Friday, December 13, 2024

ಭಾವಿಕಾ ಟ್ರೋಫಿಗೆ ಅದ್ಧೂರಿಯ ಚಾಲನೆ

ಕೋಟ ರಾಮಕೃಷ್ಣ ಆಚಾರ್ಯ..

ಪಾರಂಪಳ್ಳಿ ವೆಂಕಟರಮಣ ಆಚಾರ್ಯ ಸ್ಮರಣಾರ್ಥ ,
ವಿಶ್ವಕರ್ಮ ಕಲಾವೃಂದ ಹಾಗೂ ಭಾರ್ಗವ ಕ್ರಿಕೆಟರ್ಸ್ ಸಾಲಿಗ್ರಾಮ ತಂಡದ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ
“ಭಾವಿಕಾ ಟ್ರೋಫಿ-2019” ರಾಜ್ಯಮಟ್ಟದ ವಿಶ್ವಕರ್ಮ ಸಮಾಜದ ಪ್ರತಿಷ್ಟಿತ ಪಂದ್ಯಾಟದ ಉದ್ಘಾಟನಾ ಸಮಾರಂಭ ಶನಿವಾರ ಬೆಳಿಗ್ಗೆ  9.30 ಗಂಟೆಗೆ ಸಾಲಿಗ್ರಾಮ ಹಳೆಕೋಟೆ ಮೈದಾನದಲ್ಲಿ ಜರುಗಿತು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ
ಪರಮೇಶ್ವರ ಆಚಾರ್ಯ ಸಿವಿಲ್ ಕಂಟ್ರಾಕ್ಟರ್,ಕಾಳಿಕಾಂಬಾ ದೇವಸ್ಥಾನ ಬಾರ್ಕೂರಿನ ಮೊಕ್ತೇಸರರಾದ
ವಡೇರಹೋಬಳಿ ಶ್ರೀಧರ ಆಚಾರ್ಯ,ವಿರಾಡಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷರು
ಜನಾರ್ಧನ ಆಚಾರ್ಯ ಚೇಂಪಿ,ವಿಶ್ವಕರ್ಮ ಕಲಾವೃಂದ ಚೇಂಪಿ ಇದರ ಅಧ್ಯಕ್ಷರಾದ ರೊ|ಸುಬ್ರಾಯ ಆಚಾರ್ಯ ಮಣೂರು,ವಿಶ್ವಜ್ಯೋತಿ ಮಹಿಳಾ ಬಳಗದ ಅಧ್ಯಕ್ಷೆ ಲೀಲಾವತಿ ಆನಂದ ಆಚಾರ್ಯ,ಬ್ರಹ್ಮಶ್ರೀ ಪುರೋಹಿತ್ ಲಕ್ಷ್ಮೀಕಾಂತ ಶರ್ಮಾ,ರೋಟರಿ ಕೋಟ ಸಿಟಿಯ ಅಧ್ಯಕ್ಷರಾದಸುರೇಶ್ ಆಚಾರ್ಯ ಸಾಲಿಗ್ರಾಮ, ಪಂದ್ಯಾಕೂಟದ ಸಮಿತಿಯ ಅಧ್ಯಕ್ಷರಾದ ಗಾಯತ್ರಿ
ವೆಂಕಟೇಶ ಆಚಾರ್ಯ,ಮನೀಷ್ ನಾಗರಾಜ ಆಚಾರ್ಯ ಹಾಗೂ ಮಾಸ್ಟರ್ ಭಾರ್ಗವ  ದೀಪ ಬೆಳಗಿಸಿ,ಬಲೂನ್ ಹಾರಿಸುವ ಮೂಲಕ ಪಂದ್ಯಾಟದ ಶುಭಾರಂಭಗೈದರು…

Related Articles