ದುಬೈ:
ವೆಸ್ಟ್ ಇಂಡೀಸ್ ವಿರುದ್ಧ ಭಾರತ ಚುಟುಕು ಸರಣಿ ಗೆಲ್ಲಲು ಮಹತ್ವದ ಪಾತ್ರವಹಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಚೈನಾಮನ್ ಕುಲ್ದೀಪ್ ಯಾದವ್ ಅವರು ಟಿ-20 ಮಾದರಿಯಲ್ಲಿ ವೃತ್ತಿ ಜೀವನದಲ್ಲಿ ಮೊದಲ ಬಾರಿ ಐಸಿಸಿ ರ್ಯಾಂಕಿಂಗ್ 23 ಸ್ಥಾನಕ್ಕೇರಿದ್ದಾರೆ.
ಆಡಿದ ಎರಡು ಪಂದ್ಯಗಳಲಿ ಐದು ವಿಕೆಟ್ ಕಬಳಿಸುವ ಮೂಲಕ ಭಾರತ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಲು ನೆರವಾಗಿದ್ದರು. ಹಾಗಾಗಿ, ಅವರು 14 ಸ್ಥಾನಗಳು ಜಿಗಿಯುವ ಮೂಲಕ 23ನೇ ಸ್ಥಾನಕ್ಕೇರಿದರು.
ಇನ್ನೂ, ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಒಂಬತ್ತು ಸ್ಥಾನಗಳು ಏರಿಕೆಯೊಂದಿಗೆ 19 ನೇ ಕ್ರಮಾಂಕಕ್ಕೇರಿದ್ದಾರೆ. ಬುಮ್ರಾ ಐದು ಸ್ಥಾನಗಳಲ್ಲಿ ಏರಿಕೆ ಕಂಡು ಇದೀಗ 21ನೇ ಸ್ಥಾನದಲ್ಲಿದ್ದಾರೆ.