Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಅಂಗಣದಲ್ಲೇ ಕುಸಿದು ಬಿದ್ದು ಫುಟ್ಬಾಲ್‌ ಆಟಗಾರ ಸಾವು!

ಘಾನಾದ ಮಾಜಿ ಅಂತಾರಾಷ್ಟ್ರೀಯ ಆಟಗಾರ ರಫಾಯಲ್‌ ದ್ವಾಮೇನ ಅವರು ತಮ್ಮ ಕ್ಲಬ್‌ಪರ ಆಡುತ್ತಿರುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. Ghana international football player dies at the age of 28 after on pitch collapse.

ದ್ವಮೇನ ಹಿಂದೊಮ್ಮೆ ಇದೇ ರೀತಿಯಲ್ಲಿ ಕುಸಿದು ಬಿದ್ದರೂ ನಂತರ ಚೇತರಿಸಿಕೊಂಡು ಪಂದ್ಯದಲ್ಲಿ ಮುಂದುವರಿದಿದ್ದರು. ಆದರೆ ಈ ಬಾರಿ ಎಲ್ಲ ಪ್ರಥಮ ಚಿಕಿತ್ಸೆ ನೀಡಿದರೂ ಅವರನ್ನು ಬದುಕಿಸಿಕೊಳ್ಳಲಾಗಲಿಲ್ಲ. ಅಲ್ಬೇನಿಯಾದ ಕ್ಲಬ್‌ ಕೆಎಫ್‌ ಎಗ್ನಾಷಿಯಾ ಪರ ಆಡುವಾಗ ಘಟನೆ ಸಂಭವಿಸಿದೆ. ಪಾರ್ಟಿಜಾನಿ ಹಾಗೂ ಕೆಎಫ್‌ ಎಗ್ನಾಷಿಯಾ ನಡುವೆ ಪಂದ್ಯ ನಡೆಯುತ್ತಿರುವಾಗ ದ್ವಮೇನ ಕುಸಿದು ಬಿದ್ದರು. ಕೂಡಲೇ ಅಂಬುಲೆನ್ಸ್‌ ಹಾಗೂ ವೈದ್ಯಕೀಯ ತಂಡ ಪಿಚ್‌ಗೆ ದಾವಿಸಿತ್ತು. ಪ್ರಥಮ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಘಾನಾ ತಂಡದ ಪರ ಅಂತಾರಾಷ್ಟ್ರೀಯ ಫುಟ್ಬಾಲ್‌ ಆಡಿದ್ದ 28 ವರ್ಷದ ದ್ವಮೇನ ಉತ್ತಮ ಪ್ರದರ್ಶನ ನೀಡಿದ್ದರು, ರಾಷ್ಟ್ರೀಯ ತಂಡಕ್ಕೆ ಅವರ ಕೊಡುಗೆ ಅಪಾರವಾದುದು ಎಂದು ಘಾನಾ ಫುಟ್ಬಲ್‌ ಸಂಸ್ಥೆಯು ತಿಳಿಸಿದೆ. ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಎರಡು ಗೋಲುಗಳನ್ನು ಗಳಿಸಿದ್ದ ದ್ವಮೇನ, ಹಲವಾರು  ಯೂರೋಪಿಯನ್‌ ಕ್ಲಬ್‌ ಪರ ಆಡಿದ್ದರು. ಲೆವಾಂಟೆ, ಎಫ್‌ಸಿ ಜುರಿಚ್‌ ಹಾಗೂ ಹಾಗೂ ಬ್ರಿಗ್ಟನ್‌ ಪರ ಆಡಿರುವ ದ್ವಮೇನ ಉತ್ತಮ ಗೋಲ್‌ ಸ್ಕೋರರ್‌ ಎನಿಸಿದ್ದಾರೆ. ಜರಿಚ್‌ ಕ್ಲಬ್‌ ಪರ 18 ಗೋಲುಗಳನ್ನು ಗಳಿಸಿದ್ದಾರೆ.  2021ರಲ್ಲಿ ಆಸ್ಟ್ರಿಯಾ ಕ್ಲಬ್‌ ಬಿಡಬ್ಲ್ಯು ಲಿನ್ಜ್‌ ಪರ ಆಡುವಾಗ ಕುಸಿದು ಬಿದ್ದಿದ್ದ ದ್ವಮೇನ, ಆ ನಂತರ ಚೇತರಿಸಿಕೊಂಡು ಎಗ್ನಾಷಿಯಾ ತಂಡವನ್ನು ಪ್ರತಿನಿಧಿಸಿದ್ದರು.


administrator