Saturday, April 20, 2024

ಮಂಗಳೂರು ವಿವಿ ಕ್ರಾಸ್ ಕಂಟ್ರಿ: ಆಳ್ವಾಸ್ ಸಮಗ್ರ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ

ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಜಂಟಿಯಾಗಿ ಆರೋಜಿಸಿದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ  ಮೂಡಬಿದಿರೆಯ ಆಳ್ವಾಸ್ ತಂಡ ಸತತ ೧೫ನೇ ಬಾರಿಗೆ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

ಪುರುಷರ ವಿಭಾಗದಲ್ಲಿ ಅಗ್ರ ಸ್ಥಾನದ ಪಡೆದ ಆಳ್ವಾಸ್ ಮೂಡಬಿದಿರೆಯ ತಂಡ ಕುರುಂಜಿ ವಿಶ್ವನಾಥ ಗೌಡ ಸ್ಮಾರಕ ಪರ್ಯಾಯ ಲಕ ಹಾಗೂ ಮಹಿಳೆಯರ ವಿಭಾಗದಲ್ಲಿ ಕೈಕುರೆ ರಾಮಣ್ಣ ಗೌಡ ಸ್ಮಾರಕ ಪರ್ಯಾಯ ಲಕ ಗೆದ್ದುಕೊಂಡಿದೆ. ಮಂಗಳೂರು ವಿಶ್ವವಿದ್ಯಾಲಯ ಇತಿಹಾಸದಲ್ಲೇ ಸತತ ೧೫ ಬಾರಿ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡ ಮೊದಲ ತಂಡವೆಂಬ ಹೆಗ್ಗಳಿಕೆಗೆ ಆಳ್ವಾಸ್ ತಂಡ ಪಾತ್ರವಾಗಿದೆ.
ಎಸ್‌ಡಿಎಂ ಉಜಿರೆ ತಂಡ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ರನ್ನರ್ ಅಪ್ ಸ್ಥನ ಗೆದ್ದಕೊಂಡಿತು. ಪುರುಷರ ವಿಭಾಗದಲ್ಲಿ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ತೃತೀಯ ಹಾಗೂ ಪುತ್ತೂರಿನ ಶ್ರೀ ರಾಮಕುಂಜ ಕಾಲೇಜು ವನಿತೆಯರ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಸುಬ್ರಹ್ಮಣ್ಯದ ಕೆಎಸ್‌ಎಸ್ ಕಾಲೇಜು ತೃತೀಯ ಹಾಗೂ, ಡಾ. ಎನ್.ಎಸ್. ಎ ಎಂ ಕಾಲೇಜು ನಾಲ್ಕನೇ ಸ್ಥಾನ ಗಳಿಸಿತು. ಈ ಬಾರಿಯ ಕ್ರಾಸ್ ಕಂಟ್ರಿಯಲ್ಲಿ ೩೨ ಕಾಲೇಜುಗಳ ಒಟ್ಟು ೨೯೪ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಉಪನ್ಯಾಸಕಿ ರೋಶ್ನಿ ಯಶವಂತ್ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಕುಮಾರ್ ಸ್ವಾಗತಿಸಿದರು. ಉಪನ್ಯಾಸಕ ಶಿವ ಕುಮಾರ್ ವಂದನಾರ್ಪಣೆಗೈದರು. ಮಂಗಳೂರು ವಿಶ್ವವಿದ್ಯಾನಿಲಯ ಹಂಗಾಮಿ ಉಪಕುಲಪತಿ ಡಾ. ಕಿಶೋರ್ ಕುಮಾರ್, ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಸತೀಶ್ ಭಟ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಡಾ. ಪಿ.ಬಿ. ಪ್ರಸನ್ನ ಸಮಾರೋಪ ಸಮಾರಂಬಭದ ಅಧ್ಯಕ್ಷತೆ ವಹಿಸಿದ್ದರು. ವಿನೋದ್ ಬೊಳ್ಳೂರು, ವೇಣುಗೋಪಾಲ್ ನೋಂಡ ಹಾಗೂ ಹಿಮಕರ ಕದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related Articles