Saturday, October 5, 2024

ಐಪಿಎಲ್‌ ಬರೇ ಒಂದು ಪಂದ್ಯದ ಬೆಟ್ಟಿಂಗ್‌ ವ್ಯವಹಾರ 3,500 ಕೋಟಿ ರೂ!!!

ಜಗತ್ತಿನ ಅತ್ಯಂತ ಶ್ರೀಮಂತ ಲೀಗ್‌ಗಳಲ್ಲಿ ಒಂದಾಗಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ Indian Premier League 2023ನಿಂದ ಬೆಟ್ಟಿಂಗ್‌ ವ್ಯವಹಾರದ ಸ್ವರ್ಗವಿದ್ದಂತೆ. ಫ್ಯಾಂಟಸಿ ಸ್ಪೋರ್ಟ್ಸ್‌ ಎಂದು ಹೇಳಿಕೊಳ್ಳುವ ಕ್ರೀಡಾ ಕಂಪನೆಗಳೇ ಪ್ರಾಯೋಜಕತ್ವ ನೀಡುತ್ತಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನಿಂದಾಗಿ ಹಲವಾರು ಬೆಟ್ಟಿಂಗ್‌ ಆಪ್‌ಗಳಿಗೆ ಸಗ್ಗದ ಸಿರಿ ಸಿಕ್ಕಂತಾಗಿದೆ. ದೇಶದ ಪೊಲೀಸ್‌ ಇಲಾಖೆ ಈಗಾಗಲೇ ಹಲವಾರು ಬೆಟ್ಟಿಂಗ್‌ ಆಪ್‌ ಹಾಗೂ ಬೆಟ್ಟಿಂಗ್‌ ನಿರತರನ್ನು ಬಂಧಿಸಿದೆ. ಮೂಲವೊಂದರ ಪ್ರಕಾರ ಪಂದ್ಯವೊಂದಕ್ಕೆ 3500 ಕೋಟಿ ರೂ, ಮೊತ್ತದಷ್ಟು ಬೆಟ್ಟಿಂಗ್‌ ವ್ಯವಹಾರ ನಡೆಯುತ್ತಿದೆ ಎಂದು ಅಂದಾಜಿಸಲಾಗಿದೆ.

ಐಪಿಎಲ್‌ 2023ರಲ್ಲಿ ಒಟ್ಟು 14 ತಂಡಗಳಿದ್ದು, ಲೀಗ್‌ ಹಂತ ಸೇರಿ ಒಟ್ಟು 74 ಪಂದ್ಯಗಳು ನಡೆಯಲಿದೆ. ಒಂದು ಪಂದ್ಯದಲ್ಲಿ ಮೊದಲ 6 ಓವರ್‌, 10 ಓವರ್‌ ಹಾಗೂ 20 ಓವರ್‌ ಹೀಗೆ ವಿವಿಧ ಹಂತಗಳಲ್ಲಿ ಬೆಟ್ಟಿಂಗ್‌ ನಡೆಯುತ್ತದೆ. ಒಂದು ಪಂದ್ಯ ಮುಗಿಯುವಾಗ 3500 ಕೋಟಿ ರೂ.ಗಳು ಬೆಟ್ಟಿಂಗ್‌ ದಂದೆಯಲ್ಲಿ ವಿನಿಯೋಗವಾಗುತ್ತದೆ ಎಂದು ಅಂದಾಜಿಸಲಾಗಿದೆ. ವಿವಿಧ ಆಪ್‌ಗಳಲ್ಲಿ ಆಡುವುದು ಮಾತ್ರವಲ್ಲ, ಅನಧಿಕೃತ ಬೆಟ್ಟಿಂಗ್‌ನಲ್ಲೂ ಜನ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಐಪಿಎಲ್‌ ವೇಳೆ ನಡೆಯುವ ಬೆಟ್ಟಿಂಗ್‌ ವ್ಯವಹಾರಕ್ಕೆ ಬಳಸಲಾಗುತ್ತಿರುವ ಹಣದ ಮೊತ್ತವನ್ನು ಗಮನಿಸಿದರೆ ಅದು ಕೆಲವು ರಾಜ್ಯಗಳ ವಾರ್ಷಿಕ ಬಜೆಟ್‌ ಮೀರಿಸುವಂತಿದೆ.

ಡ್ರೀಮ್‌ ಇಲೆವೆನ್‌ ಹೆಸರಿನ ಫ್ಯಾಂಟೆಸಿ ಸ್ಪೋರ್ಟ್ಸ್‌ ಆಪ್‌ ಇಂಡಿಯನ್‌ ಕ್ರಿಕೆಟ್‌ನ ಪ್ರಮುಖ ಪ್ರಾಯೋಜಕತ್ವ ಹೊಂದಿದೆ. ವಿವಿಧ ತಂಡಗಳ ನಾಯಕರೇ ಈ ಬೆಟ್ಟಿಂಗ್‌ ಆಪ್‌ ಡೌನ್‌ಲೋಡ್‌ ಮಾಡಿಕೊಂಡು ಆಡಿ ಎನ್ನುತ್ತಿದ್ದಾರೆ. ಹಣದ ನಷ್ಟ ಆಗಬಹುದು ಎಂಬುದನ್ನು ಅತ್ಯಂತ ವೇಗವಾಗಿ ಹೇಳುತ್ತಾರೆ. ಆದರೆ ಈ ಬೆಟ್ಟಿಂಗ್‌ ಆಪ್‌ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದವರು ಸೋಲನುಭವಿಸಿದ್ದಾರೆ. ಬಳಿಕ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕರು, ಆಟಗಾರರು, ವೀಕ್ಷಕ ವಿವರಣೆಗಾರರು ಎಲ್ಲರೂ ವಿವಿಧ ಬೆಟ್ಟಿಂಗ್‌ ಆಪ್‌ಗಲಳನ್ನು ಡೌನ್‌ಲೋಡ್‌ ಮಾಡಿಕೊಳ್ಳಿ ಎಂದು ಜಾಹೀರಾತುಗಳಲ್ಲಿ ಗಮನ ಸೆಳೆಯುತ್ತಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ Indian Premier League 2023 Betting ಬರೇ ಹಣದ ಮೇಲೆ ನಿಂತಿದೆ. ಇಲ್ಲಿ ಕ್ರಿಕೆಟ್‌ಗೆ ಬೆಲೆ ಇಲ್ಲ.  ಎಲ್ಲವೂ ಹಣ, ಉತ್ತಮವಾಗಿ ಆಡುತ್ತಿದ್ದ ತಂಡವೊಂದು ಇದ್ದಕ್ಕಿದ್ದಂತೆ ಕಳಪೆ ಪ್ರದರ್ಶನ ತೋರುತ್ತದೆ. ಹೀಗಾದಾಗ ಕ್ರಿಕೆಟ್‌ ಅಭಿಮಾನಿಗಳಿಗೆ ಅಚ್ಚರಿಯಾಗುವುದು ಸಹಜ. ಆದರೆ ಬೆಟ್ಟಿಂಗ್‌ ನಿರತರಿಗೆ ಇದು ಅಚ್ಚರಿ ಎನಿಸದು. ಏಕೆಂದರೆ ಆ ಗೆಲ್ಲುವ ತಂಡವನ್ನು ನಂಬಿಕೊಂಡು ಸಹಸ್ರಾರು ಕೋಟಿ ರೂ. ವ್ಯವಹಾರ ನಡೆದಿರುತ್ತದೆ. ಐಪಿಎಲ್‌ನಲ್ಲಿ ಮುಂಬೈ, ಬೆಂಗಳೂರು, ಚೆನ್ನೈ, ಗುಜರಾತ್‌ ಮತ್ತು ಲಖನೌ ತಂಡಗಳು ಕೊನೆಯ ತನಕ ಇರಬೇಕು, ಹಾಗಿದ್ದಲ್ಲಿ ಬೆಟ್ಟಿಂಗ್‌ ಜಗತ್ತಿಗೆ ಸುಗ್ಗಿ. ಬಲಿಷ್ಠ ತಂಡವೊಂದು ಇದ್ದಕ್ಕಿದ್ದಂತೆ ಕಳಪೆ ಪ್ರದರ್ಶನ ತೋರುವುದರ ಹಿಂದೆ ಈ ಎಲ್ಲ ಕತೆ ಇರುತ್ತದೆ.

ಕುದುರೆ ರೇಸ್‌ ಬೆಟ್ಟಿಂಗ್‌ ಲೀಗಲ್‌:

ಭಾರತದಲ್ಲಿ ಕುದುರೆ ಜೂಜು ಮಾತ್ರ ಕಾನೂನು ವ್ಯಾಪ್ತಿಯಲ್ಲಿದೆ. ಇದರಿಂದಾಗಿ ಅಲ್ಲಿ ಜೂಜು ಮುಕ್ತವಾಗಿ ನಡೆಯುತ್ತದೆ. ಆದರೆ ಕ್ರಿಕೆಟ್‌ ಬೆಟ್ಟಿಂಗ್‌ ಅಧಿಕೃತವಲ್ಲ. ಈಗ ಫ್ಯಾಂಟೆಸಿ ಸ್ಪೋರ್ಟ್ಸ್‌ ಹೆಸರು ಹೇಳಿಕೊಂಡು ಹಲವು ಬೆಟ್ಟಿಂಗ್‌ ಆಪ್‌ಗಳು ಎಲ್ಲ ಪಂದ್ಯಗಳನ್ನು ಪಟ್ಟಿಯಲ್ಲಿ ಸೇರಿಸಿಕೊಂಡು ಬೆಟ್ಟಿಂಗ್‌ಗೆ ಬೆಂಬಲ ನೀಡುತ್ತಿವೆ.

23,759 ರೂ.ಗಳಿಗೆ ಐಪಿಎಲ್‌ ಡಿಜಿಟಲ್‌ ಹಕ್ಕನ್ನು ಐದು ವರ್ಷಗಳ ಅವಧಿಗೆ ಪಡೆದ ರಿಲಾಯನ್ಸ್‌ ಈಗ ಮಹಿಳಾ ಕ್ರಿಕೆಟ್‌ಗೂ ಉತ್ತೇಜನ ನೀಡುವ ಉದ್ದೇಶದಿಂದ ಮಹಿಳಾ ಪ್ರೀಮಿಯರ್‌ನಲ್ಲೂ 951 ಕೋಟಿ ರೂ. ವಿನಿಯೋಗಿಸಿದೆ. ಇದರಿಂದ ಮಹಿಳಾ ಕ್ರಿಕೆಟ್‌ಗೆ ಉತ್ತೇಜ ನೀಡಿದಂತಾಗುತ್ತದೆ ನಿಜ, ಅದೇ ವೇಳೆ ಬೆಟ್ಟಿಂಗ್‌ಗೂ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ಬೆಟ್ಟಿಂಗ್‌ನಲ್ಲಿ ಯಾರು ಉತ್ತಮ ಆಡುತ್ತಾರೆಂಬುದು ಮುಖ್ಯವಲ್ಲ. ಯಾರಾದರೊಬ್ಬರು ಗೆದ್ದರೆ ಸಾಕು.

Related Articles