ಎರಡನೇ ಪಂದ್ಯಕ್ಕೂ ಪೃಥ್ವಿ ಅಲಭ್ಯ

0
177
ಪರ್ತ್: 

ಆಸ್ಟ್ರೇಲಿಯಾ ಎ ತಂಡದ ವಿರುದ್ಧದ ಪಂದ್ಯದಲ್ಲಿ  ಗಾಯಗೊಂಡಿದ್ದ ಯುವ ಬ್ಯಾಟ್ಸ್  ಮನ್ ಪೃಥ್ವಿ ಶಾ ಪರ್ತ್‌ನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲೂ ಆಡುವುದಿಲ್ಲ.

ಸದ್ಯ ಪೃಥ್ವಿ ಶಾ ಚಿಕಿತ್ಸೆೆ ಪಡೆಯಲಿರುವ ಕಾರಣ ಮುಂದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಅನುಮಾನ ಎನ್ನಲಾಗಿದೆ. ಹೀಗಾಗಿ, ಮೊದಲ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ್ದ ಮುರಳಿ ವಿಜಯ್ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಪರ್ತ್ ಪಂದ್ಯದಲ್ಲೂ ಆರಂಭಿಕರಾಗಿ ಕಣಕ್ಕೆೆ ಇಳಿಯಲಿದ್ದಾರೆ. ಪೃಥ್ವಿ ಶಾ ಗಾಯಗೊಂಡಿರುವುದು ನಿಜಕ್ಕೂ ಬೇಸರದ ಸಂಗತಿ. ಆದರೆ, ಆತ ಗುಣಮುಖನಾಗುತ್ತಿದ್ದಾನೆ ಎಂದು ಕೋಚ್ ರವಿ ಶಾಸ್ತ್ರಿ ಮಾಹಿತಿ ನೀಡಿದರು. ಮೊದಲ ಟೆಸ್ಟ್  ಪಂದ್ಯವನ್ನು ಟೀಂ ಇಂಡಿಯಾ 31 ರನ್‌ಗಳಿಂದ ಗೆಲುವು ಸಾಧಿಸಿತ್ತು.