Friday, October 4, 2024

4ನೇ ಶತಕದೊಂದಿಗೆ 545 ರನ್‌ ಗಳಿಸಿದ ಮೊದಲ ಆಟಗಾರ ಡಿʼಕಾಕ್‌

ಪುಣಿ: ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕದ ಆರಂಭಿಕ ಆಟಗಾರ ಕ್ವಿಂಟನ್‌ ಡಿʼಕಾಕ್‌  ಪ್ರಸಕ್ತ ವಿಶ್ವಕಪ್‌ನಲ್ಲಿ 500 ರನ್‌ ಪೂರ್ಣಗೊಳಿಸಿದ ಮೊದಲ ಆಟಗಾರರೆನಿಸಿದರು. Quinton de Kock becomes the first player to score 500 runs in ICC World Cup 2023

ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೆ ಮುನ್ನ 500 ರನ್‌ ಪೂರ್ಣಗೊಳಿಸಲು ಡಿʼಕಾಕ್‌ಗೆ 69 ರನ್‌ ಅಗತ್ಯವಿದ್ದಿತ್ತು. ಅಂದರೆ ಆಡಿದ ಆರು ಪಂದ್ಯಗಳಲ್ಲಿ ಮೂರು ಶತಕದೊಂದಿಗೆ 431 ರನ್‌ ಗಳಿಸಿದ್ದರು. ನ್ಯೂಜಿಲೆಂಡ್‌ ವಿರುದ್ಧ 114 ರನ್‌ ಸಿಡಿಸುವ ಮೂಲಕ ಒಟ್ಟು 7 ಪಂದ್ಯಗಳಿಂದ 545  ರನ್‌ ದಾಖಲಿಸಿದರು. ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಗಳಿಸಿದ 114 ರನ್‌ ಅವರ ನಾಲ್ಕನೇ ಶತಕ ಆಗಿತ್ತು.

ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಡಿʼಕಾಕ್‌ 100 ರನ್‌ ಗಳಿಸಿದ್ದರು. ನಂತರ ಆಸ್ಟ್ರೇಲಿಯಾ ವಿರುದ್ಧ 109 ರನ್‌, ಬಾಂಗ್ಲಾದೇಶದ ವಿರುದ್ಧ 174 ರನ್‌ ಹಾಗೂ ನ್ಯೂಜಿಲೆಂಡ್‌ ವಿರುದ್ಧ 113 ರನ್‌ ಶತಕದ ಸಾಧನೆಯಾಗಿತ್ತು. ಜಾಕ್‌ ಕಾಲೀಸ್‌ 2017ರ ವಿಶ್ವಕಪ್‌ ಆವೃತ್ತಿಯಲ್ಲಿ ಗಳಿಸಿದ್ದ 485 ರನ್‌ ಇದುವರೆಗೂ ವಿಶ್ವಕಪ್‌ನ ಆವೃತ್ತಿಯೊಂದರಲ್ಲಿ ಆಟಗಾರನೊಬ್ಬ ಗಳಿಸಿದ್ದ ಗರಿಷ್ಠ ರನ್‌ ದಾಖಲೆಯಾಗಿತ್ತು. ಈಗ ಡಿʼಕಾಕ್‌ ಆ ಎಲ್ಲ ದಾಖಲೆಗಳನ್ನು ಮುರಿದಿದ್ದಾರೆ. ಡಿʼಕಾಕ್‌ 2015 ಹಾಗೂ 2019 ಆವೃತ್ತಿಗಳಲ್ಲಿ ಗಳಿಸಿದ್ದ ಒಟ್ಟು ರನ್‌ 450 ರನ್. ಇನ್ನೊಂದು ಶತಕ ಗಳಿಸಿದರೆ ಡಿʼಕಾಕ್‌ ಭಾರತದ ರೋಹಿತ್‌ ಶರ್ಮಾ ಅವರ ಐದು ಶತಕಗಳ ದಾಖಲೆಯನ್ನು ಸರಿಗಟ್ಟಲಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ರಸ್ಸೆ ವ್ಯಾನ್‌ ಡೆರ್‌ ಡ್ಯೂಸನ್‌ 133 ಮತ್ತು ಡಿʼಕಾಕ್‌ ಹಾಗೂ ಡೇವಿಡ್‌ ಮಿಲ್ಲರ್‌ ಗಳಿಸಿದ ಮಿಂಚಿನ 53 ರನ್‌ ನೆರವಿನಿಂದ ಹರಿಣಗಳ ಪಡೆ 4 ವಿಕೆಟ್‌ ನಷ್ಟಕ್ಕೆ 357 ರನ್‌ ದಾಖಲಿಸಿತು.

Related Articles