Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡದ ಜೊತೆ ಹಯಾತ್  ಪಾಲುದಾರಿಕೆ

ಮುಂಬೈ: ವಿಶ್ವದರ್ಜೆಯ ಆತಿಥ್ಯ ಒದಗಿಸುವ ಹಯಾತ್ ಸಂಸ್ಥೆಯು ಇಂದು ಜಗತ್ತಿನ ಫ್ರಾಂಚೈಸ್ ಕ್ರಿಕೆಟ್‌ ತಂಡಗಳಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿರುವ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್‌ ಕ್ರಿಕೆಟ್ ತಂಡದ ಜೊತೆಗೆ ಸಹಭಾಗಿತ್ವ ಮಾಡಿಕೊಂಡಿದೆ. Hyatt today announced a strategic collaboration with Mumbai Indians one of the most celebrated teams in global franchise cricket.

ಈ ಮೂಲಕ ತಮ್ಮ ಪಾಲುದಾರರಿಗೆ, ಅಭಿಮಾನಿಗಳಿಗೆ ಅತ್ಯುತ್ತಮ ಅನುಭವ ಮತ್ತು ಶ್ರೇಷ್ಠ ಸೇವೆ ಒದಗಿಸುವ ಎರಡು ವಿಭಿನ್ನ ಕ್ಷೇತ್ರದ ದಿಗ್ಗಜ ಸಂಸ್ಥೆಗಳು ಒಟ್ಟುಗೂಡಿವೆ. ಈ ಸಹಭಾಗಿತ್ವದ ಭಾಗವಾಗಿ ಹಯಾತ್ ತನ್ನ ಉದ್ದೇಶ ಮತ್ತು ಭಾರತದ ಕ್ರಿಕೆಟ್ ಹುಮ್ಮಸ್ಸನ್ನು ಜೊತೆಗೂಡಿಸುವ ಒಂದು ಆಕರ್ಷಕ ಡಿಜಿಟಲ್ ಕ್ಯಾಂಪೇನ್ ಅನ್ನು ಪ್ರಾರಂಭಿಸಲಿದೆ. ಅದರಲ್ಲೂ ವಿಶೇಷವಾಗಿ ಈ ಸಹಯೋಗದ ಮೂಲಕ ಹಯಾತ್ ಸಂಸ್ಥೆಯು ಕ್ರಿಕೆಟ್ ಉತ್ಸಾಹಿಗಳನ್ನು ತಲುಪಲಿದ್ದು, ಈ ಸೀಸನ್ ಉದ್ದಕ್ಕೂ ಹಯಾತ್ ಬ್ರಾಂಡ್ ಎಲ್ಲೆಡೆ ಗೋಚರಿಸಲಿದೆ. ಹಯಾತ್ ಆಕರ್ಷಕ ಕಂಟೆಂಟ್ ಮತ್ತು ಬ್ರಾಂಡ್ ನೇತೃತ್ವದ ವಿಶೇಷ ಚಟುವಟಿಕೆಗಳನ್ನು ರೂಪಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ತಮ್ಮ ಇಷ್ಟದ ತಂಡಕ್ಕೆ ಮತ್ತಷ್ಟು ಹತ್ತಿರವಾಗಿಸುವ ಉದ್ದೇಶವನ್ನು ಹೊಂದಿದೆ.

ಈ ಸಹಯೋಗದ ಭಾಗವಾಗಿ ವಿಶೇಷವಾಗಿ ವರ್ಲ್ಡ್ ಆಫ್ ಹಯಾತ್ ಸದಸ್ಯರಿಗೆ ಒಂದು ವಿಶಿಷ್ಟ ಅವಕಾಶ ಒದಗಿಸಲಾಗುತ್ತಿದೆ. ಆಯ್ದ ವರ್ಲ್ಡ್ ಆಫ್ ಹಯಾತ್ ಸದಸ್ಯರು ಮುಂಬೈ ಇಂಡಿಯನ್ಸ್ ಆಟಗಾರರ ಜೊತೆಗೆ ಆತ್ಮೀಯ ಭೇಟಿ ಮತ್ತು ಮಾತುಕತೆ ನಡೆಸುವ ಅನುಭವ ಗಳಿಸಬಹುದಾಗಿದೆ ಮತ್ತು ಅದರ ಜೊತೆಗೆ ವಿಶಿಷ್ಟ ಸ್ಮರಣಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ. ಈ ವಿಶಿಷ್ಟ ಯೋಜನೆಯು ನಿಷ್ಠೆ ಮತ್ತು ಅಭಿಮಾನದ ಸಂಭ್ರಮಾಚರಣೆಯಾಗಿದ್ದು, ಕ್ರಿಕೆಟ್‌ ನ ಹುಮ್ಮಸ್ಸು ಮತ್ತು ಪ್ರೀಮಿಯಂ ಆತಿಥ್ಯ ವ್ಯವಸ್ಥೆಯನ್ನು ಜೊತೆಗೂಡಿಸಿದೆ.

ಈ ಕುರಿತು ಮಾತನಾಡಿರುವ ಹಯಾತ್ ನ ಭಾರತ ಮತ್ತು ನೈರುತ್ಯ ಏಷಿಯಾದ ವ್ಯವಸ್ಥಾಪಕ ನಿರ್ದೇಶಕ ಸುಂಜೇ ಶರ್ಮಾ ಅವರು, “ಗ್ರಾಹಕರ ತೊಡಗಿಸಿಕೊಳ್ಳುವಿಕೆಯನ್ನು ತೀವ್ರಗೊಳಿಸಲು ಹಯಾತ್‌ ನಲ್ಲಿ ನಾವು ಸದಾ ಪ್ರಯತ್ನಿಸುತ್ತಿರುತ್ತೇವೆ. ಅಲ್ಲದೇ ನಮ್ಮ ಬ್ರಾಂಡ್‌ ನ ವಿಶ್ವಾಸವನ್ನು ಉಳಿಸಲು ಅರ್ಥಪೂರ್ಣ ಮಾರ್ಗಗಳನ್ನು ಹುಡುಕುತ್ತಿರುತ್ತೇವೆ. ಮುಂಬೈ ಇಂಡಿಯನ್ಸ್‌ ಜೊತೆಗಿನ ನಮ್ಮ ಸಹಬಾಗಿತ್ವವು ಕ್ರಿಕೆಟ್‌ ನ ಶಕ್ತಿಯನ್ನು ಹಯಾತ್‌ ನ ಅತ್ಯುತ್ತಮ ಆತಿಥ್ಯ ಸೇವೆಯ ಜೊತೆ ಸಂಯೋಜಿಸಲು ನಮಗೆ ಅವಕಾಶ ಒದಗಿಸುತ್ತದೆ. ಶ್ರೇಷ್ಠತೆಗೆ ತುಡಿಯುವ ಮತ್ತು ತಮ್ಮ ಅಭಿಮಾನಿಗಳಿಗೆ ಮರೆಯಲಾಗದ ಅನುಭವಗಳನ್ನು ಸೃಷ್ಟಿಸುವ ಬದ್ಧತೆಯನ್ನು ಹೊಂದಿರುವ ಎರಡು ಬ್ರಾಂಡ್‌ ಗಳು ಈ ಮೂಲಕ ಜೊತೆಯಾಗಿದೆ. ಅಲ್ಲದೇ ವಿಶೇಷವಾಗಿ ಈ ಸಹಭಾಗಿತ್ವವು ನಮ್ಮ ಅತ್ಯಂತ ನಿಷ್ಠಾವಂತ ವರ್ಲ್ಡ್ ಆಫ್ ಹಯಾತ್ ಸದಸ್ಯರಿಗೆ ಹಾಗೂ ನಮ್ಮ ಪ್ರಮುಖ ಪಾಲುದಾರರಿಗೆ ವಿಶಿಷ್ಟ ಅನುಭವ ಒದಗಿಸಲು ಹೊಸ ಮಾರ್ಗಗಳನ್ನು ತೆರೆಯಲಿದೆ” ಎಂದು ಹೇಳಿದರು.

ಮುಂಬೈ ಇಂಡಿಯನ್ಸ್‌ ನ ವಕ್ತಾರರು ಮಾತನಾಡಿ , “ಮೈದಾನದಾಚೆಗೆ ನಮ್ಮ ಅಭಿಮಾನಿಗಳಿಗೆ ಉತ್ತಮ ಅನುಭವವನ್ನು ಒದಗಿಸುವ ಮತ್ತು ಅಭಿಮಾನಗಳಿಗೆ ಸಂತೋಷ ಒದಗಿಸುವ ಅರ್ಥಪೂರ್ಣ ಸಹಯೋಗಗಳನ್ನು ಹೊಂದುವುದರ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ. ಹಯಾತ್‌ ಜೊತೆಗಿನ ನಮ್ಮ ಸಹಯೋಗವು ಅತ್ಯುತ್ತಮ ಸಂಯೋಜನೆಯಾಗಿದ್ದು, ಈ ಮೂಲಕ ಕ್ರಿಕೆಟ್ ಮತ್ತು ಆತಿಥ್ಯವನ್ನು ಜೊತೆಗೂಡಿಸಿ ನಮ್ಮ ಅಭಿಮಾನಿಗಳಿಗೆ ಸ್ಮರಣೀಯ ಕ್ಷಣಗಳನ್ನು ಒದಗಿಸುತ್ತೇವೆ. ಈ ಪ್ರಾಯೋಜಕತ್ವದ ಮೂಲಕ ನಾವು ಅಭಿಮಾನಿಗಳೊಂದಿಗೆ ತೊಡಗಿಸಿಕಳ್ಳಲು ಮತ್ತು ಕ್ರಿಕೆಟ್‌ ನ ಹುಮ್ಮಸ್ಸನ್ನು ಸಾರಲು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.

ಕ್ರಿಕೆಟ್ ಆಗಿರಲಿ ಅಥವಾ ಆತಿಥ್ಯೋದ್ಯಮವೇ ಆಗಿರಲಿ, ಹಯಾತ್-ಮುಂಬೈ ಇಂಡಿಯನ್ಸ್ ಸಹಭಾಗಿತ್ವವು ಈ ಎರಡೂ ವಿಭಾಗಗಳಲ್ಲೂ ಒಂದು ಗೇಮ್‌ಚೇಂಜರ್ ಆಗಿದ್ದು, ನಿಷ್ಠೆ, ಸಮುದಾಯ ಮತ್ತು ಅನಿರೀಕ್ಷಿತತೆಯ ರೋಮಾಂಚನವನ್ನು ಸಂಭ್ರಮಿಸಲು ಈ ಸಹಯೋಗ ರೂಪುಗೊಂಡಿದೆ.


administrator