Thursday, March 28, 2024

Dhoni Retirment ಧೋನಿ ಆ ಅದೃಷ್ಟದ ದಿನದಂದೇ ನಿವೃತ್ತಿ ಹೇಳುವರೇ?

ಐದನೇ ಬಾರಿಗೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ Indian Premier League ಟ್ರೋಫಿ ಗೆದ್ದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಸೋಮವಾರ ರಾತ್ರಿ “ಇದು ನಿವೃತ್ತಿ ಘೋಷಿಸಲು ಸೂಕ್ತ ಕಾಲ, ಆದರೆ..” ಎಂದು ಹೇಳಿ ಕ್ರಿಕೆಟ್‌ ಅಭಿಮಾನಿಗಳಲ್ಲಿ ಸಂಭ್ರಮ ಉಂಟು ಮಾಡುವಂತೆ ಮಾಡಿದರು. ಆದರೆ ಆಟಗಾರನಾಗಿ ಧೋನಿಗೆ ಇದು ಕೊನೆಯ ಐಪಿಎಲ್‌. ಘೋಷಣೆಗಾಗಿ ಅವರು ವಿಶೇಷ ದಿನವನ್ನು ಕಾಯುತ್ತಿದ್ದಾರೆ,

ಆ ವಿಶೇಷ ದಿನ ಯಾವುದು ಎಂಬುದು ಮುಖ್ಯ. ಅವರ ಲಕ್ಕಿ ನಂಬರ್‌ 7, ಅವರ ಜೆರ್ಸಿ ನಂಬರ್‌, ಬೈಕ್‌ ನಂಬರ್‌ನಲ್ಲಿ  7 ಇದ್ದೇ ಇರುತ್ತದೆ…. ಅವರ ಹುಟ್ಟಿದ ದಿನವೂ 7. ಅದೂ ಜುಲೈ 7. ಇದೇ ಜುಲೈ 7 ರಂದು ಧೋನಿಗೆ 42 ವರ್ಷ ಪೂರ್ಣಗೊಳ್ಳುತ್ತದೆ. ಆ ದಿನದಂದೇ ಅವರು ಐಪಿಎಲ್‌ಗೆ ವಿದಾಯ ಹೇಳಲಿದ್ದಾರೆ, ಈಗಾಗಲೇ ಟೆಸ್ಟ್‌, ಏಕದಿನ ಮತ್ತು ಅಂತಾರಾಷ್ಟ್ರೀ ಟಿ20 ಮತ್ತು ಇತರ ದೇಶೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಧೋನಿಗೆ ಇನ್ನು ಉಳಿದಿರುವುದು ಚೆನ್ನೈ ಸೂಪರ್‌ ಕಿಂಗ್ಸ್‌ನ ಮೆಂಟರ್‌ ಕೆಲಸ. ತಂಡದ ಸ್ಫೂರ್ತಿಯನ್ನು ಹೆಚ್ಚಿಸುವುದಕ್ಕಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ಆಡಳಿತ ಮಂಡಳಿ ಧೋನಿಯನ್ನು ತಂಡದಿಂದ ಹೊರಗಿಡಲು ಬಯಸದು.

ಭಾರತಕ್ಕೆ ಟಿ20 ವಿಶ್ವಕಪ್‌, ಐಸಿಸಿ 50 ಓವರ್‌ಗಳ ವಿಶ್ವಕಪ್‌ ತಂದಿತ್ತ ಧೋನಿ ಭಾರತ ಕ್ರಿಕೆಟ್‌ ಕಂಡ ಅತ್ಯಂತ ಯಶಸ್ವಿ ನಾಯಕ. ಐಪಿಎಲ್‌ನ ಇತ್ತೀಚಿನ ಋತುಗಳಲ್ಲಿ ಧೋನಿಗೆ ವಯಸ್ಸಾಗಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಇತರ ತಂಡಗಳ ಅಭಿಮಾನಿಗಳು ಹೇಳುತ್ತಿರುವುದನ್ನು ಗಮನಿಸಿರಬಹದು, ಆದರೆ ಗುಜರಾತ್‌ ಜಯಂಟ್ಸ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಶುಭ್ಮನ್‌ ಗಿಲ್‌ ಅವನ್ನು ಧೋನಿ ಸ್ಟಂಪ್‌ ಔಟ್‌ ಮಾಡಿದ ರೀತಿ ಯುವ ವಿಕೆಟ್‌ ಕೀಪರ್‌ಗಳಿಗೆ ಪಾಠ ಕಲಿಸುವಂತಿತ್ತು. ಒಂದು ಕ್ಷಣದಲ್ಲಿ ಗಿಲ್‌ ಏನಾಯಿತೆಂದು ತಿಳಿಯುವಷ್ಟರಲ್ಲಿ ಚೆನ್ನೈ ತಂಡ ಧೋನಿಗೆ ಅಭಿನಂದನೆ ಸಲ್ಲಿಸುತ್ತಿತ್ತು.

“ಕ್ಯಾಪ್ಟನ್‌ ಕೂಲ್‌” ಎಂದೇ ಜನಪ್ರಿಯಗೊಂಡಿರುವ ಧೋನಿ ಅಂಗಣದಲ್ಲಿ ಅಬ್ಬರಿಸುವುದು ತನ್ನ ಪ್ರದರ್ಶನದ ಮೂಲಕ. ಇತ್ತೀಚಿಗೆ ಅವರ ಬ್ಯಾಟ್‌ನಿಂದ ನಿರೀಕ್ಷಿತ ಮಟ್ಟದಲ್ಲಿ ರನ್‌ ಬರುತ್ತಿರಲಿಲ್ಲ ನಿಜ. ಆದರೆ ಯಾರಲ್ಲಿ ರನ್‌ ಗಳಿಸುವ ಸಾಮರ್ಥ್ಯ ಇದೆ ಎಂಬುದು ಧೋನಿಗೆ ಚೆನ್ನಾಗಿ ಗೊತ್ತಿತ್ತು. ಈ ಕಾರಣಕ್ಕಾಗಿ ಎದುರಾಳಿ ತಂಡದ ಬೌಲಿಂಗ್‌ ಶಕ್ತಿಯನ್ನು ಅರಿತು ಬ್ಯಾಟಿಂಗ್‌ ಕ್ರಮಾಂಕವನ್ನು ಬದಲಾಯಿಸುತ್ತಿದ್ದರು. ಭಾರತ ಕ್ರಿಕೆಟ್‌ ತಂಡದ ಆಯ್ಕೆ ಮಂಡಳಿಯಿಂದ ತಿರಸ್ಕರಿಸಲ್ಪಟ್ಟು ಕ್ರಿಕೆಟ್‌ನಿಂದಲೇ ದೂರವಿದ್ದ ಅಜಿಂಕ್ಯಾ ರಹಾನೆ ಅವರಲ್ಲಿ ಆತ್ಮವಿಶ್ವಾಸ ತುಂಬಿ, ಆತ ಮತ್ತೆ ಕ್ರಿಕೆಟ್‌ಗೆ ಮರಳುವಂತಾದದ್ದು ಧೋನಿಯಂಥ ನಾಯಕನಿಂದ.

ಕ್ರಿಕೆಟ್‌ನ ಗ್ರೇಟ್‌ ಫಿನಿಶರ್‌, ಚೆನ್ನೈ ತಂಡದ ತಲೈವಾ ಮಹೇಂದ್ರ ಸಿಂಗ್‌ ಧೋನಿ ಕ್ರಿಕೆಟ್‌ ಅಂಗಣಲ್ಲಿರಲಿ ಅಥವಾ ಹೊರಗಿರಲಿ, ನಾಯಕನಾಗಿರಲಿ, ಇಲ್ಲ ಸಾಮಾನ್ಯ ಆಟಗಾರನಾಗಿರಲಿ ಅವರು ಕ್ರಿಕೆಟ್‌ ಜಗತ್ತಿನ ಆದರ್ಶ ಆಟಗಾರ.

Dhoni will announce his IPL retirement on that lucky day?

Related Articles