Wednesday, December 6, 2023

IPL 2023: ಆರ್ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋಗೆ ಪಂಜಾಬ್ ಕಿಂಗ್ಸ್ ಸವಾಲು

ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂದು ಡಬಲ್ ಧಮಾಕಾ. ಒಂದು ಪಂದ್ಯದಲ್ಲಿ ಕನ್ನಡಿಗರ ಹಾಟ್ ಫೇವರೇಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore)ತಂಡ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ಎದುರಿಸಲಿದೆ (IPL 2023). ಇನ್ನೊಂದು ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಆರ್ಸಿಬಿ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ಇಂದು ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗಲಿದ್ದು, ಲಕ್ನೋ ಹಾಗೂ ಪಂಜಾಬ್ ವಿರುದ್ದದ ಪಂದ್ಯ ರಾತ್ರಿ 7:30ಕ್ಕೆ ನಡೆಯಲಿದೆ.

ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಅಭಿಯಾನ ಆರಂಭಿಸಿದೆ (IPL 2023). ಆದರೆ ಲಕ್ನೋ ಹಾಗೂ ಕೋಲ್ಕತ್ತಾ ವಿರುದ್ದ ಸತತ ಸೋಲನ್ನು ಅನುಭವಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿದೆ. ಇನ್ನೊಂದೆಡೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ನಾಲ್ಕು ಸತತ ಸೋಲುಗಳನ್ನು ಕಂಡಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ದದ ಪಂದ್ಯ ಮಹತ್ವದ್ದಾಗಿದೆ.

ಇನ್ನೊಂದು ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಬಾರಿಯ ಐಪಿಎಲ್ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈಗಾಗಲೇ ಆಡಿರುವ ೪ ಪಂದ್ಯಗಳ ಪೈಕಿ ೩ ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ರಶಸ್ತಿ ಗೆಲ್ಲುವ ಹಾಟ್ಫೇವರೇಟ್ ಎನಿಸಿಕೊಂಡಿದೆ. ಇನ್ನು ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಈಗಾಗಲೇ ನಾಲ್ಕು ಪಂದ್ಯಗಳ ಪೈಕಿ ಎರಡು ಪಂದ್ಯಗಳನ್ನು ಗೆದ್ದು, ಎರಡು ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಒಂದೊಮ್ಮೆ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಲಕ್ನೋ ಗೆಲುವು ದಾಖಲಿಸಿದ್ರೆ ಅಗ್ರಸ್ಥಾನಕ್ಕೇರಲಿದೆ.

 ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಕೊನೆಯದಾಗಿ ಮೂರು ಪಂದ್ಯಗಳ ಪೈಕಿ ಮೂರರಲ್ಲಿಯೂ ಗೆಲುವು ದಾಖಲಿಸಿಎ. ಇನ್ನು ಲಕ್ನೋ ಸೂಪರ್ ಜೈಂಟ್ಸ್ ಕಳೆದ ಋತುವಿನಲ್ಲಿ ಪಂಜಾಬ್ ವಿರುದ್ದ ಒಂದು ಬಾರಿ ಗೆಲುವು ದಾಖಲಿಸಿತ್ತು. ವನಿಂದು ಹಸರಂಗ ಆರ್ಸಿಬಿಗೆ ಸೇರ್ಪಡೆಗೊಂಡಿದ್ದು, ನ್ಯೂಜಿಲೆಂಡ್ನ ಶ್ರೀಲಂಕಾ ಪ್ರವಾಸವನ್ನು ಪೂರ್ಣಗೊಳಿಸಿದ ನಂತರ ಆಯ್ಕೆಗೆ ಲಭ್ಯವಾಗಲಿದ್ದಾರೆ. ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್ವುಡ್ ಕೂಡ ಆರ್ಸಿಬಿ ಪಾಳಯ ಸೇರಿಕೊಂಡಿದ್ದಾರೆ. ಆದರೆ ಅವರು ಇಂದಿನ ಪಂದ್ಯಕ್ಕೆ ಲಭ್ಯವಾಗಲಿದ್ದಾರಾ ಅನ್ನೋದು ಇನ್ನೂ ಖಚಿತವಾಗಿಲ್ಲ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್ರೌಂಡರ್ ಆಟಗಾರ ಮಿಚೆಲ್ ಮಾರ್ಷ ಮದುವೆಯ ನೆಪದಲ್ಲಿ ದೂರವಾಗಿದ್ದು, ಇದೀಗ ತಂಡವನ್ನು ಕೂಡಿಕೊಂಡಿದ್ದಾರೆ. ಇಂದಿನ ಪಂದ್ಯದಲ್ಲಿ ಮಾರ್ಷ್ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. 

ಇನ್ನು ಲಕ್ನೋ ಸೂಪರ್ ಜೈಂಟ್ಸ್ ಪರ ರಾಹುಲ್ ಜೊತೆಗೆ ಕ್ವಿಂಟರ್ ಡಿಕಾಕ್ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಇನ್ನೊಂದೆಡೆಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಕಳೆದ ಪಂದ್ಯವನ್ನು ಕಳೆದುಕೊಂಡಿರುವ ಲಿಯಾಮ್ ಲಿವಿಂಗ್ಸ್ಟೋನ್ ಸ್ನಾಯು ಸೆಳೆತದಿಂದಾಗಿ ಕಳೆದ ಪಂದ್ಯವನ್ನು ಕಳೆದುಕೊಂಡಿದ್ದು, ಇಂದಿನ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

ಪಿಚ್ ರಿಪೋರ್ಟ್ : 

RCB vs DC IPL 2023: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ಎರಡು ಐಪಿಎಲ್ ಪಂದ್ಯಗಳಲ್ಲಿ ಸ್ಪಿನ್ನರ್ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಮಧ್ಯಾಹ್ನದ ಪಂದ್ಯವಾಗಿರುವುದರಿಂದ ವೇಗದ ಬೌಲರ್ಗಳಿಗೆ ನೆರವಾಗುವ ಸಾಧ್ಯತೆಯಿದೆ.

LSG vs PBKS: ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡೂ ತಂಡಗಳು ಚೇಸ್ ಹೆಚ್ಚಿನ ಅವಕಾಶವಿದೆ. ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣ ಇರುವುದರಿಂದ ಇಬ್ಬನಿ ಪಂದ್ಯದಲ್ಲಿ ಬಹುಮುಖ್ಯ ಪಾತ್ರವಹಿಸಲಿದೆ.

ಯಾರೆಲ್ಲಾ ಆಡ್ತಾರೆ ಇಂದಿನ ಪಂದ್ಯದಲ್ಲಿ ಪ್ಲೇಯಿಂಗ್ XI

ಆರ್ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ಸಿ), ಮಹಿಪಾಲ್ ಲೊಮೊರೊರ್, ಗ್ಲೆನ್ ಮ್ಯಾಕ್ಸ್ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆ), ವನಿಂದು ಹಸರಂಗಾ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್.

ಡಿಸಿ: ಡೇವಿಡ್ ವಾರ್ನರ್ (ಸಿ), ಪೃಥ್ವಿ ಶಾ, ಮನೀಶ್ ಪಾಂಡೆ, ಮಿಚೆಲ್ ಮಾರ್ಷ್, ರೋವ್ಮನ್ ಪೊವೆಲ್, ಅಕ್ಸರ್ ಪಟೇಲ್, ಲಲಿತ್ ಯಾದವ್, ಅಭಿಷೇಕ್ ಪೊರೆಲ್ (ವಿಕೆ), ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಮುಖೇಶ್ ಕುಮಾರ್.

ಎಲ್ಎಸ್ಜಿ: ಕೆಎಲ್ ರಾಹುಲ್ (ಸಿ), ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಾಕ್), ಜಯದೇವ್ ಉನದ್ಕತ್, ಆಯುಷ್ ಬಡೋನಿ, ಅವೇಶ್ ಖಾನ್, ಮಾರ್ಕ್ ವುಡ್, ರವಿ ಬಿಷ್ಣೋಯ್.

ಇದನ್ನೂ ಓದಿ:ಕಷ್ಟಗಳನ್ನು ಸಿಕ್ಸರ್ಗೆ ಅಟ್ಟುತ್ತ ಬದುಕನ್ನು ಕಟ್ಟಿಕೊಂಡ ರಿಂಕು ಸಿಂಗ್

PBKS: ಪ್ರಭಾಸಿಮ್ರಾನ್ ಸಿಂಗ್, ಶಿಖರ್ ಧವನ್ (c), ಮ್ಯಾಥ್ಯೂ ಶಾರ್ಟ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ (WK), ಸ್ಯಾಮ್ ಕುರಾನ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ಕಗಿಸೊ ರಬಾಡ, ರಿಷಿ ಧವನ್, ಅರ್ಶ್ದೀಪ್ ಸಿಂಗ್.

Related Articles