ಮೂರನೇ ಸ್ಥಾನಕ್ಕೇರಿದ ಕುಲ್ದೀಪ್‌

0
210
ದುಬೈ:

ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಬಿಡುಗಡೆ ಮಾಡಿದ ಟಿ-20 ವಿಶ್ವಕಪ್  ರಾಂಕಿಂಗ್  ನ ಬೌಲಿಂಗ್ ವಿಭಾಗದಲ್ಲಿ ಭಾರತದ ಚೈನಾಮನ್ ಕುಲ್ದೀದ್ ಯಾದವ್ ಮೂರನೇ ಸ್ಥಾನಕ್ಕೇರಿದ್ದಾರೆ.

ಇದರೊಂದಿಗೆ  ಅವರು ವೃತ್ತಿ ಜೀವನದ ಶ್ರೆೆಷ್ಠ ರಾಂಕಿಂಗ್  ಪಡೆದರು.
ಆಸ್ಟ್ರೇಲಿಯಾ ವಿರುದ್ಧದ ಕಳೆದ ಚುಟುಕು ಸರಣಿಯಲ್ಲಿ ನಾಲ್ಕು ವಿಕೆಟ್ ಪಡೆದಿದ್ದರು. 714 ಅಂಕಗಳೊಂದಿಗೆ 20 ಸ್ಥಾನಗಳಲ್ಲಿ ಏರಿಕೆಯೊಂದಿಗೆ ಮೂರನೇ ಶ್ರೆೆಯಾಂಕಕ್ಕೆೆ ಜಿಗಿದರು. ಪಾಕಿಸ್ತಾನದ ಶದಾಬ್ ಖಾನ್ 752 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಅಫಘಾನಿಸ್ತಾನದ ರಶೀದ್ ಖಾನ್ 793 ಅಂಕಗಳೊಂದಿಗೆ ಅಗ್ರ ಸ್ಥಾನ ಅಲಂಕರಿಸಿದ್ದಾರೆ.
ಆಸೀಸ್ ವಿರುದ್ಧ ಕಳೆದ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಕೃನಾಲ್ ಪಾಂಡ್ಯ 66 ಸ್ಥಾನಗಳು ಜಿಗಿಯುವ ಮೂಲಕ 98ನೇ ರಾಂಕಿಂಗ್  ಪಡೆದರೆ, ಭುವನೇಶ್ವರ್ ಕುಮಾರ್ ಹಾಗೂ ಬುಮ್ರಾ ಕ್ರಮವಾಗಿ 19, 21 ನೇ ಸ್ಥಾನದಲ್ಲಿದ್ದಾರೆ.
ಆಸೀಸ್ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ಬ್ಯಾಟಿಂಗ್ ವಿಭಾಗದಲ್ಲಿ ಐದು ಸ್ಥಾನಗಳು ಏರಿಕೆಯೊಂದಿಗೆ 11ನೇ ಶ್ರೇಯಾಂಕ ಪಡೆದಿದ್ದಾರೆ. ರೋಹಿತ್ ಶರ್ಮಾ ಹಾಗೂ ರಾಹುಲ್ ಕ್ರಮವಾಗಿ 6, 9ನೇ ಸ್ಥಾನಕ್ಕಿಳಿದಿದ್ದಾರೆ. ನಾಯಕ ವಿರಾಟ್ ಕೊಹ್ಲಿ 14ನೇ ಸ್ಥಾನಕ್ಕೇರಿದ್ದಾರೆ.