Friday, April 19, 2024

ಹಾಕಿ: ಕ್ವಾರ್ಟರ್ ಫೈನಲ್ ಗೆ ಕರ್ನಾಟಕ

ಸ್ಪೋರ್ಟ್ಸ್ ಮೇಲ್ ವರದಿ

ಹಾಕಿ ಪಂಜಾಬ್ ವಿರುದ್ಧ 4-1 ಗೋಲಿನಿಂದ ಜಯ ಗಳಿಸಿದ  ಹಾಕಿ ಕರ್ನಾಟಕ ಇಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ 5 ಎ ಸೈಡ್ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನ  ಪುರುಷರ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದೆ.

ಮೂರನೇ ದಿನದ ಕೊನೆಯಲ್ಲಿ ನಡೆದ ಪಂದ್ಯದಲ್ಲಿ ರಾಜ್ಯ ತಂಡದ ಪರ ಆಭರಣ್ ಸುದೇವ್ (೪ನೇ ನಿಮಿಷ), ಲಿಖಿತ್ ಎಂ. ಬಿ. (7ನೇ ನಿಮಿಷ) ಅವರು ಗಳಿಸಿದ ಗೋಲಿನ ಮೂಲಖ ಮುನ್ನಡೆ ಕಂಡಿತ್ತು. ಆದರೆ ಆಭರಣ್ ಸುದೇವ್  15 ಮತ್ತು 20ನೇ ನಿಮಿಷಗಳಲ್ಲಿ ಗೋಲು ಗಳಿಸಿ ರಾಜ್ಯಕ್ಕೆ ಜಯ ತಂದುಕೊಟ್ಟರು. ಪಂಜಾಬ್ ಪರ ಸತ್ಬೀರ್ ಸಿಂಗ್ 13ನೇ ನಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನಷ್ಟೇ ಕಡಿಮೆ ಮಾಡಿತು. ಕ್ವಾರ್ಟರ್  ಫೈನಲ್‌ನಲ್ಲಿ ರಾಜ್ಯ ತಂಡ ತಮಿಳುನಾಡು ವಿರುದ್ಧ ಸೆಣಸಲಿದೆ.
ಹಾಕಿ ಒಡಿಶಾ ವಿರುದ್ಧದ ಪಂದ್ಯದಲ್ಲಿ ಹಾಕಿ ಹರಿಯಾಣ 7-3 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಕ್ವಾರ್ಟರ್  ಫೈನಲ್ ತಲುಪಿತು.  ಹರಿಯಾಣ ಪರ  ಭರತ್ ಹ್ಯಾಟ್ರಿಕ್ ಸಧನೆ ಮಾಡಿ ಜಯದ ರೂವಾರಿ ಎನಿಸಿದರು.
ಹಾಕಿ ಮಹಾರಾಷ್ಟ್ರ ತಂಡ ಹಾಕಿ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ 4-3 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಕ್ವಾರ್ಟರ್  ಫೈನಲ್ ಪ್ರವೇಶಿಸಿತು.  ಪ್ರಥಮಾರ್ಧದಲ್ಲಿ ಮಹಾರಾಷ್ಟ್ರ ತಂಡ 2-0 ಗೋಲುಗಳಿಂದ ಮುನ್ನಡೆ ಕಂಡಿತ್ತು. ತಮಿಳುನಾಡು ಪರ ಸುನಿಲ್ ಮೂರ್ತಿ, ಸೆಂತಿಲ್ ಕೃಷ್ಣ ಹಾಗೂ  ಎನ್. ಸೆಂತಿಲ್ ಗೋಲು ಗಳಿಸಿ  ಮುನ್ನಡೆ ಕಾಯ್ದುಕೊಂಡಿತು. ೮ನೇ ನಿಮಿಷದಲ್ಲಿ ಮಹಾರಾಷ್ಟ್ರದ ಪರ ಗೋಲು ಗಳಿಸಿದ್ದ ನಿಯಾಜ್  ರಹೀಮ್  16 ಮತ್ತು 19ನೇ ನಿಮಿಷಗಳಲ್ಲಿ ಗೋಲು ಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿ ತಂಡಕ್ಕೆ ಜಯ ತಂದುಕೊಟ್ಟರು.
ಉತ್ತರ ಪ್ರದೇಶ ಹಾಕಿ ತಂಡ  7-3 ಗೋಲುಗಳ ಅಂತರದಲ್ಲಿ ಹಾಕಿ ಜಾರ್ಖಂಡ್ ವಿರುದ್ಧ ಜಯ ಗಳಿಸಿ ಕ್ವಾರ್ಟರ್  ಫೈನಲ್ ಪ್ರವೇಶಿಸಿತು

Related Articles