Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಸುಲಭ ಜಯ

ಕೋಲ್ಕತಾ: ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ. Indian defeat England by 7 wicket, Abhishek Sharma Man of the Match

ಟಾಸ್‌ ಗೆದು ಫೀಲ್ಡಿಂಗ್‌ ಆಯ್ದುಕೊಂಡ ಭಾರತ ಪ್ರವಾಸಿ ಇಂಗ್ಲೆಂಡ್‌ ತಂಡವನ್ನು 132 ರನ್‌ಗೆ ಆಲೌಟ್‌ ಮಾಡಿತು. ಅರ್ಷದೀಪ್‌ ಸಿಂಗ್‌ ಟಿ20 ಕ್ರಿಕೆಟ್‌ನಲ್ಲಿ 97ನೇ ವಿಕೆಟ್‌ ಗಳಿಸುವ ಮೂಲಕ ಭಾರತದ ಪರ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಡ್‌ ಪಡೆದ ಬೌಲರ್‌ ಎನಿಸಿದರು. ಇದುವರೆಗೂ ಯಜುವೇಂದ್ರ ಚಹಾಲ್‌ ಅವರ ಹೆಸರಿನಲ್ಲಿ ಈ ದಾಖಲೆ ಇದ್ದಿತ್ತು.

133 ರನ್‌ಗಳ ಜಯದ ಗುರಿ ಹೊತ್ತ ಭಾರತದ ಪರ ಅಭಿಷೇಕ್‌ ಶರ್ಮಾ 79 ರನ್‌ ಗಳಿಸಿ ಜಯದ ರೂವಾರಿ ಎನಿಸಿದರು. 34 ಎಸೆತಗಳನ್ನೆದುರಿಸಿದ ಶರ್ಮಾ ಅವರ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಹಾಗೂ 8 ಸಿಕ್ಸರ್‌ ಸೇರಿತ್ತು. ಇದಕ್ಕೂ ಮುನ್ನ ಸಂಜು ಸ್ಯಾಮ್ಸನ್‌ 20 ಎಸೆತಗಳಲ್ಲಿ 26 ರನ್‌ ಗಳಿಸಿ ಉತ್ತಮ ಆರಂಭ ಕಲ್ಪಿಸಿದ್ದರು. ಭಾರತ 12.5 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಕಳೆದುಕೊಂಡು ಜಯದ ಗುರಿ ತಲುಪಿತು.


administrator