Friday, December 13, 2024

IPL 2023 opening: CSK vs GT ಪಂದ್ಯದ ದಿನಾಂಕ, ಸಮಯ, ತಂಡ, ಲೈವ್ ಸ್ಟ್ರೀಮ್ ವಿವರಗಳು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಆರಂಭಿಕ ಪಂದ್ಯವು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ನಾಲ್ಕು ಬಾರಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ (IPL 2023 opening). ಮಾರ್ಚ್ 31, ಶುಕ್ರವಾರದಂದು ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ IPL 2023 ರ ಉದ್ಘಾಟನಾ ಸಮಾರಂಭದ ನಂತರ CSK vs GT ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ಈ ಹಿಂದೆ ನಾಲ್ಕು ಬಾರಿ ಗೆದ್ದಿದ್ದರೂ ಕೂಡ ಐಪಿಎಲ್ 2022 ಅವರಿಗೆ ನಿರಾಸಾದಾಯಕವಾಗಿತ್ತು . ಏಕೆಂದರೆ ಸಿಎಸ್ಕೆ ತಂಡ ಐಪಿಎಲ್ 2022 ಅಂಕಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದಿದೆ. ಆದಾಗ್ಯೂ ಬೆನ್ ಸ್ಟೋಕ್ಸ್, ರವೀಂದ್ರ ಜಡೇಜಾ ಮತ್ತು ಮೊಯಿನ್ ಅಲಿ ಸೇರಿದಂತೆ ಐಪಿಎಲ್ 2023 ನಲ್ಲಿ ಸಿಎಸ್ಕೆ ಉತ್ತಮ ಆಲ್ರೌಂಡರ್ಗಳನ್ನು ಹೊಂದಿದೆ.

ಇನ್ನೂ ಇಂದು ಸಂಜೆ 6 ಗಂಟೆಗೆ ಆರಂಭವಾಗುವ ಪಂದ್ಯಕ್ಕೂ ಮುನ್ನ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದ್ದು (IPL 2023 opening), ಪಂದ್ಯದ ಲೈವ್-ಸ್ಟ್ರೀಮಿಂಗ್ ವಿವರಗಳು ಇಲ್ಲಿವೆ.

CSK vs GT 1 ನೇ ಪಂದ್ಯ IPL 2023 ಯಾವಾಗ ? : ಶುಕ್ರವಾರ, 31 ಮಾರ್ಚ್

IPL 2023 ರ ಮೊದಲ ಪಂದ್ಯದ ಸಮಯ : 7:30 PM,  7 PM ಕ್ಕೆ ಟಾಸ್.

IPL 2023 ರ CSK vs GT 1 ನೇ ಪಂದ್ಯ ನಡೆಯುವ ಸ್ಥಳ : ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.

IPL 2023 ರ CSK vs GT 1 ನೇ ಪಂದ್ಯವನ್ನು ಟಿವಿಯಲ್ಲಿ ನೋಡಲಿಚ್ಚಿಸುವವರು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ನಲ್ಲಿ ನೋಡಬಹುದು

IPL 2023 ರ ಮೊದಲ ಪಂದ್ಯವನ್ನು ನೀವು ಆನ್ಲೈನ್ನಲ್ಲಿ ವೀಕ್ಷಿಸುವವರು ಜಿಯೋ ಸಿನಿಮಾದಲ್ಲಿ ನೋಡಬಹುದು

CSK vs GT ಪೂರ್ಣ ತಂಡಗಳು –

ಚೆನ್ನೈ ಸೂಪರ್ ಕಿಂಗ್ಸ್ ತಂಡ:

 ಬೆನ್ ಸ್ಟೋಕ್ಸ್, ದೀಪಕ್ ಚಾಹರ್, ಎಂಎಸ್ ಧೋನಿ, ಮೊಯಿನ್ ಅಲಿ, ಅಂಬಟಿ ರಾಯುಡು, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ಮಿಚೆಲ್ ಸ್ಯಾಂಟ್ನರ್, ರಾಜವರ್ಧನ್ ಹಂಗರ್ಗೇಕರ್, ಪ್ರಶಾಂತ್ ಸೋಲಂಕಿ, ಡೆವೊನ್ ಕಾನ್ವೇ, ಕೈಲ್ ಜೇಮಿಸನ್, ಮಹೇಶ್ ತೀಕ್ಷಣ, ನಿಶಾಂತ್ ಸಿಂಧನ, ನಿಶಾಂತ್ ಸಿಂಧನ್ ಡ್ವೈನ್ ಪ್ರಿಟೋರಿಯಸ್, ಅಜಯ್ ಮಂಡಲ್, ಸುಭ್ರಾಂಶು ಸೇನಾಪತಿ, ಆಕಾಶ್ ಸಿಂಗ್, ಸಿಮರ್ಜೀತ್ ಸಿಂಗ್, ಮಥೀಶ ಪತಿರಾನ, ಭಗತ್ ವರ್ಮಾ, ಶೇಕ್ ರಶೀದ್, ತುಷಾರ್ ದೇಶಪಾಂಡೆ.

ಇದನ್ನೂ ಓದಿ: IPL 2023 CSK vs GT: ಮುಖೇಶ್ ಚೌಧರಿ ಬದಲಿಗೆ ಸಿಎಸ್ಕೆ ಸೇರಿದ ಆಕಾಶ್ ಸಿಂಗ್

ಗುಜರಾತ್ ಟೈಟಾನ್ಸ್ ತಂಡ:

ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ದರ್ಶನ್ ಸಂಗ್ವಾನ್, ದರ್ಶನ್ ಸಂಗ್ವಾನ್ ನಲ್ಕಂಡೆ, ಜಯಂತ್ ಯಾದವ್, ಆರ್ ಸಾಯಿ ಕಿಶೋರ್, ನೂರ್ ಅಹ್ಮದ್, ಕೇನ್ ವಿಲಿಯಮ್ಸನ್, ಒಡಿಯನ್ ಸ್ಮಿತ್, ಕೆಎಸ್ ಭರತ್, ಶಿವಂ ಮಾವಿ, ಉರ್ವಿಲ್ ಪಟೇಲ್, ಜೋಶುವಾ ಲಿಟಲ್, ಮೋಹಿತ್ ಶರ್ಮಾ.

Related Articles