ಜೋರ್ಡನ್ ವಿರುದ್ಧ ಪಂದ್ಯದಿಂದ ಚೆಟ್ರಿ ಔಟ್

0
201
ದೆಹಲಿ: 

ಭಾರತದ ಸ್ಟಾರ್ ಸ್ಟೈಕರ್ ಸುನಿಲ್ ಚೆಟ್ರಿ ತಮ್ಮ ಪಾದದ ಗಾಯದಿಂದಾಗಿ ಅವರು ಜೊರ್ಡಾನ್ ವಿರುದ್ಧ ಮುಂಬರುವ ಸ್ನೇಹಯುತ ಅಂತಾರಾಷ್ಟ್ರೀಯ ಪಂದ್ಯದಿಂದ ದೂರ ಉಳಿಯಲಿದ್ದಾರೆ.

ಕಳೆದ ನ.5 ರಂದು ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಕೇರಳ ಬ್ಲಾಸ್ಟರ್ಸ್ ತಂಡದ ವಿರುದ್ಧ ಆಡುವ ವೇಳೆ ಅವರ ಪಾದಕ್ಕೆ ಗಾಯವಾಗಿತ್ತು. ಚಿಕಿತ್ಸೆ ಪಡೆಯುತ್ತಿರುವ ಅವರು, ಇನ್ನೂ ಎರಡು ವಾರಗಳು ವಿಶ್ರಾಂತಿ ಅಗತ್ಯವಿರುವುದರಿಂದ ಭಾರತ ತಂಡದಲ್ಲಿ ಮುಂದಿನ ಪಂದ್ಯ ಆಡುತ್ತಿಲ್ಲ.