Saturday, July 27, 2024

ಶಮಿಯ ಊರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ!

ಪ್ರಸಕ್ತ ವಿಶ್ವಕಪ್‌ನಲ್ಲಿ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಭಾರತ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅವರ ಊರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ನಿರ್ಮಿಸುವುದಾಗಿ ಉತ್ತರ ಪ್ರದೇಶ ಸರಕಾರ ಹೇಳಿದೆ. International cricket stadium will built in Mohammed Shami’s Village

ಪ್ರಸಕ್ತ ವಿಶ್ವಕಪ್‌ನಲ್ಲಿ ಆಡಿರುವ ಕೇವಲ ಆರು ಪಂದ್ಯಗಳಲ್ಲಿ 23 ವಿಕೆಟ್‌ ಗಳಿಸಿ ಭಾರತ ಜಯದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿರುವ ಶಮಿ, ಸೆಮಿಫೈನಲ್‌ ಪಂದ್ಯದಲ್ಲಿ 7 ವಿಕೆಟ್‌ ಗಳಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಡೆವೋನ್‌ ಕಾನ್ವೆ, ರಚಿನ್‌ ರವೀಂದ್ರ, ಕೇನ್‌ ವಿಲಿಯಮ್ಸನ್‌, ಟಾಮ್‌ ಲಥಾಮ್‌,ಮ ಡೆರಿಲ್‌ ಮಿಚೆಲ್‌, ಟಿಮ್‌ ಸೌದೀ ಹಾಗೂ ಲೋಕಿ ಫರ್ಗ್ಯುಸನ್‌ ಅವರ ವಿಕೆಟ್‌ ಕಬಳಿಸಿ ಐತಿಹಾಸಿಕ ಸಾಧನೆ ಮಾಡಿದ್ದರು.

ಶಮಿ ಅವರ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಅವರು ಶಮಿಯ ಊರಾದ ಅಮ್ರೋಹಾದಲ್ಲಿ ಅಂತಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಿಸುವುದಾಗಿ ಘೋಷಿಸಿದ್ದಾರೆ ಎಂದು ಟೈಮ್ಸ್‌ ನೌ ವರದಿ ಮಾಡಿದೆ.

ಮೊಹಮ್ಮದ್‌ ಶಮಿ ಅವರ ಜನಪ್ರಿಯತೆ ಈಗ ಜಾಗತಿಕ ಮಟ್ಟವನ್ನು ತಲುಪಿದೆ. ಈ ಹಿನ್ನೆಯಲ್ಲಿ ಸಾಧಕನ ಹೆಸರಿನಲ್ಲಿ ಕ್ರೀಡಾಂಗಣ  ನಿರ್ಮಿಸುವುದು ಸೂಕ್ತ ಎಂಬುದು ಆದಿತ್ಯನಾಥ ಸರಕಾರಕ್ಕೆ ಮನವರಿಕೆಯಾಗಿದೆ.

Related Articles