Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಶಮಿಯ ದಾಖಲೆ, ಭಾರತ ಅಜೇಯವಾಗಿ ಸೆಮಿಫೈನಲ್‌ಗೆ

ಮುಂಬಯಿ: ಶ್ರೀಲಂಕಾ ವಿರುದ್ಧ 302 ರನ್‌ಗಳ ಅಂತರದಲ್ಲಿ ಜಯ ಗಳಿಸಿದ ಭಾರತ ತಂಡ ಅಜೇಯವಾಗಿ ಐಸಿಸಿ ವಿಶ್ವಕಪ್‌ನ ಸೆಮಿಫೈನಲ್‌ ತಲುಪಿದ ಮೊದಲ ತಂಡವೆನಿಸಿದೆ. ಆಡಿದ ಏಳೂ ಪಂದ್ಯಗಳಲ್ಲಿ ಭಾರತ ಜಯ ದಾಖಲಿಸಿದೆ. India advanced unbeaten in to Semi Final.

ಭಾರತ ನೀಡಿದ 358 ರನ್‌ಗಳ ಗುರಿ ಹೊತ್ತ ಶ್ರೀಲಂಕಾ ಮೊಹಮ್ಮದ್‌ ಶಮಿ ಹಾಗೂ ಮೊಹಮ್ಮದ್‌ ಸಿರಾಜ್‌ ಅವರ ದಾಳಿಗೆ ಸಿಲುಕಿ ಕೇವಲ   19.4 ಓವರ್‌ಗಳಲ್ಲಿ ಕೇವಲ 55 ರನ್‌ಗೆ  ಸರ್ವ ಪತನ ಕಂಡಿತು. ಮೊಹಮ್ಮದ್‌ ಶಮಿ 5 ಓವರ್‌ಗಳಲ್ಲಿ ಕೇವಲ 18 ರನ್‌ ನೀಡಿ 5 ವಿಕೆಟ್‌ ಗಳಿಸಿ ಪಂದ್ಯಶ್ರೇಷ್ಠರೆನಿಸಿದರು. ಅಲ್ಲದೆ ವಿಶ್ವಕಪ್‌ನಲ್ಲಿ 45ನೇ ವಿಕೆಟ್‌ ಗಳಿಸುವ ಮೂಲಕ ಅತಿ ಹೆಚ್ಚು ವಿಕೆಟ್‌ ಕಬಳಿಸಿದ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರಾದರು. ಇದುವರೆಗೂ ಈ ದಾಖಲೆಯನ್ನು ಕರ್ನಾಟಕದ ಜಾವಗಲ್‌ ಶ್ರೀನಾಥ್‌ (44) ಹಾಗೂ ಜಹೀರ್‌ ಖಾನ್‌ (44) ಹಂಚಿಕೊಂಡಿದ್ದರು. ಸಿರಾಜ್‌ 7 ಓವರ್‌ಗಳಲ್ಲಿ ಕೇವಲ 16 ರನ್‌ ನೀಡಿ 3 ವಿಕೆಟ್‌ ಗಳಿಸಿದರು. ಬುಮ್ರಾ ಹಾಗೂ ಜಡೇಜಾ ತಲಾ 1 ವಿಕೆಟ್‌ ಹಂಚಿಕೊಂಡರು.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತದ ಪರ ನಾಯಕ ರೋಹಿತ್‌ ಶರ್ಮಾ ಕೇವಲ 4 ರನ್‌ ಗಳಿಸಿ ಪೆವಿಯನ್‌ ಹಾದಿ ಹಿಡಿದರು. ಆದರೆ ಶುಭ್ಮನ್‌ ಗಿಲ್‌ (92), ವಿರಾಟ್‌ ಕೊಹ್ಲಿ (88) ಹಾಗೂ ಶ್ರೇಯಸ್‌ ಅಯ್ಯರ್‌ (82) ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು. ಭಾರತ 8 ವಿಕೆಟ್‌ ನಷ್ಟಕ್ಕೆ 357 ರನ್‌ ಗಳಿಸಿತ್ತು. ದಿಲ್ಷಾನ್‌ ಮಧುಶಂಕ 80 ರನ್‌ಗೆ 5 ವಿಕೆಟ್‌ ಗಳಿಸಿದರು. ಸಚಿನ್‌ ತೆಂಡೂಲ್ಕರ್‌ ಅವರ ಏಕದಿನದ 49 ಶತಕಗಳ ದಾಖಲೆಯನ್ನು ಸರಿಗಟ್ಟುವಲ್ಲಿ ವಿರಾಟ್‌ ಕೊಹ್ಲಿ ವಿಫಲರಾದದ್ದು ಕ್ರಿಕೆಟ್‌ ಅಭಿಮಾನಿಗಳಿಗೆ ನಿರಾಸೆಯಾದರೂ ಪಂದ್ಯ ವೀಕ್ಷಿಸುತ್ತಿದ್ದ ಸಚಿನ್‌ ತೆಂಡೂಲ್ಕರ್‌ ಅವರಿಗೂ ನಿರಾಸೆಯಾಗಿತ್ತು.  ಭಾರತೀಯರು ನನ್ನ ದಾಖಲೆ ಮುರಿದರೆ ಖುಷಿ ಎಂದು ಸಚಿನ್‌ ಈ ಹಿಂದೆಯೇ ಹೇಳಿದ್ದರು. 92 ರನ್‌ ಗಳಿಸಿದ ಗಿಲ್‌ ಚೊಚ್ಚಲ ವಿಶ್ವಕಪ್‌ ಶತಕದಿಂದ ವಂಚಿತರಾದರು. ಭಾರತ ಗೆದ್ದಿರುವ 302 ರನ್‌ಗಳ ಭರ್ಜರಿ ಜಯ ಇದು ವಿಶ್ವಕಪ್‌ ಇತಿಹಾಸದಲ್ಲೇ ಅತ್ಯಂತ ಬೃಹತ್‌ ಅಂತರದ ಎರಡನೇ ಜಯವಾಗಿದೆ. ಆಸ್ಟ್ರೇಲಿಯಾ 309 ರನ್‌ ಅಂತರದಲ್ಲಿ ಗೆದ್ದಿರುವುದು ದಾಖಲೆಯಾಗಿದೆ.


administrator