Saturday, October 12, 2024

ಬಲ್ಗೇರಿಯಾ ವಿರುದ್ಧ ಡ್ರಾ ಸಾಧಿಸಿದ ಭಾರತ

ನವದೆಹಲಿ:

ಉದಯೋನ್ಮುಖ ಆಟಗಾರ ಆಕಾಶ್ ಮಿಶ್ರಾ ಅವರು ಮಾಡಿದ ಭರ್ಜರಿ ಹೆಡರ್ ನೆರವಿನಿಂದ 19 ವರ್ಷದೊಳಗಿನ ಫುಟ್ಬಾಲ್ ಟೂರ್ನಿಯಲ್ಲಿ ಭಾರತ 1-1 ರಿಂದ ಬಲ್ಗೇರಿಯಾ ತಂಡದ ವಿರುದ್ಧ ಡ್ರಾ ಸಾಧಿಸಿತು.

ಪೆಟ್ರಾಸ್ಕಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ನಡೆದ ಪಂದ್ಯದಲ್ಲಿ ಭಾರತ ಜೂನಿಯರ್ ತಂಡ ಅಮೋಘ ಪ್ರದರ್ಶನ ನೀಡಿ, ಮೂರು ಪಂದ್ಯಗಳಿಂದ ಒಂದು ಅಂಕ ಕಲೆ ಹಾಕಿತು.

ಬಲ್ಗೇರಿಯಾ ತಂಡದ ಪರ ಮೊಹಮ್ಮದ್ ರಫಿ ಎಳನೇ ನಿಮಿಷದ ಗೋಲು ಬಾರಿಸಿ, ಭಾರತ ದ ಮೇಲೆ ಒತ್ತಡ ಹೇರುವ ತಂಡ ಫಲಿಸಿತು. ಈ ಅವಧಿಯಲ್ಲಿ ಭಾರತ ತಂಡ ಗೋಲು ಬಾರಿಸುವಲ್ಲಿ ಹಿನ್ನಡೆ ಅನುಭವಿಸಿತು. ಎರಡನೇ ಅವಧಿಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಆಕಾಶ್ ಅಮೋಘ ಪ್ರದರ್ಶನ ನೀಡಿ ಗೋಲು ಬಾರಿಸಿದರು.
ಕೊನೆಯ ಕ್ಷಣದ ವರೆಗೂ ಬಲ್ಗೇರಿಯಾ ಗೋಲು ಬಾರಿಸುವ ಆಸೆಗೆ ರಕ್ಷಣಾ ಆಟಗಾರರು ಪೆಟ್ಟು ನೀಡಿದರು. ಪರಿಣಾಮ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.

Related Articles