Thursday, October 10, 2024

ರಾಷ್ಟ್ರೀಯ ಈಜು: ಹಷಿಕಾ, ಅನೀಶ್‌ಗೆ ಚಾಂಪಿಯನ್‌ ಪಟ್ಟ

ಮಂಗಳೂರು: ಇಲ್ಲಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜು ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ ಮುಕ್ತಾಯಗೊಂಡ 77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ವನಿತೆಯರ ವಿಭಾಗದಲ್ಲಿ ಕರ್ನಾಟಕದ ಹಷಿಕಾ ರಾಮಚಂದ್ರ Hashika Ramachandra ಹಾಗೂ ಪುರುಷರ ವಿಭಾಗದಲ್ಲಿ ಕರ್ನಾಟಕದ ಅನೀಶ್‌ ಗೌಡ ಅವರು ವೈಯಕ್ತಿಯ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದ್ದಾರೆ. ಕರ್ನಾಟಕ ತಂಡ ಸಮಗ್ರ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿದೆ. 77th National Aquatic Championship Karnataka overall champions

ಹಷಿಕಾ 13 ವರ್ಷಗಳ ಹಿಂದಿನ ದಾಖಲೆ ಮುರಿದು ನೂತನ ದಾಖಲೆ ನಿರ್ಮಿಸಿರುತ್ತಾರೆ, ಜೊತೆಯಲ್ಲಿ 3 ಚಿನ್ನ ಹಾಗೂ 1 ಬೆಳ್ಳಿ ಪದಕ ಗೆದ್ದಿರುತ್ತಾರೆ. ಅನೀಶ್‌ ಗೌಡ 4 ಚಿನ್ನದ ಪದಕ ಗೆದ್ದು ಶ್ರೇಷ್ಠ ಈಜುಪಟು ಎಂಬ ಗೌರವಕ್ಕೆ ಪಾತ್ರರಾದರು. ಕರ್ನಾಟಕ ತಂಡ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಸಮಗ್ರ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. ಪುರುಷರ ತಂಡ 156 ಅಂಕಗಳನ್ನು ಗಳಿಸಿದರೆ, ಮಹಿಳೆಯರ ತಂಡ 118 ಅಂಕಗಳನ್ನು ಗಳಿಸಿದೆ. ಒಟ್ಟು 274 ಅಂಕಗಳನ್ನು ಗಳಿಸಿದ ಕರ್ನಾಟಕ ಸಮಗ್ರ ಚಾಂಪಿಯನ್‌ ಪಟ್ಟ ಗೆದ್ದುಕೊಂಡರೆ,  167 ಅಂಕಗಳನ್ನು ಗಳಿಸಿದ ಮಹಾರಾಷ್ಟ್ರ ಸಮಗ್ರ ರನ್ನರ್‌ಅಪ್‌ ಸ್ಥಾನ ಗೆದ್ದುಕೊಂಡಿತು. ಕರ್ನಾಟಕ ಒಟ್ಟು 17 ಚಿನ್ನ, 12 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.

ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ಐದು ನೂತನ ದಾಖಲೆಗಳು ನಿರ್ಮಾಣಗೊಂಡವು.

Related Articles