಳಿ ಹಾಗೂ 6 ಕಂಚಿನ ಪದಕ ಇದರಲ್ಲಿ ಸೇರಿದೆ.

ಕಾಲೇಜಿನ ಚೇತನ್‌ ಖಾರ್ವಿ ತಾಲೂಕು ಮಟ್ಟದ ಥ್ರೋಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕಾಲೇಜನ್ನು ಪ್ರತಿನಿಧಿಸಿ ಜಯ ಸಾಧಿಸಿರುತ್ತಾರೆ. ಚೇತನ್‌ ಖಾರ್ವಿ, ಕೃತಾರ್ಥ್‌, ಸಾಗರ್‌ ಮತ್ತು ಆಶ್ರಿತಾ ಜಿಲ್ಲಾ ಮಟ್ಟದ ಥ್ರೋಬಾಲ್‌ ತಂಡಕ್ಕೆ ಆಯ್ಕೆಯಾಗಿರುತ್ತಾರೆ. ಕಾಲೇಜಿನಲ್ಲಿ ಯೋಗ ಕ್ರೀಡೆಗೂ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತಿದೆ. ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಾಲೇಜಿನ ನಿರೀಕ್ಷಾ ಮತ್ತು ಪ್ರಜ್ಞಾ ಚಿನ್ನದ ಪದಕ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಶಿಕ್ಷಣದ ಜೊತೆಯಲ್ಲಿ ಕ್ರೀಡೆಗೂ ಮಹತ್ವ: ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳು ಕಡಿಮೆ ಅಂಕ ಗಳಿಸುತ್ತಾರೆ ಎಂಬ ಮಾತುಗಳನ್ನು ಜನತಾ ಪಿಯು ಕಾಲೇಜು ಹುಸಿಗೊಳಿಸಿದೆ. ಕಾಲೇಜಿನ ಪ್ರಜ್ವಲ್‌ ಪೂಜಾರಿ ಕ್ರೀಡೆಯಲ್ಲೂ ಪದಕಗಳನ್ನು ಗೆದ್ದು, ಓದಿನಲ್ಲೂ ಅಗ್ರ ಸ್ಥಾನ ಪಡೆದು, ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದು ಈಗ ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಒದುತ್ತಿರುವುದನ್ನು ಇಲ್ಲಿಯ ತರಬೇತುದಾರರು ಸ್ಮರಿಸುತ್ತಾರೆ. ಯಾವುದೇ ಸ್ಪರ್ಧೆ ನಡೆಯುತ್ತಿದ್ದರೂ ಕಾಲೇಜಿನ ಪ್ರಾಂಶುಪಾಲ ಗಣೇಶ್‌ ಮೊಗವೀರ ಅವರು ಪಂದ್ಯಗಳನ್ನು ವೀಕ್ಷಿಸುವುದು ಮಾತ್ರವಲ್ಲ  ಸೋಲಿರಲಿ, ಗೆಲುವಿರಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾರೆ. ಅದೇ ರೀತಿಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಕ್ರೀಡಾಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಈ ಕಾಲೇಜಿನ ಇನ್ನೊಂದು ವಿಶೇಷವೆಂದರೆ ಯಾವುದೇ ಕ್ರೀಡಾಕೂಟಗಳನ್ನು ಆಯೋಜಿಸುವ ಜವಾಬ್ದಾರಿ ನೀಡಿದರೂ ಅತ್ಯಂತ ಸ್ಫೂರ್ತಿಯಿಂದ ಒಪ್ಪಿಕೊಂಡು ಅದನ್ನು ಯಶಸ್ವಿಗೊಳಿಸುತ್ತಾರೆ. ಅತಿಥಿಗಳನ್ನು ಆಹ್ವಾನಿಸುವಾಗ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಆಹ್ವಾನಿಸಿ ಮಕ್ಕಳಲ್ಲಿ ಸ್ಪೂರ್ತಿ ತುಂಬುತ್ತಾರೆ.

20 ಕ್ರೀಡಾ ಸಾಧಕರಿಗೆ ಉಚಿತ ಶಿಕ್ಷಣ!: ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಯನ್ನು ಜನತಾ ಪಿಯು ಕಾಲೇಜಿನ ಆಡಳಿತ ಮಂಡಳಿ ನಿರ್ಧಿಸಿ ಆ ನಿಟ್ಟಿನಲ್ಲಿ ಕಾರ್ಯರೂಪಕ್ಕೂ ತಂದಿದೆ. ಕಳೆದ ಬಾರಿ ಕ್ರೀಡಾ ಕೋಟಾದಡಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ತೀರ್ಮಾನಿಸಿದಾಗ ಸುಮಾರು 125 ಕ್ಕೂ ಹೆಚ್ಚು ಕ್ರೀಡಾ ಸಾಧಕರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅವರು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಬೇರೆ ಕ್ರೀಡಾಪಟುಗಳು ಸಾಧನೆ ಮಾಡಿದ ನಂತರ ಅವರಿಗೆ ಪ್ರವೇಶ ನೀಡಿ ತಮ್ಮ ಬ್ರಾಂಡ್‌ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತವೆ. ಆದರೆ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಚಾಂಪಿಯನ್ನರನ್ನೇ ಸಿದ್ಧಗೊಳಿಸಲಾಗುತ್ತದೆ. ಈ ಕಾರಣಕ್ಕಾಗಿಯೇ ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯಲ್ಲೇ ಜನತಾ ಜನರ ಮನೆ ಮಾತಾಗಿದೆ.

Related Articles