Thursday, September 12, 2024

೨೬ ಗೋಲುಗಳು! ಗೋಲ್‌ಕೀಪರ್ ಮಾತ್ರ ಗೋಲ್ ಹೊಡಿದಿಲ್ಲ!

ಏಜೆನ್ಸೀಸ್ ಜಕಾರ್ತ

 

ಹಾಲಿ ಚಾಂಪಿಯನ್ ಭಾರತ ಹಾಕಿ ತಂಡ ಹಾಂಕಾಂಗ್ ಚೀನಾ ವಿರುದ್ಧದ ಏಷ್ಯನ್ ಗೇಮ್ಸ್ ಹಾಕಿ ಪಂದ್ಯದಲ್ಲಿ 26-0 ಅಂತರದಲ್ಲಿ ಗೋಲು ಗಳಿಸುವ ಮೂಲಕ ಕ್ರೀಡಾಕೂಟದ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ರೂಪಿಂದರ್ ಪಾಲ್ ಸಿಂಗ್ ೫ ಗೋಲುಗಳನ್ನು ಗಳಿಸಿ ವೈಯಕ್ತಿಕ ಸಾಧನೆ ಮಾಡಿದರು. ತಂಡದಲ್ಲಿ ಗೋಲ್‌ಕೀಪರ್ ಹೊರತಾಗಿ ಎಲ್ಲರೂ ಗೋಲು ಗಳಿಸಿರಿವುದು ವಿಶೇಷ.

ಹಾಂಕಾಂಗ್ ಚೀನಾ ತಂಡಕ್ಕೆಭಾರತ ಯಾವುದೇ ರೀತಿಯಲ್ಲಿ ಗೋಲು ಗಳಿಸಲು ಅವಕಾಶ ನೀಡಿದೆ, ತನ್ನಿಂದ ಎಷ್ಟು ಗೋಲುಗಳನ್ನು ಗಳಿಸಲು ಸಾಧ್ಯವೋ ಅಷ್ಟು ಗೋಲುಗಳನ್ನು ಗಳಿಸಿ ಸಂಭ್ರಮಿಸಿತು.
ರೂಪಿಂದರ್ ಪಾಲ್ ಸಿಂಗ್ 3, 5, 30, 45  ಹಾಗೂ 60ನೇ ನಿಮಿಷಗಳಲ್ಲಿ ಗೋಲು ಗಳಿಸಿದರೆ, ಯುವ ಆಟಗಾರ ಹರ್ಮನ್‌ಪ್ರೀತ್ ಸಿಂಗ್ 26, 52, 53, ಹಾಗೂ 55ನೇ  ನಿಮಿಷಗಳಲ್ಲಿ ಗೋಲು ಗಳಿಸಿ ಪ್ರ‘ುತ್ವ ಸಾಧಿಸಿದರು. ಆಕಾಶ್ ದೀಪ್ ಸಿಂಗ್ 2, 32 ಹಾಗೂ 35ನೇ ನಿಮಿಷಗಳಲ್ಲಿ ಗೋಲು ಗಳಿಸಿ ಹ್ಯಾಟ್ರಿಕ್ ಸಾ‘ನೆ ಮಾಡಿದರು. ಮನ್‌ಪ್ರೀತ್ ಸಿಂಗ್ 3 ಮತ್ತು 17 ನಿಮಿಷಗಳಲ್ಲಿ ಗೋಲು ಗಳಿಸಿದರು. ಲಲಿತ್ ಉಪಾಧ್ಯಾ  18 ಮತ್ತು 19, ವರುಣ್ ಕುಮಾರ್ 23 ಹಾಗೂ 30 ನಿಮಿಷಗಳಲ್ಲಿ ತಲಾ 2 ಗೋಲು ಗಳಿಸಿದರು. ಎಸ್.ವಿ. ಸುನಿಲ್, (7ನೇ ನಿಮಿಷ), ವಿವೇಕ್ ಸಾಗರ್ ಪ್ರದಾಸ್ (14ನೇ ನಿಮಿಷ), ಮನ್‌ದೀಪ್ ಸಿಂಗ್(21ನೇ ನಿಮಿಷ), ಅಮಿತ್ ರೋಹಿದಾಸ್ (27ನೇ ನಿಮಿಷ), ದಿಲ್‌ಪ್ರೀತ್ ಸಿಂಗ್ (48ನೇ ನಿಮಿಷ), ಚಿಂಗನ್‌ಸ್ಲನಾ ಸಿಂಗ್(51ನೇ ನಿಮಿಷ), ಸಿಮ್ರಾನ್‌ಜಿತ್ ಸಿಂಗ್ (53ನೇ ನಿಮಿಷ ) ಹಾಗೂ ಸುರೀಂದರ್ ಕುಮಾರ್ 55೫ನೇ ನಿಮಿಷ) ಹೀಗೆ ಗೋಲ್ ಕೀಪರ್ ಹೊರತುಪಡಿಸಿ ತಂಡದಲ್ಲಿರುವ ಎಲ್ಲ ಆಟಗಾರರು ಗೋಲು ಗಳಿಸಿದ್ದಾರೆ.
ಭಾರತದ ಆಟಗಾರರು 38 ಬಾರಿ ಫೀಲ್ಡ್ ಗೋಲ್‌ಗೆ ಪ್ರಯತ್ನ ಮಾಡಿದ್ದು,ಅದರಲ್ಲಿ  17 ಯಶಸ್ಸು ಕಂಡಿದ್ದಾರೆ, ಅದೇ ರೀತಿ 21 ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿದ್ದು, ಅದರಲ್ಲಿ 9 ಗೋಲು ಗಳಿಸಿರುತ್ತಾರೆ. ಇಂಡೋನೇಷ್ಯಾ ವಿರುದ್ಧವೂ ಭಾರತದ ಆಟಗಾರರು 17 ಗೋಲುಗಳನ್ನು ಗಳಿಸಿದ್ದರು.

Related Articles