Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನಲ್ಲಿ ಸ್ವಾತಂತ್ರ್ಯೋತ್ಸವ ಟೂರ್ನಿ

Sportsmail Desk: ಕುಂದಾಪುರ ತಾಲೂಕಿನಲ್ಲಿ ನೂತನವಾಗಿ ಆರಂಭಗೊಂಡು ಜನಪ್ರಿಯಗೊಳ್ಳುತ್ತಿರುವ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನಲ್ಲಿ ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಕ್ರೀಡಾ ಉದ್ಯಮಿ ಕುಂದಾಪುರದ ಸದಾನಂದ ನಾವುಡ ಅವರ ಗ್ಯಾಲೆಕ್ಸಿ ಸ್ಪೋರ್ಟ್ಸ್‌ ಇಂಡಿಪೆಂಡೆಂಟ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿ ನಡೆಯಲಿದೆ. Galaxy Sports organizing Independent Cup Badminton Tourney at Costa Badminton Center Kundapura.

ಕುಂದಾಪುರದ ಹಂಗಳೂರಿನ ಕೋಡಿ ರಸ್ತೆಯಲ್ಲಿರುವ Costa Badminton Center ನಲ್ಲಿ ಈ ಚಾಂಪಿಯನ್‌ಷಿಪ್‌ ನಡೆಯಲಿದ್ದು, ಸಂಜೆ 3 ಗಂಟೆಯಿಂದ 7 ಗಂಟೆಯವರೆಗೆ ಸ್ಪರ್ಧೆಗಳು ನಡೆಯಲಿವೆ. ಕುಂದಾಪುರ, ಬ್ರಹ್ಮಾವರ ಹಾಗೂ ಬೈಂದೂರು ವ್ಯಾಪ್ತಿಯ ಬ್ಯಾಡ್ಮಿಂಟನ್‌ ಆಟಗಾರರು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಬಹುದು.

15-08-2024ಕ್ಕೆ ಅನುಗುಣವಾಗಿ ವಯೋಮಿತಿಯನ್ನು ಪರಿಗಣಿಸಲಾಗುವುದು. 90+ jumbled ವಿಭಾಗದಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಅಂದರೆ ಇಬ್ಬರು ಆಟಗಾರರ ಒಟ್ಟು ವಯಸ್ಸು 90+ ಆಗಿರಬೇಕು. ಪ್ರವೇಶ ಶುಲ್ಕ 500 ರೂ. ಆಗಿರುತ್ತದೆ.

ಪ್ರಥಮ ಬಹುಮಾನ ಗೆದ್ದವರು 3000 ರೂ. ಹಾಗೂ ಟ್ರೋಫಿ ಮತ್ತು ದ್ವಿತೀಯ ಬಹುಮಾನ ಗೆದ್ದವರು 1500ರೂ. ಹಾಗೂ ಟ್ರೋಫಿ ಜೊತೆಯಲ್ಲಿ ಆಕರ್ಷಕ ಬಹುಮಾನವಿರುತ್ತದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

ಚಂದ್ರ ಗೌಡ: 7019872388

ಪ್ರಶಾಂತ್‌: 6362433411


administrator