Saturday, October 12, 2024

ಏಷ್ಯಾಕಪ್‌ ಹಾಕಿ: ಭಾರತ-ಮಲೇಷ್ಯಾ ಪಂದ್ಯ 3-3ರಲ್ಲಿ ಡ್ರಾ

ಜಕಾರ್ತ:  ಕೊನೆಯ ಕ್ಷಣದಲ್ಲಿ ಎದುರಾಳಿ ತಂಡಕ್ಕೆ ಗೋಲು ನೀಡುವ ತನ್ನ ಹಳೆ ಅಭ್ಯಾಸವನ್ನು ಮುಂದುವರಿಸಿದುದರ ಪರಿಣಾಮ ಭಾರತ ತಂಡ ಏಷ್ಯಾ ಕಪ್‌ ಹಾಕಿ ಚಾಂಪಿಯನ್‌ಷಿಪ್‌ನ ಎರಡನೇ ಸೂಪರ್‌ 4 ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಡ್ರಾ ಸಾಧಿಸಿದೆ.

ಈ ಫಲಿತಾಂಶದ ಮೂಲಕ ಭಾರತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಮುಂದಿನ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ.

ಭಾರತದ ಪರ ವಿಷ್ಣುಕಾಂತ್‌ ಸಿಂಗ್‌ (32ನೇ ನಿಮಿಷ), ಎಸ್‌.ವಿ, ಸುನಿಲ್‌ (53ನೇ ನಿಮಿಷ) ಮತ್ತು ನೀಲ ಸಂಜೀಪ್‌ ಕ್ಸೆಸ್‌ (55ನೇ ನಿಮಿಷ) ಗೋಲು ಗಳಿಸಿದರು. ಮಲೇಷ್ಯಾ ಪರ ರಹೀಂ (12, 21 ಮತ್ತು 56ನೇ ನಿಮಿಷ) ಎಲ್ಲ ಮೂರು ಗೋಲುಗಳನ್ನು ಗಳಿಸಿದರು. ಹಿಂದಿನ ಪಂದ್ಯದಲ್ಲಿ ಭಾರತ ತಂಡ ಜಪಾನ್‌ ವಿರುದ್ಧ 2-1 ಗೋಲುಗಳಿಂದ ಜಯ ಗಳಿಸಿತ್ತು.

ದಿನದ ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡ ಜಪಾನ್‌ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಜಯ ಗಳಿಸಿತು. ಗೋಲುಗಳ ಅಂತರದಲ್ಲಿ ದಕ್ಷಿಣ ಕೊರಿಯಾ (5-3) +2 ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ನಾಲ್ಕು ತಂಡಗಳಲ್ಲಿ ಅಗ್ರ ಸ್ಥಾನ ಗಳಿಸುವ ಎರಡು ತಂಡಗಳು ಫೈನಲ್‌ ಪ್ರವೇಶಿಸಲಿವೆ. ಜಪಾನ್‌ ಎರಡು ಪಂದ್ಯಗಳಲ್ಲಿ ಸೋತ ಕಾರಣ ಫೈನಲ್‌ನಿಂದ ದೂರ ಉಳಿಯಲಿದೆ.

ಸುನಿಲ್‌ ಮಿಂಚು: ಬಹಳ ಸಮಯ ಭಾರತ ತಂಡದಿಂದ ಹೊರಗುಳಿದಿದ್ದ ಅನುಭವಿ ಆಟಗಾರ, ಕನ್ನಡಿಗ ಎಸ್‌.ವಿ ಸುನಿಲ್‌ ಮತ್ತೆ ಆಟದಲ್ಲಿ ಲಯ ಕಂಡುಕೊಂಡಿದ್ದು ಸಂಸದ ವಿಚಾರ. ಹಿಂದಿನ ಪಂದ್ಯದಲ್ಲಿ ಗೋಲು ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸುನಿಲ್‌, ಮಲೇಷ್ಯಾ ವಿರುದ್ಧ ಅದ್ಭುತ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ʼಹಾಕಿ ಅಂಗಣದ ಬೋಲ್ಟ್‌ʼ  ಎಂದೇ ಜನಪ್ರಿಯಗೊಂಡಿರುವ ಸುನಿಲ್‌ ತಮ್ಮ ನೈಜ ಆಟ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related Articles