Thursday, March 28, 2024

ಮತ್ತೆ ಬಂತು ಇಂಡಿಯನ್ ಸೂಪರ್ ಲೀಗ್

ಸ್ಪೋರ್ಟ್ಸ್ ಮೇಲ್ ವರದಿ 

ಭಾರತದಲ್ಲಿ ಫುಟ್ಬಾಲ್‌ಗೆ ಹೊಸ ರೂಪು ನೀಡಿ, ಯುವ ಫುಟ್ಬಾಲಿಗರಿಗೆ ಬದುಕು ನೀಡಿದ ಹೀರೋ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಮತ್ತೆ ಬಂದಿದೆ. 2018-19ರ ಋತುವಿನ ಮೊದಲಾ‘ರ್ದ ವೇಳಾಪಟ್ಟಿಯ ಮೊದಲ ಪಂದ್ಯ ಸೆ. 29ರಂದು ಕೋಲ್ಕೊತಾದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ  ಎಟಿಕೆ ಹಾಗೂ ಕೇರಳ ಬ್ಲಾಸ್ಟರ್ಸ್ ಪರಸ್ಪರ ಸೆಣಸಲಿವೆ. 12 ಸುತ್ತುಗಳು ಹಾಗೂ 56 ಪಂದ್ಯಗಳು  ಈ ಬಾರಿ ಮೊದಲ ಹಂತದಲ್ಲಿ  ನಡೆಯಲಿವೆ.

ಐದನೇ ಆವೃತ್ತಿಯ ಐಎಸ್‌ಎಲ್ ಹೊಸ ರೂಪ ಪಡೆದು ಕಾಣಿಸಿಕೊಳ್ಳಲಿದೆ. ಸಾಲ್ಟ್ ಲೇಕ್ ಅಂಗಣದಲ್ಲಿ  ಎರಡು ಬಾರಿ ಚಾಂಪಿಯನ್ ಎಟಿಕೆ ಬಲಿಷ್ಠ ಕೇರಳ ತಂಡವನ್ನು ಎದುರಿಸಲಿದೆ. ಎಟಿಕೆ ಕಳೆದ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಲವಾಗಿತ್ತು.
ಸೆ. 30 ರಂದು ದಕ್ಷಿಣ ಭಾರತದ ಡರ್ಬಿ ಎಂದೇ ಕರೆಯಲ್ಪಡುವ ಪಂದ್ಯದಲ್ಲಿ ಬೆಂಗಳೂರು ಎಫ್ಸಿ ಹಾಗೂ ಚೆನ್ನೈಯನ್ ಎಫ್ಸಿ ತಂಡಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಈ ಬಾರಿ ಐಎಸ್‌ಎಲ್‌ನಲ್ಲಿ ಎರಡು ಬಾರಿ ಬಿಡುವಿರುತ್ತದೆ.
ಅಕ್ಟೋಬರ್ 8 ರಿಂದ 16 ಹಾಗೂ 12 ರಿಂದ 20 ನವೆಂಬರ್ 2018ರವರೆಗೆ ಫಿಫಾ  ವೇಳಾಪಟ್ಟಿಗೆ ಅವಕಾಶ ಮಾಡಿಕೊಡಲಾಗಿದೆ. ಅದೇ ರೀತಿ ಡಿಸೆಂಬರ್ 17ರಿಂದ ಭಾರತ ರಾಷ್ಟ್ರೀಯ ತಂಡ ಯುಎಇಯಲ್ಲಿ  ನಡೆಯಲಿರುವ ಏಷ್ಯಾಕಪ್‌ಗಾಗಿ ಭಾರತ ತಂಡ ಶಿಬಿರದಲ್ಲಿ ಪಾಲ್ಗೊಳ್ಳಲಿದೆ. 2019ರ ವೇಳಾಪಟ್ಟಿಯನ್ನು ಲೀಗ್‌ನ ಆಡಳಿತ ಮಂಡಳಿ ನಂತರದ ದಿನಗಳಲ್ಲಿ ಪ್ರಕಟಿಸಲಿದೆ. ಪ್ರತಿ ದಿನ ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದ್ದು, ಭಾನುವಾರ ಎಂದಿನಂತೆ ಎರಡು ಪಂದ್ಯಗಳಿರುತ್ತವೆ.

ಮೊದಲ ಪಂದ್ಯ, ಹಳೆ ಫೈನಲ್!

ಬೆಂಗಳೂರು ಎಫ್ ಸಿ  ತಂಡ ಮೊದಲ ಪಂದ್ಯದಲ್ಲೇ ಕಳೆದ ಬಾರಿಯ ಚಾಂಪಿಯನ್ ತಂಡ ಚೆನ್ನೈಯನ್ ಎಫ್ಸಿ ತಂಡವನ್ನು ಬೆಂಗಳೂರಿನಲ್ಲಿ ಎದುರಿಸಲಿದೆ. ಅಂದರೆ ಕಳೆದ ಬಾರಿಯ ಫೈನಲ್ ಪಂದ್ಯದ ಪುನರಾವರ್ತನೆಯಾಗಲಿದೆ. ಸೆ. 30ರಂದು ಬೆಂಗಳೂರಿನಲ್ಲಿ ಮೊದಲ ಪಂದ್ಯ ನಡೆಯಲಿದೆ.
ಲೀಗ್‌ನ ಮೊದಲ ಹಂತದ ವೇಳಾಪಟ್ಟಿ ಪ್ರಕಟವಾಗಿದ್ದು, ಬೆಂಗಳೂರು ತಂಡ ಡಿಸೆಂಬರ್ ಮಧ್ಯದ ವರೆಗೆ 11 ಪಂದ್ಯಗಳನ್ನಾಡಲಿವೆ. ಮೊದಲ ಪಂದ್ಯದಲ್ಲಿ ಬ್ಲೂ ಪಡೆ ಮನೆಯಂಗಣದಲ್ಲಿ ಆರು ಹಾಗೂ ಹೊರಗಡೆ ಐದು ಪಂದ್ಯಗಳನ್ನಾಡಲಿದೆ.
ಮೊದಲ ಪಂದ್ಯದ ನಂತರ ಬೆಂಗಳೂರು ತಂಡ ಅಕ್ಟೋಬರ್ 7ರಂದು ಜೆಮ್ಷೆಡ್ಪುರ ಎಫ್ಸಿ ವಿರುದ್ಧ ಆಡಲಿದೆ. ಅಕ್ಟೋಬರ್ 22ರಂದು ಪುಣೆಯಲ್ಲಿ ಎಫ್ ಸಿ  ಪುಣೆ ಸಿಟಿ ತಂಡವನ್ನು ಎದುರಿಸಲಿದೆ. ಅಕ್ಟೋಬರ್ 31ರಂದು ಎಟಿಕೆ ವಿರುದ್ಧ ಪಂದ್ಯವನ್ನಾಡಲಿದೆ. ಒಂದು ವಾರದ ನಂತರ ಹೊರಗಡೆ ಸತತ ಎರಡು ಪಂದ್ಯಗಳನ್ನಾಡಲಿದೆ. ನವೆಂಬರ್ 5 ರಂದು ಕೇರಳ ಬ್ಲಾಸ್ಟರ್ಸ್ ಹಾಗೂ ನವೆಂಬರ್ ೨೨ರಂದು ಎಫ್ಸಿ ಗೋವಾ ವಿರುದ್ಧ ಆಡಲಿದೆ.
ನವೆಂಬರ್ 26ರಂದು ಡೆಲ್ಲಿ ಡೈನಮೋಸ್ ಹಾಗೂ ನವೆಂಬರ್ 30ರಂದು ಪುಣೆ ತಂಡಗಳು ಬೆಂಗಳೂರಿನಲ್ಲಿ ಆಡಲಿವೆ. ಡಿಸೆಂಬರ್ 5ರಂದು ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಪಂದ್ಯ ನಡೆಯಲಿದೆ. ಡಿಸೆಂಬರ್ 9ರಂದು ಮುಂಬೈ ಸಿಟಿ ವಿರುದ್ಧ ಪಂದ್ಯವನ್ನಾಡಲಿದೆ. ಡಿಸೆಂಬರ್ 13ರಂದು ಎಟಿಕೆ ವಿರುದ್ಧ ಕೋಲ್ಕೊತಾದಲ್ಲಿ ಆಡಲಿದೆ. ಮನೆಯಂಗಣದಲ್ಲಿ ನಡೆಯುವ ಆರು ಪಂದ್ಯಗಳಲ್ಲಿ ಮೂರು ಪಂದ್ಯ ಭಾನುವಾರ ನಡೆಯಲಿದೆ. ತಲಾ ಒಂದು ಪಂದ್ಯ ಸೋಮವಾರ, ಬುಧವಾರ ಹಾಗೂ ಶುಕ್ರವಾರ ನಡೆಯಲಿದೆ.

Related Articles