Monday, April 15, 2024

ಈ ಚಳಿಗಾಲದಲ್ಲಿ ಸೂರ್ಯ ಈಶಾನ್ಯದಲ್ಲಿ ಉದಯಿಸುವನೇ?

2014ರಿಂದ ಹೀರೊ ಇಂಡಿಯಾ ಸೂಪರ್ ಲೀಗ್ ನಲ್ಲಿರುವ ತಂಡಗಳಲ್ಲಿ ನಾರ್ತ್ ಗುವಾಹಟಿಯ  ಈಸ್ಟ್ ಯುನೈಟೆಡ್ ತಂಡ ಮಾತ್ರ ಪ್ಲೇ ಆಫ್ ಹಂತವನ್ನು ತಲುಪಿಲ್ಲ. ಉತ್ತಮ ಅಭಿಮಾನಿಗಳ ಪಡೆಯನ್ನು ಹೊಂದಿರುವ ಕ್ಲಬ್ ಇದುವರೆಗೂ ಅಂತಿಮ ನಾಲ್ಕರ ಹಂತ ತಲುಪದಿರುವುದು ಬೇಸರದ ಸಂಗತಿ.

ಪರ್ವತ ಪ್ರದೇಶದ ತಂಡ ಐದನೇ ಆವೃತ್ತಿಯಲ್ಲಿ ತಿರುವು ಪಡೆದು ಮುಂದೆ ಸಾಗಬಹುದೇ?

ಹೌದು ಆ ತಂಡದಿಂದ ಇದು ಸಾಧ್ಯ ಇದೆ. ಅವರು ಈ ಬಾರಿ ಆ ಸಾಧನೆ ಮಾಡಲೇಬೇಕು. ಚೆಲ್ಸಿ ತಂಡದ ಮಾಜಿ ಮ್ಯಾನೇಜರ್ ಅವ್ರಾಮ್ ಗ್ರಾಂಟ್ ಈಗ ನಾರ್ತ್ ಈಸ್ಟ್ ತಂಡದ ಸಲಹೆಗಾರರು. ಅವರ ಅನುಭವ ಹಾಗೂ ಫುಟ್ಬಾಲ್ ಬಗ್ಗೆ ಅವರಿಗಿರುವ ಕಾಳಜಿ ಐ ಎಸ್ ಎಲ್ ನಲ್ಲಿ ಯಾರಿಗೂ ಇಲ್ಲ ಎಂದರೆ ತಪ್ಪಾಗಲಾರದು. ಇದು ನಾರ್ತ್ ಈಸ್ಟ್ ತಂಡದ ಸೋಲಿನ ಪೊರೆಯನ್ನು ಕಳಚಲು ನೆರವಾಗಲಿದೆ.  ನಿಜ, ಕಳೆದ ಬಾರಿಯೂ ಗ್ರಾಂಟ್ ತಂಡದಲ್ಲಿದ್ದರು. ಆದರೆ ಅವರು ತಂಡವನ್ನು ಸೇರಿಕೊಂಡಾಗ ಕ್ಲಬ್ ಆಗಲೇ ಸೋಲಿನ ಅಂಚಿಗೆ ಸಿಲುಕಿತ್ತು.

ಗ್ರಾಂಟ್ ಜೊತೆಯಲ್ಲಿ ಕ್ಲಬ್ ಕೆಲವು ಉತ್ತಮ ವಿದೇಶಿ ಆಟಗಾರರನ್ನು ಈ ಬಾರಿ ತಂಡಕ್ಕೆ ಸೇರಿಸಿಕೊಂಡಿದೆ. ಇದರಲ್ಲಿ ಪಿ ಎಸ್ ಜಿ ಯ ಮಾಜಿ ಆಟಗಾರ ಬಾಥೋಲೊಮೆವ್ ಓಗ್ಬ್ಯಾಚೇವ್ ಸೇರಿದ್ದಾರೆ. ತಂಡದ ಆಟಗಾರರ ವಯಸ್ಸಿನ ಸರಾಸರಿ ಕಳೆದ ಬಾರಿಗಿಂತ ಕಡಿಮೆ ಇದೆ. ತಂಡದ ಕೋಚ್ ಆಗಿ ಎಲ್ಕೋ ಸ್ಚಾಟ್ಟೋರಿಯೇ ಹಾಗೂ ಸಹಾಯಕ ಕೋಚ್ ಆಗಿ ಆರ್ಥರ್ ಪಾಪಾಸ್ ಕಾರ್ಯನಿರ್ವಹಿಸಲಿದ್ದಾರೆ. ಭಾರತದ ಫುಟ್ಬಾಲ್ ಬಗ್ಗೆ ಇಬ್ಬರು ತರಬೇತುದಾರರು ಚೆನ್ನಾಗಿ ಅರಿತಿದ್ದಾರೆ.

“ಕಳೆದ  ಋತು ಮುಗಿದ ನಂತರ ಆಸಕ್ತಿ ಇದ್ದಾರೆ ನಮ್ಮ ತಂಡದಲ್ಲಿ ಕಾರ್ಯ ನಿರ್ವಹಿಸಬಹುದು ಎಂದು ಕ್ಲಬ್ ಕೇಳಿಕೊಂಡಿತು.ಅದು ನನಗೆ ಆಸಕ್ತಿ ಇದ್ದ ಕ್ಷೇತ್ರವಾದ ಕಾರಣ ಸವಾಲನ್ನು ಸ್ವೀಕರಿಸಿದೆ.ಮೊದಲ ಬಾರಿಗೆ ತಂಡವನ್ನು ಪ್ಲೇ ಆಫ್ ಹಂತ ತಲುಪಿಸುವುದು ಮುಂದಿರುವ ಗುರಿ,” ಎಂದು  ಸ್ಚಾಟ್ಟೋರಿಯೇ ಹೇಳಿದ್ದಾರೆ. ಕಳೆದ ಋತುವಿನಲ್ಲಿ ಅವರು ಗ್ರಾಂಟ್ ಗೆ ಸಹಾಯಕರಾಗಿದ್ದರು.

ನಾರ್ತ್ ಈಸ್ಟ್ ತಂಡ ಉತ್ತಮ ಪ್ರತಿಭಾವಂತ ಆಟಗಾರರನ್ನು ಹೊಂದಿದ್ದರೂ ಯಶಸ್ಸು ಕಾಣಲಿಲ್ಲ ಯಾಕೆ ಎಂಬುದು ರಹಸ್ಯವಾಗಿ ಉಳಿದಿದೆ. ಒಂದೆರಡು ಬಾರಿ ಯಶಸ್ಸಿನ ಹತ್ತಿರ ಬಂದರು ಲೀಗ್ ನಲ್ಲಿ ಹಿಂದೆ ಉಳಿಯಬೇಕಾಯಿತು, 2014ರ ಆರಂಭಿಕ ಲೀಗ್ ನಲ್ಲಿ ನ್ಯೂಜಿಲ್ಯಾಂಡ್ ನ ರಿಕಿ ಹರ್ಬರ್ಟ್ ಅವರಲ್ಲಿ ಪಳಗಿದ ತಂಡ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ತಲುಪಿತ್ತು. ಡೆಲ್ಲಿ ಡೈನಮೋಸ್ ತಂಡಕ್ಕಿಂತ ಮೂರು ಅಂಕ ಕಡಿಮೆ ಗಳಿಸಿತ್ತು. ಆದರೆ ನಂತರದ ಎರಡು ಋತುಗಳಲ್ಲಿ ಕೂದಲೆಳೆಯ ಅಂತರದಲ್ಲಿ ಪ್ಲೇ ಆಫ್ ಹಂತದಿಂದ ವಂಚಿತವಾಗಿತ್ತು. 2015ರಲ್ಲಿ ತಂಡ ಲೀಗ್ ಹಂತದಲ್ಲಿ ನಾಲ್ಕನೇ ಸ್ಥಾನ ತಲುಪಿತ್ತು. ಆಗ ವೆನೆಜುವೆಲಾ ದ ಸೆಸರ್ ಫಾರಿಯಸ್ ಹಾಗೂ ಸಿಮಾವ್ ಸಾಬ್ರಾಸ ಕೋಚ್ ಆಗಿದ್ದರು. ಎಫ್ ಸಿ ಪುಣೆ ಸಿಟಿ ವಿರುದ್ಧದ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಗೆದ್ದ ತಂಡ ನಾಲ್ಕರ ಹಂತ ತಲುಪಿತ್ತು. ಆದರೆ ಚೆನ್ನೈಯಿನ್ ಎಫ್ ಸಿ ಎರಡು ಅಂಕಗಳಿಂದ ಮುನ್ನಡೆ ಕಂಡು ಪರ್ವತ ಪ್ರದೇಶದ ತಂಡಕ್ಕೆ ಆಘಾತ ಉಂಟುಮಾಡಿತ್ತು.

2016 ನಾರ್ತ್ ಈಸ್ಟ್ ತಂಡಕ್ಕೆ ಮಿಚಿನ ಆಘಾತ ಉಂಟಾಗಿತ್ತು. ಅಲ್ಲಿಯೂ ಎರಡು ಅಂಕಗಳಿಂದ ಪ್ಲೇ ಆಫ್ ನಿಂದ ವಂಚಿತವಾಯಿತು. ಹೆಚ್ಚಿನ ಋತುಗಳಲ್ಲಿ ಉತ್ತಮವಾಗಿ ಆಡಿರುವ ಆರಂಭದಲ್ಲಿ ಮೇಲುಗೈ ಸಾಧಿಸಿತ್ತು. ನೆಲೋ ವಿಂಗಡಸ್ ತಂಡ ಮತ್ತೆ ಪ್ಲೇ ಆಫ್ ತಲಪುವಲ್ಲಿ ವಿಫಲವಾಯಿತು.

ಕಳೆದ ಋತುವಿನಲ್ಲೂ ಕ್ಲಬ್ ಕಹಿ ಅನುಭವ ಅನುಭವಿಸಿತ್ತು. ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ತಲುಪಿತ್ತು, ಆದರೆ ಪ್ರಸಕ್ತ ಋತುವಿನಲ್ಲಿ ಹೊಸ ಉಲ್ಲಾಸ ಹಾಗೂ ಉತ್ಸಾಹದೊಂದಿಗೆ ತಂಡ ಅಂಗಣಕ್ಕಿಳಿಯಲಿದೆ.ಈಬಾರಿ ತಂಡ ಪ್ಲೇ ಆಫ್ ಹಂತ ತಲಪುವ ಗುರಿ ಹೊಂದಿದೆ. ಈ ಭಾಗದಿಂದ ಭಾರತ ಫುಟ್ಬಾಲ್ ತಂಡಕ್ಕೆ ಈಗಲೂ ಹಿಂದೆಯೂ ಪ್ರತಿಭಾಹವಂತ ಆಟಗಾರರು ಬಂದಿದ್ದಾರೆ. ಅಲ್ಲದೆ ಅಪಾರ ಸಂಖ್ಯೆಯ ಫುಟ್ಬಾಲ್ ಅಭಿಮಾನಿಗಳು ಇಲ್ಲಿ ಇದ್ದಾರೆ. ಆದ್ದರಿಂದ ಈಬಾರಿ ನಾರ್ತ್ ಈಸ್ಟ್ ಯುನೈಟೆಡ್ ಪರ್ವತದ ಉತ್ತುಂಗ ಶಿಖರ ಏರುತ್ತದೆ ಎಂಬ ನಂಬಿಕೆ ಇದೆ.

Related Articles