Thursday, October 10, 2024

ಓಲ್ಟೇಜ್‌ ಕಳೆದುಕೊಳ್ಳುತ್ತಿವೆ ಇಂಡೋ-ಪಾಕ್‌ ಪಂದ್ಯಗಳು

ಬೆಂಗಳೂರು: ಭಾರತ ಹಾಕಿ ತಂಡ ಸದ್ಯ ಏಷ್ಯನ್‌ ಹಾಕಿ ಚಾಂಪಿಯನ್‌ಷಿಪ್‌ ಪಂದ್ಯಗಳನ್ನಾಡುತ್ತಿದೆ. ಭಾರತ ತಂಡ ಇತರ ದೇಶಗಳ ವಿರುದ್ಧ ಆಡಿದ ಪಂದ್ಯಗಳಿಗೆ ಅಷ್ಟೇನು ಪ್ರಾಮುಖ್ಯತೆಯನ್ನು ಕೊಡದ ಮಾಧ್ಯಮಗಳು ಭಾರತ-ಪಾಕಿಸ್ತಾನ ನಡುವಿವ ಪದ್ಯವೆಂದಾಗ ಇತಿಹಾಸವನ್ನೆಲ್ಲಾ ಜಾಲಾಡಿ ಆ ಪಂದ್ಯಕ್ಕೆ ಎಲ್ಲಿಲ್ಲದ ಪ್ರಚಾರ ನೀಡುತ್ತವೆ. ಕ್ರಿಕೆಟ್‌ ಪಂದ್ಯವೆಂದರೆ ಮುಗಿಯಿತು. ತಜ್ಞರ ದಂಡೇ ಚರ್ಚೆಗೆ ಸಿದ್ಧವಾಗಿರುತ್ತದೆ. ಆದರೆ ಪ್ರತಿಯೊಂದು ಕ್ರೀಡೆಯಲ್ಲೂ ಪ್ರಭುತ್ವ ಸಾಧಿಸುತ್ತಿರುವ ಭಾರತ ಮತ್ತು ಸೋತು ಸುಣ್ಣವಾಗುತ್ತಿರುವ ಪಾಕಿಸ್ತಾನ ನಡುವಿನ ಕ್ರೀಡಾ ಹೋರಾಟಗಳು ಹಿಂದಿನಷ್ಟು ಕುತೂಹಲದಿಂದ ಕೂಡಿದಂತಿಲ್ಲ. ಕೇವಲ ಮಾರುಕಟ್ಟೆ ಉತ್ತೇಜನಕ್ಕಾಗಿ ಮಾಧ್ಯಮಗಳು ಹುಟ್ಟು ಹಾಕಿದ ಈ ವೈರತ್ವದ ಪ್ರಚಾರ ಈಗ ಸಪ್ಪೆಯಾಗುತ್ತಿರುವುದು ಸ್ಪಷ್ಟ. Indian and Pakistan sports rivalry losing its popularity.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಹಾಕಿಯಲ್ಲಿ 180 ಬಾರಿ ಮುಖಾಮುಖಿಯಾಗಿವೆ. ಭಾರತ 66 ಪಂದ್ಯಗಳಲ್ಲಿ ಜಯ ಗಳಿಸಿದರೆ ಪಾಕಿಸ್ತಾನ 82 ಪಂದ್ಯಗಳಲ್ಲಿ ಗೆದ್ದಿದೆ. ಇದರಲ್ಲಿ 70-80ರ ದಶಕಗಳಲ್ಲಿ ಪಾಕಿಸ್ತಾನ ಪ್ರಭುತ್ವ ಸಾಧಿಸಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ತಂಡ ಪ್ರತಿಯೊಂದು ಕ್ರಿಡೆಯಲ್ಲೂ ದುರ್ಬಲವಾಗುತ್ತಿದೆ. ಒಟ್ಟು ಪ್ರಶಸ್ತಿ ಗಳಿಗೆ 29-30 ಹಾಗೂ ಒಟ್ಟು ಗೋಲು ಗಳಿಕೆಯಲ್ಲಿ 377-402 ಪಾಕಿಸ್ತಾನ ಮೇಲುಗೈ ಸಾಧಿಸಿರಬಹುದು, ಆದರೆ ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದ ಹಾಕಿ ಯಶಸ್ಸಿನ ಹಾದಿ ತುಳಿಯುತ್ತಿಲ್ಲ. ಭಾರತ ಮತ್ತು ಪಾಕಿಸ್ತಾನದ ವೈರತ್ವವನ್ನು ಕ್ರೀಡೆಯ ಪ್ರಚಾರಕ್ಕಾಗಿ ಬಳಸಲಾಗುತ್ತಿದೆ. ಹೈ ವೋಲ್ಟೇಜ್‌ ಪಂದ್ಯ ಎಂದು ಹೇಳಿ ಜಾಹೀರಾತಿ ಸಂಗ್ರಹಿಸುವ ಸೂತ್ರಗಳನ್ನು ಹೆಣೆಯಲಾಗುತ್ತಿದೆ. ಇದು ಕ್ರಿಕೆಟ್‌ ಹಾಗೂ ಇತರ ಕ್ರೀಡೆಗಳ ಪ್ರಸಾರದ ಹಕ್ಕು ಪಡೆದಿರುವವರು ಮಾಡುವ ತಂತ್ರ ಎಂಬುದು ಕೂಡ ಜನರಿಗೆ ಈಗ ಮನದಟ್ಟಾಗುತ್ತಿದೆ. ಭಾರತ ಈಗ ಪ್ರತಿಯೊಂದು ಕ್ರೀಡೆಯಲ್ಲಿ ಅಭಿವೃದ್ಧಿ ಹಾಗೂ ಯಶಸ್ಸಿನ ಹೆಜ್ಜೆ ಇಡುತ್ತಿದೆ. ಪಾಕಿಸ್ತಾನ ಅದಕ್ಕೆ ವಿರುದ್ಧವಾಗಿದೆ. ಪ್ರಸಕ್ತ ಚೀನಾದಲಕ್ಲಿ ನಡೆಯುತ್ತಿರುವ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಎಲ್ಲ ಪಂದ್ಯಗಳಲ್ಲೂ ಜಯ ಗಳಿಸಿ ಮುನ್ನಡೆದಿದೆ. ಚಾಂಪಿಯನ್‌ಷಿಪ್‌ನ ಇತಿಹಾಸವನ್ನು ಗಮನಿಸಿದಾಗ ಇತ್ತಂಡಗಳು 11 ಬಾರಿ ಮುಖಾಮುಖಿಯಾಗಿದ್ದು ಭಾರತ 7 ಪಂದ್ಯಗಳಲ್ಲಿ ಜಯ ಗಳಿಸಿದ್ದರೆ, ಪಾಕಿಸ್ತಾನ 2 ಪಂದ್ಯಗಳನ್ನು ಮಾತ್ರ ಗೆದ್ದಿದೆ.2 ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಭಾರತ 32 ಗೋಲುಗಳನ್ನು ಗಳಿಸಿದ್ದರೆ ಪಾಕಿಸ್ತಾನ 22 ಗೋಲುಗಳನ್ನು ಗಳಿಸಿತ್ತು.

ಕ್ರಿಕೆಟ್‌ನಲ್ಲೂ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಗಳು ಕುತೂಹಲ ಕಳೆದುಕೊಳ್ಳುತ್ತಿವೆ, ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಇದುವರೆಗೂ ಒಂದೂ ಪಂದ್ಯವನ್ನು ಗೆದ್ದಿಲ್ಲ. ಇತ್ತೀಚಿನ ವರ್ಷಗಳಲ್ಲಂತೂ ಪಾಕಿಸ್ತಾನ ಕ್ರಿಕೆಟ್‌ ವೈಫಲ್ಯದ ಹಾದಿ ಹಿಡಿದಿದೆ. ಕಳೆದ ವಾರವಷ್ಟೇ ಬಾಂಗ್ಲಾದೇಶದ ವಿರುದ್ಧದ ಸರಣಿಯನ್ನು 0-2 ಅಂತರದಲ್ಲಿ ಸೋತು ತಲೆತಗ್ಗಿಸಿದೆ. ಒಟ್ಟು ಫಲಿತಾಂಶವನ್ನು ನೋಡಿದಾಗ ಪಾಕಿಸ್ತಾನ ಹೆಚ್ಚಿನ ಜಯ ಗಳಿಸಿರುವುದು ನಿಜ. ಅದು 80-90ರ ದಶಕದ ಫಲಿತಾಂಶಗಳೇ ಹೆಚ್ಚು. ಈಗ ಭಾರತ ಪ್ರತಿಯೊಂದು ಕ್ರೀಡೆಯಲ್ಲೂ ಪ್ರಭುತ್ವ ಸಾಧಿಸಿದೆ. ಭಾರತದ ಮಾಧ್ಯಮಗಳು ಮಾಡಬೇಕಾದ ಮುಖ್ಯ ಕೆಲಸವೆಂದರೆ ಪಾಕಿಸ್ತಾನವನ್ನು ತಿರಸ್ಕರಿಸಿ ಜಗತ್ತಿನ ಇತರ ರಾಷ್ಟ್ರಗಳ ವಿರುದ್ಧದ ಪಂದ್ಯಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕು.

Related Articles