Friday, December 13, 2024

16 ರಂದು ರಾಜ್ಯ ಮಟ್ಟದ ಗುಡ್ಡಗಾಡು ಓಟ

ಸ್ಪೋರ್ಟ್ಸ್ ಮೇಲ್ ವರದಿ

ಎವರೆಸ್ಟ್ ಅಥ್ಲೆಟಿಕ್ಸ್ ಕ್ಲಬ್ (ರಿ) ಶಿವಮೊಗ್ಗ ಸೆ. 16ರಂದು ರಾಜ್ಯಮಟ್ಟದ ಗುಡ್ಡಗಾಡು ಓಟವನ್ನು ಹಮ್ಮಿಕೊಂಡಿದೆ. ಪರಿಸರ ರಕ್ಷಣೆ ಹಾಗೂ ಜೀವ ಸಂರಕ್ಷಣೆಯನ್ನು ಗುರಿಯಾಗಿಸಿಕೊಂಡು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ನೇರಳಗುಂಡಿ ಗ್ರಾಮದಲ್ಲಿ ಈ ಓಟವನ್ನು ನಡೆಸಲಾಗುವುದು.

ಪುರುಷರಿಗೆ 12 ಕಿ.ಮೀ. ಹಾಗೂ ಮಹಿಳೆಯರಿಗೆ  6 ಕಿ.ಮೀ. ದೂರದ ಓಟವಿರುತ್ತದೆ. ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಮೊದಲ ಹಾಗೂ ಹತ್ತನೇ ಸ್ಥಾನ ಪಡೆದವರಿಗೂ ನಗದು ಬಹುಮಾನವಿರುತ್ತದೆ. ಪುರುಷರ ವಿಭಾಗದಲ್ಲಿ ಮೊದಲ ಸ್ಥಾನ ಪಡೆದವರು 50,000 ರೂ, ಎರಡನೇ ಸ್ಥಾನ ಪಡೆದವರು 40,000 ರೂ, ಮೂರನೇ ಸ್ಥಾನ ಪಡೆದವರು 30,000, ನಾಲ್ಕನೇ ಸ್ಥಾನ ಪಡೆದವರು 20,000, ಐದನೇ ಸ್ಥಾನ ಪಡೆದವರು 10,000 ಹಾಗೂ ಆರರಿಂದ 10ನೇ ಸ್ಥಾನ ಪಡೆದವರು ತಲಾ 2,000 ರೂ. ನಗದು ಬಹುಮಾನ ಪಡೆಯಲಿದ್ದಾರೆ.
ವನಿತೆಯರ ವಿಭಾಗದಲ್ಲಿ ಮೊದಲ ಸ್ಥಾನ ಪಡೆದವರು 30,000, ಎರಡನೇ ಸ್ಥಾನ ಪಡೆದವರು 20,000, ಮೂರನೇ ಸ್ಥಾನ ಪಡೆದವರು 10,000, ನಾಲ್ಕನೇ ಸ್ಥಾನ ಪಡೆದವರು 5,000, ಐದನೇ ಸ್ಥಾನ ಗಳಿಸಿದವರು 3,000 ರೂ. ಹಾಗೂ ಆರರಿಂದ ಹತ್ತನೇ ಸ್ಥಾನ ಗಳಿಸಿದವರು ತಲಾ 2,000 ರೂ. ನಗದು ಬಹುಮಾನ ಪಡೆಯಲಿದ್ದಾರೆ. ಭಾಗವಹಿಸಿದ ಪ್ರತಿಯೊಬ್ಬರಿಗೂ ಟಿ ಶರ್ಟ್ ಹಾಗೂ ಸರ್ಟಿಫಿಕೇಟ್ ನೀಡಲಾಗುವುದು. ಭಾಗವಹಿಸುವವರು ಹೊನ್ನಾಳಿ ತಾಲೂಕಿನ ಹಿರೇಕಲ್ಮಠದಲ್ಲಿ ತಮ್ಮ ಹೆಸರನ್ನು ನೋಂದಾಯಿಸತಕ್ಕದ್ದು. ಅಲ್ಲಿಯೇ ವಸತಿ ಸೌಕರ್ಯ ಇರುತ್ತದೆ. ಸೆ. 15ಕ್ಕೆ ಮುಂಚಿತವಾಗಿ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು.
ಇ-ಮೇಲ್ ಮೂಲಕವೂ ಹೆಸರನ್ನು ನೋಂದಾಯಿಸಿಕೊಳ್ಳಬಹುದು. everest.athletics.kar@gmail.com
18ರಂದು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆ.16ರಂದು ಗುಡ್ಡಗಾಡು ಓಟ ಮುಗಿದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಪ್ರವೇಶ ಶುಲ್ಕ -ರೂ. 250. ಹೆಚ್ಚಿನ ವಿವರಗಳಿಗೆ- 8496861998 ಅಥವಾ9980533122 ದೂರವಾಣಿಯನ್ನು ಸಂಪರ್ಕಿಸಬಹುದು. 

Related Articles