Sunday, December 10, 2023

ಕ್ಯಾಮೆರಾಮನ್‌ ಕಾರ್ಯನಿರ್ವಹಿಸಿದ ಸೂರ್ಯ

ಮುಂಬೈ: ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ಗುರುವಾರ ವಿಶ್ವಕಪ್‌ ಪಂದ್ಯ ನಡೆಯುವುದಕ್ಕೆ ಮುನ್ನ ಭಾರತ ತಂಡದ ಆಟಗಾರ ಸೂರ್ಯ ಕುಮಾರ್‌ ಯಾದವ್‌ ಕ್ಯಾಮೆರಾಮನ್‌ ಕಾರ್ಯ ನಿರ್ವಹಿಸಿದ್ದಾರೆ. Suray Kumar Yadav turns Cameraman.

ಮುಂಬೈಯ ಮೆರಿನ್‌ ಡ್ರೈವ್‌ನಲ್ಲಿ ಕ್ರಿಕೆಟ್‌ ಅಭಿಮಾನಿಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿ ಅಂತಿಮವಾಗಿ ತಮ್ಮ ನಿಜರೂಪವನ್ನು ಬಹಿರಂಗಗೊಳಿಸಿ ಅಚ್ಚರಿ ಮೂಡಿಸಿದರು.

ಫುಟ್‌ ಶರ್ಟ್‌, ಮುಖಕ್ಕೆ ಮಾಸ್ಕ್‌, ತಲೆಗೆ ಟೋಪಿ ಧರಿಸಿ ಕ್ಯಾಮೆರಾ ಹಿಡಿದು ಯಾರಿಗೂ ಗುರುತು ಸಿಗದ ರೀತಿಯಲ್ಲಿ ಮುಂಬೈ ಮರಿನ್‌ ಡ್ರೈವ್‌ನಲ್ಲಿದ್ದ ಕೆಲವು ಅಭಿಮಾನಿಗಳನ್ನು ಮಾತನಾಡಿಸಿದರು. ಹೆಚ್ಚಿನವರು ರೋಹಿತ್‌ ಶರ್ಮಾ ಹಾಗೂ ಬುಮ್ರಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲವರು ಸೂರ್ಯಕುಮಾರ್‌ ಯಾದವ್‌ ಅವರ ಬಗ್ಗೆಯೂ ಮಾತನಾಡಿದರು. ಅಂತಿಮವಾಗಿ ಸೂರ್ಯ ತಾನಾರೆಂಬುದನ್ನು ತೋರಿಸಲು ಮಾಸ್ಕ್‌ ತೆಗೆದಾಗ ಕ್ರಿಕೆಟ್‌ ಅಭಿಮಾನಿಗಳಿಗೆ ಅಚ್ಚರಿ.

ಹೊಟೇಲ್‌ನಿಂದ ಹೊರಡುವುದಕ್ಕೆ ಮುನ್ನ ರವೀಂದ್ರ ಜಡೇಜಾ ಅವರಲ್ಲಿ ಉಡುಪು ಹೇಗೆ ಕಾಣಿಸುತ್ತದೆ ಎಂದು ಕೇಳಿದಾಗ ಟೋಪಿ ಉಲ್ಟಾ ಹಾಕಿದರೆ ಇನ್ನೂ ಗುರುತು ಸಿಗುವುದಿಲ್ಲ (ಹಿಂದೆ-ಮುಂದೆ) ಎಂದು ಸಲಹೆ ನೀಡಿದರು. ಅದರಂತೆ ಬದಲಾವಣೆ ಮಾಡಿಕೊಂಡು ಸೂರ್ಯ ಮರಿನ್‌ ಡ್ರೈವ್‌ನಲ್ಲಿ ಕುತೂಹಲದ ಕಾರ್ಯ ನಿರ್ವಹಿಸಿದರು.

Related Articles