Thursday, October 10, 2024

Rinku Singh: ಕಷ್ಟಗಳನ್ನು ಸಿಕ್ಸರ್ಗೆ ಅಟ್ಟುತ್ತ ಬದುಕನ್ನು ಕಟ್ಟಿಕೊಂಡ ರಿಂಕು ಸಿಂಗ್

Rinku Singh: ತಂದೆಗೆ ಮನೆಮನೆಗೆ ಗ್ಯಾಸ್ ಸಿಲಿಂಡರ್ ಹಂಚುವ ಕೆಲಸ, ಅಣ್ಣ ರಿಕ್ಷಾ ಚಾಲಕ, 9ನೇ ತರಗತಿಯಲ್ಲಿ ಅನುತ್ತೀರ್ಣನಾದ ಹುಡುಗನಿಗೆ ಕ್ರಿಕೆಟ್ (cricket) ಹೊರತಾಗಿ ಬೇರೆ ದಾರಿ ಇರಲಿಲ್ಲ. ಕೆಲ ಸಮಯ ಕ್ರಿಕೆಟ್ ಕಿಟ್ಗಾಗಿ ನೆಲ ಒರೆಸುವ ಕೆಲಸ ಮಾಡುತ್ತಿದ್ದ, ಆದರೆ ಎಲ್ಲಿಯೂ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಅಭ್ಯಾಸದಲ್ಲಿ ಮುಂದುವರಿದ. ರಣಜಿಯಲ್ಲಿ ಮಿಂಚಿದ, ಐಪಿಎಲ್ನಲ್ಲಿ ಈ ಬಾರಿ 80 ಲಕ್ಷ ರೂ.ಗಳಿಗೆ ಕೆಕೆಆರ್ ಫ್ರಾಂಚೈಸಿ ಪಾಲಾದ.

ತನಗೆ ನೀಡಿದ ಮೊತ್ತಕ್ಕೆ ಮೋಸ ಮಾಡದೆ ತಕ್ಕುದಾದ ಆಟವನ್ನೇ ಆಡಿದ. ಇದು ಬೇರೆ ಯಾರ ಕತೆಯೂ ಅಲ್ಲ. ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಜಯಂಟ್ಸ್ ವಿರುದ್ಧದ ಪಂದ್ಯದ ಕೊನೆಯ ಓವರ್ನಲ್ಲಿ 6 6 6 6 6 ಮೂಲಕ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಜಯ ತಂದುಕೊಟ್ಟು, ಕ್ರಿಕೆಟ್ ಜಗತ್ತಿಗೆ ಅಚ್ಚರಿಯ ಸಂದೇಶ ಸಾರಿದ ಉತ್ತರ ಪ್ರದೇಶದ ರಿಂಕು ಸಿಂಗ್ (Rinku Singh)

ರಿಂಕು ಸಿಂಗ್ ಇದ್ದಕ್ಕಿದ್ದಂತೆ ಹೀರೋ ಆಗಿಲ್ಲ. 2016ರಲ್ಲಿ ಉತ್ತರ ಪ್ರದೇಶದ ಪರ ರಣಜಿ ಕ್ರಿಕೆಟ್ಗೆ ಕಾಲಿಟ್ಟ ರಿಂಕು ಇದುವರೆಗೂ 2875 ರನ್ ಗಳಿಸಿ ಗಮನ ಸೆಳೆದಿದ್ದಾರೆ. ಅಜೇಯ 163 ರನ್ ಗಳಿಸಿ ಉತ್ತರ ಪ್ರದೇಶ ತಂಡದ ಯಶಸ್ಸಿನ ಹಿಂದೆ ಪ್ರಮುಖ ಪಾತ್ರವಹಿಸಿದ್ದಾರೆ. ಆಲಿಘಡ್ನಲ್ಲಿ ಚಿಕ್ಕ ಕೊಠಡಿಯಿಂದ ಕೂಡಿದ್ದ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದರೂ ತನ್ನ ಸ್ಥಿತಿಯನ್ನು ನೋಡಿ ಎಂದೂ ಕೊರಗಲಿಲ್ಲ. ಕ್ರೀಡಾ ಕೋಟಾದಡಿ ಡೆಲ್ಲಿ ಪಬ್ಲಿಕ್ ಸ್ಕೂಲ್ನಲ್ಲಿ ಪ್ರವೇಶ ಸಿಕ್ಕರೂ ಅಲ್ಲಿಯ ಶಿಕ್ಷಣ ಮತ್ತು ಜೀವನ ಶೈಲಿಗೆ ಹೊಂದಿಕೊಳ್ಳಲಾಗದೆ 9ನೇ ತರಗತಿಯಲ್ಲಿ ಅನುತ್ತೀರ್ಣನಾದ. ಆದರೆ ಬದುಕಿನಲ್ಲಿ ಫೇಲ್ ಆಗಲಿಲ್ಲ,

ಬಡತವ ರಿಂಕು ಕುಟುಂಬವನ್ನು ಆವರಿಸಿದ್ದರೂ ಕ್ರಿಕೆಟ್ ಆಟದಲ್ಲಿ ಶ್ರೀಮಂತಿಕೆ ಇದ್ದಿತ್ತು. ದೇಶೀಯ ಟಿ20 ಕ್ರಿಕೆಟ್ನಲ್ಲಿ 1392 ರನ್ ಗಳಿಸಿ ತಾನೊಬ್ಬ ಸ್ಫೋಟಕ ಆಟಗಾರ ಎಂಬುದನ್ನು ಜಗತ್ತಿಗೆ ಸಾರಿದ್ದರು. ಚುಟುಕು ಕ್ರಿಕೆಟ್ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ 79 ಆಗಿದ್ದರೂ 111 ಬೌಂಡರಿ ಹಾಗೂ 60 ಸಿಕ್ಸರ್ ಅವರ ಭವಿಷ್ಯವನ್ನು ರೂಪಿಸಿತ್ತು. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಈ ಶ್ರಮಕ್ಕೆ ತಕ್ಕ ಫಲ ಸಿಕ್ಕಿತು. ಕೆಕೆಆರ್ ಫ್ರಾಂಚೈಸಿ 80 ಲಕ್ಷ ರೂ,ಗಳಿಗೆ ರಿಂಕು ಸಿಂಗ್ ಅವರನ್ನು ಖರೀಸಿದಾಗ ಅವರ ಮನೆಯ ಬಡತನ ನಿವಾರಣೆಯಾಯಿತು. ಈ ಹಿಂದಿನ ಆವೃತ್ತಿಯಲ್ಲಿ ರಿಂಕು ಸಿಂಗ್ಗೆ ಸಿಕ್ಕಿದ್ದು ಕೇವಲ 10 ಲಕ್ಷ ರೂ.

ಇದನ್ನೂ ಓದಿ: RCB ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ: IPL 2023 ರಿಂದ ಪ್ರಮುಖ ಆಟಗಾರ ಔಟ್

“ಕಷ್ಟಗಳು ಬಂದಾಗ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ನಿಮ್ಮ ಗೆಳೆಯರು ಮತ್ತು ಕುಟುಂಬದವರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ. ನೀವು ಯಾವ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೀರೋ ಅದರಲ್ಲಿ ನಿರಂತರ ಶ್ರಮ ವಹಿಸಿ ಒಂದಲ್ಲಾ ಒಂದು ದಿನ ಜಯ ಸಿಕ್ಕೇ ಸಿಗುತ್ತದೆ,” ಎಂದು ಕಷ್ಟದಲ್ಲಿರುವವರಿಗೆ ರಿಂಕು ಸಿಂಗ್ ಕಿವಿ ಮೂತು.

Related Articles