Sunday, September 8, 2024

ಭಟ್ಕಳದಲ್ಲಿ ರಾಷ್ಟ್ರೀಯ ಬೀಚ್‌ ಫುಟ್ಬಾಲ್‌ಗೆ ಆಯ್ಕೆ ಟ್ರಯಲ್ಸ್‌

ಬೆಂಗಳೂರು: ಗುಜರಾತ್‌ನ ಸೂರತ್‌ನಲ್ಲಿ ಜನವರಿ 24 ರಿಂದ ಫೆಬ್ರವರಿ 1 ರವೆಗೆ ದೇಶದಲ್ಲಿ ಮೊದಲ ಬಾರಿಗೆ ನಡೆಯಲಿರುವ ಹೀರೋ ರಾಷ್ಟ್ರೀಯ ಫುಟ್ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ತಂಡದ ಆಯ್ಕೆ ಟ್ರಯಲ್ಸ್‌ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆಯಲಿದೆ.

ಭಟ್ಕಳದಲ್ಲಿ ಜನವರಿ 7 ಮತ್ತು 8 ರಂದು ಆಯ್ಕೆ ಟ್ರಯಲ್ಸ್‌ ನಡೆಯಲಿದ್ದು, ಆಸಕ್ತರು ಬೆಂಗಳೂರು ಫಟ್ಬಾಲ್‌ ಕ್ರೀಡಾಂಗಣದಲ್ಲಿರುವ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬಹುದು. ಅಥವಾ ceoksfa@gmail.com ಗೆ ಮೇಲ್‌ ಮಾಡಿ ತಮ್ಮ ಹೆಸರನ್ನು ನೋದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಲೀಂ -8050296058 ಅಥವಾ ಆದಿತ್ಯ 7338584114 ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಬಹದು ಎಂದು ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ. ಸತ್ಯನಾರಾಯಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುಜರಾತ್‌ ಫುಟ್ಬಾಲ್‌ ಸಂಸ್ಥೆಯ ಆಶ್ರದಯಲ್ಲಿ ನಡೆಯಲಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ದೇಶದ 20ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳಲಿವೆ. ಗುಜರಾತ್‌ನ ದುಮಾಸ್‌ ಬೀಚ್‌ನಲ್ಲಿ ಈ ಚೊಚ್ಚಲ ಚಾಂಪಿಯನ್‌ಷಿಪ್‌ ನಡೆಯಲಿದೆ.

ಡಿ ಗುಂಪಿನಲ್ಲಿ ಕರ್ನಾಟಕ: ಕರ್ನಾಟಕ ತಂಡ ಡಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಗೋವಾ, ಅರುಣಾಚಲಪ್ರದೇಶ, ದಾದರ್‌ ಮತ್ತು ನಾಗರಹವೇಲಿ, ಅಂಡಮಾನ್‌ ಮತ್ತು ದಿವು ಹಾಗೂ ಒಡಿಶಾ ತಂಡಗಳು ಸೇರಿವೆ.

ಎ ಗುಂಪು: ಹಿಮಾಚಲ ಪ್ರದೇಶ, ಜಾರ್ಖಂಡ್‌, ಬಿಹಾರ, ಲಕ್ಷದ್ವೀಪ, ಅಂಡಮಾನ್‌ ಮತ್ತು ನಿಕೋಬಾರ್‌.

ಬಿ ಗುಂಪು: ಗುಜರಾತ್‌, ರಾಜಸ್ಥಾನ್‌, ಸರ್ವಿಸಸ್‌, ಕೇರಳ ಮತ್ತು ಮಧ್ಯಪ್ರದೇಶ್‌.

ಸಿ ಗುಂಪು: ಮಿಜೋರಂ, ಆಂಧ್ರಪ್ರದೇಶ್‌, ಉತ್ತರಾಖಂಡ್‌, ಮಣಿಪುರ ಮತ್ತು ದೆಹಲಿ.

 

Related Articles