Sunday, May 28, 2023

ಐಪಿಎಲ್‌ ಹರಾಜಿನಲ್ಲಿ ಕರ್ನಾಟಕಕ್ಕೆ 60.60 ಕೋಟಿ ರೂ.!!

sportsmail

ಎರಡು ದಿನಗಳ ಕಾಲ ನಡೆದ ಟಾಟಾ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಹಜರಾಜಿನಲ್ಲಿ ಕರ್ನಾಟಕದ 16 ಆಟಗಾರರು ವಿವಿಧ ತಂಡಗಳನ್ನು ಸೇರಿಕೊಂಡಿದ್ದು, ಹರಾಜಿನ ಹಣದಲ್ಲಿ ಒಟ್ಟು 60.60 ಕೋಟಿ ರೂ. ಕರ್ನಾಟಕದ ಈ ಆಟಗಾರರ ಪಾಲಾಗಿದೆ.

ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಾಯಕ ಕೆಎಲ್‌ ರಾಹುಲ್‌ ರಾಜ್ಯದ ಪರ ಅತಿ ಹೆಚ್ಚು ಮೊತ್ತ ಗಳಿಸಿದ ಆಟಗಾರರಾಗಿದ್ದಾರೆ. ಮಯಾಂಕ್‌ ಆಗರ್ವಾಲ್‌ ಪಂಜಾಬ್‌ ಕಿಂಗ್ಸ್‌ ತಂಡದಲ್ಲಿದ್ದು, 12 ಕೋಟಿ ರೂ. ಗಳಿಸಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ಸೇರಿದ ಪ್ರಸಿಧ್‌ ಕೃಷ್ಣ 10 ಕೋಟಿ ರೂ. ಗಳಿಸಿದ್ದು, ರಾಜ್ಯದ ಪರ ಅತಿ ಹೆಚ್ಚು ಮೊತ್ತಕ್ಕೆ ಮಾರಾಟಗೊಂಡ ಮೂರನೇ ಆಟಗಾರರೆನಿಸಿದ್ದಾರೆ.

ವಿವಿಧ ತಂಡಗಳಲ್ಲಿ ಕರ್ನಾಟಕದ ಆಟಗಾರರು:

ಮನೀಶ್‌ ಪಾಂಡೆ, ಲಖನೌ ಸೂಪರ್‌ ಜಯಂಟ್ಸ್‌ (4.60 ಕೋ. ರೂ.),

ಕೆ.ಎಲ್‌. ರಾಹುಲ್‌, ಲಖನೌ ಸೂಪರ್‌ ಜಯಂಟ್ಸ್‌ (17 ಕೋ ರೂ.).

ಕೃಷ್ಣಪ್ಪ ಗೌತಮ್‌, ಲಖನೌ ಸೂಪರ್‌ ಜಯಂಟ್ಸ್‌ (90 ಲಕ್ಷ ರೂ,)

ಪ್ರವೀಣ್‌ ದುಬೆ, ಡೆಲ್ಲಿ ಕ್ಯಾಪಿಟಲ್ಸ್‌ (50 ಲಕ್ಷ ರೂ.)

ಅಭಿನವ್‌ ಮನೋಹರ್‌, ಗುಜರಾತ್‌ ಟೈಟಾನ್ಸ್‌, (2.60 ಕೋ. ರೂ.)

ಮಯಾಂಕ್‌ ಅಗರ್ವಾಲ್‌, ಪಂಜಾಬ್‌ ಕಿಂಗ್ಸ್‌, (12 ಕೋ. ರೂ.)

ದೇವದತ್ತ ಪಡಿಕ್ಕಲ್‌, ರಾಜಸ್ಥಾನ್‌ ರಾಯಲ್ಸ್‌ (7.75ಕೋ ರೂ.)

ಕೆ.ಸಿ. ಕಾರಿಯಪ್ಪ, ರಾಜಸ್ಥಾನ್‌ ರಾಯಲ್ಸ್‌ (30 ಲಕ್ಷ ರೂ,)

ಪ್ರಸಿಧ್‌ ಕೃಷ್ಣ, ರಾಜಸ್ಥಾನ್‌ ರಾಯಲ್ಸ್‌, (10 ಕೋ. ರೂ.)

ಕರುಣ್‌ ನಾಯರ್‌, ರಾಜಸ್ಥಾನ್‌ ರಾಯಲ್ಸ್‌, (1.40 ಕೋ. ರೂ.)

ಸಮರ್ಥ್‌ ರವಿಕುಮಾರ್‌, ಸನ್‌ರೈಸರ್ಸ್‌ ಹೈದರಾಬಾದ್‌ (20ಲಕ್ಷ ರೂ,)

ಜಗದೀಶ್‌ ಸುಚಿತ್‌, ಸನ್‌ರೈಸರ್ಸ್‌ ಹೈದರಾಬಾದ್‌ (20 ಲಕ್ಷ ರೂ,)

ಶ್ರೇಯಸ್‌ ಗೋಪಾಲ್‌, ಸನ್‌ರೈಸರ್ಸ್‌ ಹೈದರಾಬಾದ್‌, (70 ಲಕ್ಷ ರೂ.)

ರಾಬಿನ್‌ ಉತ್ತಪ್ಪ, ಚೆನ್ನೈ ಸೂಪರ್‌ ಕಿಂಗ್ಸ್‌, (2 ಕೋಟಿ ರೂ.)

ಅನೀಶ್ವರ್‌ ಗೌತಮ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, (20 ಲಕ್ಷ ರೂ.)

ಲವ್‌ನಿತ್‌ ಸಿಸೋಡಿಯಾ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, (20 ಲಕ್ಷ ರೂ,)

Related Articles