Sunday, May 26, 2024

ಮಾರ್ಚ್ 2, 3, 4 ವೈಪಿಎಲ್, ಯಲಹಂಕ ಪ್ರೀಮಿಯರ್ ಲೀಗ್

ಸ್ಪೋರ್ಟ್ಸ್ ಮೇಲ್ ವರದಿ

ಯುವ ಕ್ರಿಕೆಟರ್ಸ್ ಯಲಹಂಕ ಇವರ ಸಾರಥ್ಯದಲ್ಲಿ ಮಾರ್ಚ್ 2, 3 ಹಾಗೂ 4ರಂದು ಯಲಹಂಕ ಪ್ರೀಮಿಯರ್ ಲೀಗ್, ಬೆಂಗಳೂರಿನ ಯಲಹಂಕದಲ್ಲಿರುವ ಹೊಯ್ಸಳ ಕ್ರಿಕೆಟ್ ಅಂಗಣದಲ್ಲಿ ನಡೆಯಲಿದೆ.

ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆಯಲಿರುವ ಈ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳಲು ಪ್ರವೇಶ ಶುಲ್ಕ 9,999 ರೂ. ಆಗಿರುತ್ತದೆ. ಮೊದಲ 20 ತಂಡಗಳಿಗೆ ಮಾತ್ರ ಅವಕಾಶ ಇರುವುದರಿಂದ ಮೊದಲು ಹೆಸರು ನೋಂದಾಯಿಸಿಕೊಂಡವರಿಗೆ ಮಾತ್ರ ಆಡಲು ಅವಕಾಶವಿರುತ್ತದೆ.
ಚಾಂಪಿಯನ್ ತಂಡವು 1,11,111 ರೂ. ಹಾಗೂ ರನ್ನರ್ ಅಪ್ ತಂಡವು 55.555 ರೂ. ನಗದು ಬಹುಮಾನ ಹಾಗೂ ಟ್ರೋಫಿಯನ್ನು ಗೆಲ್ಲಲಿದೆ. ಅಲ್ಲದೆ ಬೆಸ್ಟ್ ಬ್ಯಾಟ್ಸ್‌ಮನ್, ಬೆಸ್ಟ್ ಬೌಲರ್, ಸರಣಿಶ್ರೇಷ್ಠ, ಹಾಗೂ ಪಂದ್ಯಶ್ರೇಷ್ಠ ಪ್ರಶಸ್ತಿ ಗೆಲ್ಲುವವರಿಗೆ ವಿಶೇಷ ಬಹಮಾನವಿರುತ್ತದೆ. ಅರ್ಜಿ ಸಲ್ಲಿಸಲು ಫೆಬ್ರವರಿ 27, 2019 ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ವಿವರಗಳಿಗೆ 9741944188, 9164955408 ದೂರವಾಣಿಯನ್ನು ಸಂಪರ್ಕಿಸಬಹುದು.  ವೈಸ್ಪೋರ್ಟ್ಸ್‌ನಲ್ಲಿ ಪಂದ್ಯಗಳ ನೇರಪ್ರಸಾರವಿರುತ್ತದೆ.

Related Articles