Friday, December 13, 2024

ಅಥ್ಲೀಟ್‌ಗಳ ಫಿಟ್ನೆಸ್‌ಗೆ ಆಯುರ್ವೇದದ ಹವೋಮಾ ವೆಲ್ನೆಸ್

ಸ್ಪೋರ್ಟ್ಸ್ ಮೇಲ್ ವರದಿ

ಕ್ರೀಡಾಪಟುವೊಬ್ಬ ಪದಕ ಗೆದ್ದಾಗ ನಾವೆಲ್ಲರೂ ಸಂಭ್ರಮ ವ್ಯಕ್ತಪಡಿಸುತ್ತೇವೆ. ಆದರೆ ಆ ಪದಕ ಗೆಲ್ಲುವುದರ ಹಿಂದಿನ ಶ್ರಮದ ಬಗ್ಗೆ ನಮಗೆ ಅರಿವಿರುವುದಿಲ್ಲ.

ಅದೇ ಕ್ರೀಡಾಪಟು ಇನ್ನೊಂದು ಕ್ರೀಡಾಕೂಟದಲ್ಲಿ ಸೋತಾಗಲೂ ನಾವು ಆ ಬಗ್ಗೆ ಯೋಚಿಸುವುದಿಲ್ಲ. ಗೆದ್ದವರನ್ನೇ ಅಭಿನಂದಿಸುತ್ತೇವೆ. ಕ್ರೀಡಾಪಟುಗಳ ಬದುಕಿನಲ್ಲಿ ಈ ಏರು ಪೇರು ಸಾಮಾನ್ಯ. ಫಿಟ್ ಇರುವ ಅಥ್ಲೀಟ್ ಗೆಲ್ಲುತ್ತಾರೆ. ಗಾಯದ ಸಮಸ್ಯೆ ಇರುವ  ಅಥವಾ ಫಿಟ್ ಆಗಿರದ ಅಥ್ಲೀಟ್ ಸೋಲನುಭವಿಸುತ್ತಾರೆ. ಕ್ರೀಡಾಪಟುಗಳ ಗಾಯವನ್ನು ಗುಣಪಡಿಸಲು ಆನೇಕ ವೈದ್ಯಕೀಯ ಕೇಂದ್ರಗಳಿವೆ. ಆಸ್ಪತ್ರೆಗಳಿಗೆ ಆದರೆ ಈಗ ಬೆಂಗಳೂರಿನಲ್ಲಿ ಆಯುರ್ವೇದದ ಮೂಲಕ ಹಲವಾರು  ವಿಧದ  ಗಾಯದ ಸಮಸ್ಯೆಗಳಿಗೆ ಪರಿಹಾರ ನೀಡಲು ಹವೋಮಾ ವೆಲ್ನೆಸ್ ಹಾಗೂ ಇನ್ವಿಕ್ಟೆಸ್  ಪರ್ಫಾರ್ಮೆನ್ಸ್ ಲ್ಯಾಬ್ ಕಾರ್ಯನಿರ್ವಹಿಸುತ್ತಿದ್ದು, 2014 ಹಾಗೂ 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಸತೀಶ್ ಕುಮಾರ್ ಶಿವಲಿಂಗ ಅವರು ಫಿಟ್ನೆಸ್ ಕಳೆದುಕೊಂಡಾಗ ಆಯುರ್ವೇದದ ಚಿಕಿತ್ಸೆ ಮೂಲಕ ಅವರನ್ನು ಮತ್ತೆ ಸ್ಪರ್ಧಗೆ ಇಳಿಯುವಂತೆ ಮಾಡಿದ್ದು  ಹವೋಮಾ ವೆಲ್ನೆಸ್.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತೀಶ್ ಕುಮಾರ್ ಹವೋಮಾ ವೆಲ್ನೆಸ್ ಮೂಲಕ ತಾವು ಹೇಗೆ ಯಶಸ್ಸಿನ ಹೆಜ್ಜೆ ತುಳಿದಿರುವೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ‘ಜಕಾರ್ತನಲ್ಲಿ ನಡೆದ ಏಷ್ಯನ್ ಗೇಮ್ಸ್ ವೇಳೆ ಗಾಯಗೊಂಡಾಗ ಅಲ್ಲಿಯ ಡಾಕ್ಟರ್‌ಗಳು ಎರಡು ತಿಂಗಳ ಕಾಲ ಕ್ರೀಡೆಯಿಂದ ದೂರ ಉಳಿಯಬೇಕು, ಸಂಪೂರ್ಣ ವಿಶ್ರಾಂತಿ ಪಡೆದುಕೊಳ್ಳಬೇಕು ಎಂದು ಸೂಚಿಸಿದರು. ಅವರ ಸಲಹೆ ಪ್ರಕಾರ ನಾನು ನಾಲ್ಕು ತಿಂಗಳ ನಂತರ ಅಭ್ಯಾಸ ಆರಂಭಿಸಬೇಕಿತ್ತು. ಭಾರತಕ್ಕೆ ಹಿಂದಿರುಗಿದ ನಂತರ  ಹವೋಮಾ ವೆಲ್ನೆಸ್‌ನಲ್ಲಿ ಡಾಯ ಶಾಜಿ ಕನ್ನೋತ್ ಅವರಲ್ಲಿ  ಆಯುರ್ವೇದ ಚಿಕಿತ್ಸೆ ಪಡೆಯಲಾರಂಭಿಸಿದೆ. ಇದೇ ವೇಳೆ ಏಕಕಾಲದಲ್ಲಿ  ಇನ್ವಿಕ್ಟಸ್  ಪರ್ಫಾರ್ಮೆನ್ಸ್  ಲ್ಯಾಬ್‌ನಲ್ಲಿ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸಿದೆ. ನಾಲ್ಕು ದಿನಗಳ ಕಾಲ ನುರಿತ ತಜ್ಞರು ನನ್ನ ಫಿಟ್ನೆಸ್ ಬಗ್ಗೆ ಮುತುವರ್ಜಿ ವಹಿಸಿದರು. ನೋವು ದಿನದಿಂದ ದಿನಕ್ಕೆ ಕಡಿಮೆಯಾಗತೊಡಗಿತು. ಹತ್ತೇ ದಿನಗಳಲ್ಲಿ ಗುಣಮುಖನಾದೆ. ಮತ್ತೆ ಹತ್ತು ದಿನಗಳಲ್ಲಿ ಎಲ್ಲ ಚಿಕಿತ್ಸೆಯಿಂದ ದೂರನಾದೆ. 2020ರ ಒಲಿಂಪಿಕ್ಸ್‌ನಲ್ಲಿ ದೇಶಕ್ಕಾಗಿ ಚಿನ್ನ ಗೆಲ್ಲುವ ಗುರಿ ಹೊತ್ತಿರುವ ನಾನೀಗ ಮತ್ತೆ ಅಭ್ಯಾಸದಲ್ಲಿ ತೊಡಗಿದ್ದೇನೆ,‘ ಎಂದು ಸತೀಶ್ ಕುಮಾರ್ ಹೇಳಿದರು.ಕ್ರೀಡಾ ಪಟುಗಳಿಗಾಗುವ ಗಾಯವನ್ನು ಆದಷ್ಟು ಬೇಗನೆ ಗುಣಪಡಿಸಿ ಅವರನ್ನು ಮತ್ತೆ ಸ್ಪರ್ಧೆಗೆ  ಸಜ್ಜುಗೊಳಿಸುವ ಹವೋಮಾ ವೆಲ್ನೆಸ್ ಹಾಗೂ ಇನ್ವಿಕ್ಟಸ್   ಪರ್ಫಾರ್ಮೆನ್ಸ್  ಲ್ಯಾಬ್‌ನಂಥ ವ್ಯವಸ್ಥೆ ಕ್ರೀಡಾಪಟುಗಳ ಅಗತ್ಯಕ್ಕೆ ಬೇಕಾಗಿದೆ ಎಂದರು.
ಈ ಸಂದರ್ಭರ್ದಲ್ಲಿ ಹವೋಮಾ ವೆಲ್ನೆಸ್‌ನ ಆಡಳಿತ ಹಾಗೂ ವೈದ್ಯಕೀಯ ನಿರ್ದೇಶಕ ಡಾಯ ಶಾಜಿ ಕನ್ನೋತ್ ಹಾಗೂ ಇನ್ವೆಕ್ಟಸ್   ಪರ್ಫಾರ್ಮೆನ್ಸ್  ಸಹ ಸ್ಥಾಪಕ ಹಾಗೂ  ಪರ್ಫಾರ್ಮೆನ್ಸ್  ಕೋಚ್ ವರುಣ್ ಶೆಟ್ಟಿ ಹಾಜರಿದ್ದರು.

Related Articles