Saturday, July 27, 2024

18 ಲಕ್ಷ ರೂ. ವಂಚನೆ, ಶ್ರೀಶಾಂತ್‌ ಈಗ ಶ್ರೀ 420!

ತಿರುವನಂತಪುರ: ಕ್ರಿಕೆಟ್‌ನಲ್ಲಿ ಟವೆಲ್‌ ಹಿಡಿದು ಮ್ಯಾಚ್‌ ಫಿಕ್ಸಿಂಗ್‌ ಮಾಡಿದ್ದ ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌ ಶ್ರೀಶಾಂತ್‌ ವಿರುದ್ಧ ವಂಚನೆ ಪ್ರಕರಣದ ದೂರು ದಾಖಲಾಗಿದೆ. Cricketer S. Sreesanth booked in cheating case in Kerala.

ಕೊಲ್ಲೂರಿನಲ್ಲಿ ವಿಲ್ಲಾವನ್ನು ಸ್ಥಾಪಿಸಲು ವ್ಯಕ್ತಿಯೊಬ್ಬರಿಂದ 2019ರಿಂದ ಶ್ರೀಶಾಂತ್‌ ಸೇರಿ ಮೂವರು ವ್ಯಕ್ತಿಗಳು ಬೇರೆ ಬೇರೆ ಅವಧಿಯಲ್ಲಿ ಸುಮಾರು 18.70 ಲಕ್ಷ ರೂ. ಪಡಿದಿದ್ದಾರೆ. ಈಗ ಕೊಲ್ಲೂರಿನಲ್ಲಿ ವಿಲ್ಲಾನೂ ಇಲ್ಲ, ಕೊಟ್ಟ ಹಣವನ್ನೂ ಹಿಂದಿರಿಗುಸುತ್ತಿಲ್ಲ ಎಂದು ಸರೀಶ್‌ ಗೋಪಾಲನ್‌ ಎಂಬುವರು ದೂರು ನೀಡಿದ್ದಾರೆ.

ಶ್ರೀಶಾಂತ್‌ ಜೊತೆಯಲ್ಲಿ ರಾಜೀವ್‌‌ ಕುಮಾರ್‌ ಹಾಗೂ ವೆಂಕಟೇಶ್‌ ಕಿಣಿ ಎಂಬುವರೂ ಸೇರಿ ಈ 420 ಕೆಲಸ ಮಾಡಿರುತ್ತಾರೆ. ಶ್ರೀಶಾಂತ್‌ ಅವರನ್ನು ದೂರುದಾರರು ವಿಚಾರಿಸಿದಾಗ ಅಲ್ಲಿ ಕ್ರಿಕೆಟ್‌ ಆಕಾಡೆಮಿ ಮಾಡುವುದಾಗಿ ಹೇಳಿದ್ದಾರೆ. ಐದು ಸೆಂಟ್ಸ್‌ ಜಾಗ ಅದರಲ್ಲಿ ವಿಲ್ಲಾ ಕಟ್ಟುವುದಾಗಿ ಹೇಳಿ ಮೂವರೂ ಹಣ ಪಡೆದಿರುತ್ತಾರೆ. ಈಗ ಶ್ರೀಶಾಂತ್‌ ಅಕಾಡೆಮಿಯೂ ಇಲ್ಲ ವಿಲ್ಲಾನೂ ಇಲ್ಲ ಅನ್ನುತ್ತಿದ್ದಾರೆ. ಇದರಿಂದಾಗಿ ಸರೀಶ್‌ ಕೇರಳದ ಕನ್ನಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related Articles