Saturday, February 24, 2024

Rahul Dravid scuba diving: ಮಾಲ್ದೀವ್ಸ್‌ನಲ್ಲಿ‌ ರಾಹುಲ್ ದ್ರಾವಿಡ್‌ ಸ್ಕೂಬಾ ಡೈವಿಂಗ್

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನಲ್ಲಿ ಕ್ರಿಕೆಟಿಗರು ಬ್ಯುಸಿಯಾಗಿದ್ದಾರೆ. ಇತ್ತ ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಮಾಲ್ದೀವ್ಸ್ರ ನಲ್ಲಿ ರಜಾ ದಿನಗಳನ್ನು ಎಂಜಾಯ್‌ ಮಾಡುತ್ತಿದ್ದಾರೆ. ಕ್ರಿಕೆಟ್‌ನಿಂದ ಬಿಡುವು ಪಡೆದಿರುವ ದ್ರಾವಿಡ್‌ ಇದೀಗ ಕುಟುಂಬ ಸದಸ್ಯರ ಜೊತೆಗೆ ಮಾಲ್ದೀವ್ಸ್ ನ ಪ್ರಸಿದ್ದ ತಾಣಗಳಲ್ಲಿ ವಿಹರಿಸುತ್ತಿದ್ದಾರೆ. ಪತ್ನಿ ವಿಜೇತಾ, ಪುತ್ರರಾದ ಸಮಿತ್ ಮತ್ತು ಅನ್ವಯ್ ಜೊತೆ ಮಾಲ್ದೀವ್ಸ್’ನಲ್ಲಿರುವ ದ್ರಾವಿಡ್ ಸ್ಕೂಬಾ ಡೈವಿಂಗ್ ಮಾಡಿ ಗಮನ ಸೆಳೆದಿದ್ದಾರೆ.

ಕ್ರಿಕೆಟ್’ನ ಶ್ರೇಷ್ಠ ವಿದ್ಯಾರ್ಥಿಯಾಗಿರುವ ರಾಹುಲ್ ದ್ರಾವಿಡ್ (Rahul Dravid) ಪ್ರತೀ ದಿನವನ್ನು ಕಲಿಕೆಯೆಂದೇ ಭಾವಿಸುತ್ತಾರೆ. ಹೊಸತನದ ಕಲಿಕೆಯಲ್ಲಿ ದ್ರಾವಿಡ್ ಸದಾ ಮುಂದು. ಇಲ್ಲಿಯವರೆಗೆ ಸ್ಕೂಬಾ ಡೈವಿಂಡ್ ಮಾಡದ ದ್ರಾವಿಡ್, ಮಾಲ್ದೀವ್ಸ್ ಪ್ರವಾಸದಲ್ಲಿ ಹೊಸ ಸಾಹಸ ಮಾಡಿದ್ದಾರೆ. 52ನೇ ವಯಸ್ಸಿನಲ್ಲಿ ದ್ರಾವಿಡ್ ಸ್ಕೂಬಾ ಡೈವಿಂಡ್ ಮಾಡಿರುವ ಚಿತ್ರಗಳನ್ನು ಫ್ಲೀಟ್ ಫೂಟ್ ಅಡ್ವೆಂಟರ್ಸ್ ಸಂಸ್ಥೆ ತನ್ನ ಇನ್’ಸ್ಟಾಗ್ರಾಮ್’ನಲ್ಲಿ ಪೋಸ್ಟ್ ಮಾಡಿದೆ.

ಐಪಿಎಲ್ ಟೂರ್ನಿ ನಡೆಯುತ್ತಿರುವ ಕಾರಣ ಭಾರತ ತಂಡಕ್ಕೆ ಈಗ ಯಾವುದೇ ಅಂತರಾಷ್ಟ್ರೀಯ ಪಂದ್ಯಗಳಿಲ್ಲ. ಹೀಗಾಗಿ ರಾಹುಲ್ ದ್ರಾವಿಡ್ ಕ್ರಿಕೆಟ್’ನಿಂದ ತಾತ್ಕಾಲಿಕ ವಿರಾಮ ಪಡೆದಿದ್ದಾರೆ. ಐಪಿಎಲ್ ಮುಗಿದ ಬೆನ್ನಲ್ಲೇ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ನಲ್ಲಿ (ICC World test championship final) ಆಡಲಿದೆ. ಡಬ್ಲ್ಯೂಟಿಸಿ ಫೈನಲ್ (WTC final) ಪಂದ್ಯ ಜೂನ್ 7ರಂದು ಲಂಡನ್’ನಲ್ಲಿರುವ ಓವಲ್ ಮೈದಾನದಲ್ಲಿ ಆರಂಭವಾಗಲಿದ್ದು, ಕಳೆದ ಬಾರಿಯ ರನ್ನರ್ಸ್ ಅಪ್ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಇದನ್ನೂ ಓದಿ : RCB vs KKR: RCB ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ: IPL 2023 ರಿಂದ ಪ್ರಮುಖ ಆಟಗಾರ ಔಟ್

ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯನ್ನ 2-1ರಲ್ಲಿ ಗೆದ್ದಿದ್ದ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ಸತತ 2ನೇ ಬಾರಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ತಲುಪಿದೆ. 2021ರಲ್ಲಿ ಇಂಗ್ಲೆಂಡ್’ನ ಸೌಥಾಂಪ್ಟನ್ ಮೈದಾನದಲ್ಲಿ ನಡೆದಿದ್ದ ಡಬ್ಲ್ಯೂಟಿಸಿ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ, ನ್ಯೂಜಿಲೆಂಜ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಇದನ್ನೂ ಓದಿ : Kane Williamson : ಗುಜರಾತ್‌ ಟೈಟಾನ್ಸ್‌ಗೆ ಶಾಕ್‌ : ಐಪಿಎಲ್ 2023ನಿಂದ ಹೊರಬಿದ್ದ ನ್ಯೂಜಿಲೆಂಡ್ ಸ್ಟಾರ್ ಕೇನ್ ವಿಲಿಯಮ್ಸನ್

Related Articles