Thursday, October 10, 2024

ಉದ್ಯೋಗ ಸಿಗುವ ತನಕ ಕ್ರೀಡಾ ಸಾಧಕರಿಗೆ ಜೀವನ ಭದ್ರತೆ ಅಗತ್ಯ

ಬೆಂಗಳೂರು: ಹಾಕಿ ಇಂಡಿಯಾ ಇತ್ತೀಚೆಗೆ ನಡೆದ ವಾರ್ಷಿಕ ಸಭೆಯಲ್ಲಿ ಒಂದು ಉತ್ತಮ ತೀರ್ಮಾನ ಕೈಗೊಂಡಿತು. ರಾಷ್ಟ್ರೀಯ ತಂಡದಲ್ಲಿ ಅಥವಾ ಸಂಭಾವ್ಯರ ಪಟ್ಟಿಯಲ್ಲಿರುವ ಕೋರ್‌ ಕಮಿಟಿಯ ಆಟಗಾರರಿಗೆ ಸರಕಾರಿ ಅಥವಾ ಸರಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಉದ್ಯೋಗ ಸಿಗದಿದ್ದಲ್ಲಿ ಅವರಿಗೆ ವರ್ಷಕ್ಕೆ 2 ಲಕ್ಷ ರೂ. ನೀಡಲು ತೀರ್ಮಾನಿಸಿರುವುದು ಉತ್ತಮ ನಿರ್ಧಾರ. ಅದೇ ರೀತಿ ಇತರ ಕ್ರೀಡಾಪಟುಗಳ ಬಗ್ಗೆ ಸರಕಾರ ಯೋಚಿಸಬೇಕಾದ ಅಗತ್ಯವಿದೆ. Government should give financial aid to the International athletes those who are unable to get the govt job.

ಒಬ್ಬ ಕ್ರೀಡಾಪಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಉದ್ಯೋಗ ಸಿಗದೆ ಯಾವುದೋ ಖಾಸಗಿ ಕಂಪೆನಿಗಳಲ್ಲಿ ದುಡಿಯಬೇಕಾದ ಅನಿವಾರ್ಯತೆ ಇರುತ್ತದೆ. ಅಂಥ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರಿ ಉದ್ಯೋಗ ಅಥವಾ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗ ಸಿಗುವ ತನಕ ಜೀವನ ಸಾಗಿಸಲು ಆರ್ಥಿಕ ನೆರವು ನೀಡುವ ಬಗ್ಗೆ ಕೇಂದ್ರ ಅಥವಾ ರಾಜ್ಯ ಕ್ರೀಡಾ ಇಲಾಖೆ ಯೋಚಿಸುವುದು ಸೂಕ್ತ.

ಸರಕಾರಕ್ಕೆ ಎಲ್ಲ ಕ್ರೀಡಾಪಟುಗಳಿಗೂ, ಎಲ್ಲ ಸಂದರ್ಭಗಳಲ್ಲೂ ಉದ್ಯೋಗ ನೀಡಲು ಅಸಾಧ್ಯವಾಗಬಹುದು. ಆದರೆ ಅಂತಾರಾಷ್ಟ್ರೀಯ ಮಟ್ಟದ, ಏಷ್ಯನ್‌ ಗೇಮ್ಸ್‌, ಪ್ಯಾರಾ ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌, ಒಲಿಂಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್ಸ್‌ಗಳಲ್ಲಿ ಸ್ಪರ್ಧಿಸಿದವರಿಗೆ ಉದ್ಯೋಗ ಸಿಗುವ ತನಕ ಜೀವನಕ್ಕೆ ಭದ್ರತೆಯನ್ನು ಕಲ್ಪಿಸುವ ಅಗತ್ಯವಿದೆ.

ಒಲಿಂಪಿಕ್ಸ್‌ ಕ್ರೀಡೆಗಳಿಗೆ ಸಂಬಣಧಿಸಿದ ಕ್ರೀಡಾ ಫೆಡರೇಷನ್‌ಗಳು ಈ ವಿಷಯಲ್ಲಿ ಸರಕಾರವನ್ನು ಒತ್ತಾಯಿಸಿ ಕ್ರೀಡಾಪಟುಗಳಿಗೆ ನೆರವಾಬೇಕಾದ ಅಗತ್ಯವಿದೆ.

ಇದರ ತೀವ್ರತೆ ಈಗ ಕಾಣದಿದ್ದರೂ ಮುಂದಿನ ದಿನಗಳಲ್ಲಿ ಸರಕಾರ ಮತ್ತು ಕ್ರೀಡಾ ಸಂಸ್ಥೆಗಳಿಗೆ ಅರಿವಾಗಲಿದೆ. ಈ ಬಗ್ಗೆ ಕ್ರೀಡಾಪಟುಗಳೇ ಒಂದು ದಿನ ಬೇಡಿಕೆ ಸಲ್ಲಿಸಬಹುದು.

Related Articles