Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಫೈನಲ್‌ನಲ್ಲಿ ರಾಜ್ಯದ ಚೈತ್ರ ಮಿಂಚು:ಭಾತರಕ್ಕೆ ಖೋ ಖೋ ವಿಶ್ವಕಪ್‌

ಹೊಸದಿಲ್ಲಿ: ಕರ್ನಾಟಕದ ಆಟಗಾರ್ತಿ ಮೈಸೂರಿನ ಚೈತ್ರ ಬಿ ಫೈನಲ್‌ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಉತ್ತಮ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗುವುದರೊಂದಿಗೆ ಭಾರತ ವನಿತೆಯರ ತಂಡ ಇಲ್ಲಿ ನಡೆದ ಖೋ ಖೋ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ನೇಪಾಳ ವಿರುದ್ಧ 78-40 ಅಂತರದಲ್ಲಿ ಜಯ ಗಳಿಸಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Indian Women Create History at Kho Kho World Cup 2025 with commanding victory over rivals Nepal

ಮೊದಲ ಅವಧಿಯಲ್ಲಿ ಭಾರತ 34 ಅಂಕಗಳನ್ನು ಗಳಿಸಿ ಮೇಲುಗೈ ಸಾಧಿಸಿತು.ಅಲ್ಲದೆ ನೇಪಾಳ ತಂಡಕ್ಕೆ ಡ್ರೀಮ್‌ ರನ್‌ ಅವಕಾಶ ನೀಡಲಿಲ್ಲ. ನಾಯಕಿ ಪ್ರಿಯಾಂಕ ಇಂಗ್ಲೆ ಉತ್ತಮ ಪ್ರದರ್ಶನ ತೋರಿದರು. ಎರಡನೇ ಆವಧಿಯಲ್ಲಿ ಭಾರತ 24 ಅಂಕಗಳನ್ನು ಗಳಿಸಿತ್ತು.

ಮೂರನೇ ಅವಧಿಯಲ್ಲೂ ಮೇಲುಗೈ ಸಾಧಿಸಿದ ಭಾರತ ತಂಡ ಪ್ರಶಸ್ತಿ ಗೆಲ್ಲುವುದನ್ನು ಖಚಿತಪಡಿಸಿಕೊಂಡಿತು.ಕರ್ನಾಟಕದ ಚೈತ್ರ ಬಿ ಡ್ರೀಮ್‌ ರನ್‌‌ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸುವುದರೊಂದಿಗೆ ಭಾರತ ನಾಲ್ಕನೇ ಅವಧಿಯಲ್ಲಿ 78 ಅಂಕಗಳಿಂದ ಮುನ್ನಡೆಯಿತು.  

ಫೈನಲ್‌ ಪಂದ್ಯದ ಪಂದ್ಯಶ್ರೇಷ್ಠ ಗೌರವಕ್ಕೆ ಭಾರತದ ಚೈತ್ರ ಬಿ ಭಾಜನರಾದರು. ನೇಪಾಳದ ಮನ್ಮತಿ ಧನಿ ಉತ್ತಮ ಡಿಫೆಂಡರ್‌ ಹಾಗೂ ಭಾರತದ ಅನ್ಷು ಕುಮಾರಿ ಉತ್ತಮ ಅಟ್ಯಾಕರ್‌ ಗೌರವಕ್ಕೆ ಪಾತ್ರರಾದರು.


administrator