ಪಾಕ್ ಆಟಗಾರರಿಗೆ ವೀಸಾ ನೀಡಲು ಭಾರತ ಸಮ್ಮತಿ

0
179
ದೆಹಲಿ:

ಇದೇ ತಿಂಗಳು 28 ರಿಂದ ಆರಂಭವಾಗುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕಕ್ಕೆ ಭಾರತ ಸರಕಾರ ವೀಸಾ ನೀಡಲಿದೆ. ಪಾಕಿಸ್ತಾನ ಕಳೆದ ಒಂದು ತಿಂಗಳು ಹಿಂದೆಯೇ ವೀಸಾ ಕೋರಿ ಅರ್ಜಿ ಸಲ್ಲಿಸಿತ್ತು.

ಕಳೆದ 2014ರಿಂದೀಚಿಗೆ ರಾಜಕೀಯ ಕಾರಣಗಳಿಂದಾಗಿ ಪಾಕಿಸ್ತಾನಕ್ಕೆ ಭಾರತ ವೀಸಾ ನೀಡಲು ನಿರಾಕರಿಸಿತ್ತು. ಆದ್ದರಿಂದ 2016ರಲ್ಲಿ ನಡೆದಿದ್ದ ಕಿರಿಯರ ಹಾಕಿ ವಿಶ್ವಕಪ್‍ನಿಂದ ಪಾಕಿಸ್ತಾನ ತಂಡ ಭಾಗವಹಿಸಿರಲಿಲ್ಲ. ಆದರೆ, ಇದೀಗ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಭಾರತ ಸರ್ಕಾರವನ್ನು ವೀಸಾ ನೀಡುವಂತೆ ಮನವಿ ಮಾಡಿದ್ದರಿಂದ ಪಾಕಿಸ್ತಾನಕ್ಕೆ ವೀಸಾ ನೀಡಲಾಗುತ್ತಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.