Tuesday, November 12, 2024

ಕರಾವಳಿಗೆ ಆವರಿಸಿತು ಟಾರ್ಪೆಡೋಸ್ ಟಿ10 ಬಿಸಿ

ಸ್ಪೋರ್ಟ್ಸ್ ಮೇಲ್ ವರದಿ

ಕರ್ನಾಟಕದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯಗಳನ್ನು ಬರೆದಿರುವ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ) ಇದೇ ತಿಂಗಳ ೨೮ರಿಂದ ಮಾರ್ಚ್ ೪ರವರೆಗೆ ನಡೆಸಲಿರುವ ಟ10 ಬ್ಯಾಶ್ ಕ್ರಿಕೆಟ್ ಟೂರ್ನಿಯ ಕಾವು ಈಗ ಇಡೀ ಕರಾವಳಿಯನ್ನೇ ಆವರಿಸಿದೆ.

ರಾಜ್ಯದ ಪ್ರಮುಖ ತಂಡಗಳು ಮಾತ್ರವಲ್ಲದೆ, ಹೊರ ರಾಜ್ಯಗಳ ಜನಪ್ರಿಯ ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ.

Bharath Army, Indian cricket fans

ಮಂಗಳೂರಿನ ಎನ್‌ಎಂಪಿಟಿ, ಎನ್‌ಐಟಿಕೆ ಹಾಗೂ ಫಾದರ್ ಮುಲ್ಲರ್ಸ್ ಅಂಗಣದಲ್ಲಿ ನಡೆಯಲಿರುವ ಈ ಕ್ರಿಕೆಟ್ ಹಬ್ಬ ಕಾರ್ಪೊರೇಟ್ ಹಾಗೂ ಎಲೈಟ್ ಓಪನ್ ವಿಭಾಗಗಳಲ್ಲಿ ನಡೆಯಲಿದೆ. ಫೆಬ್ರವರಿ 28ರ ಗುರುವಾರ ಬೆಳಿಗ್ಗೆ 10:30ಕ್ಕೆ  ಟೂರ್ನಿಗೆ ಚಾಲನೆ ದೊರೆಯಲಿದ್ದು, ಮಾರ್ಚ್ 4ರ ಸಂಜೆ 5:30 ಕ್ಕೆ ಸಮಾಪನಗೊಳ್ಳಲಿದೆ ಎಂದು ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ , ಮಾಜಿ ಕ್ರಿಕೆಟಿಗ ಗೌತಮ್  ಶೆಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲೈಟ್ ವಿಭಾಗದ ಪ್ರಮುಖ ತಂಡಗಳು
ಎಲೈಟ್ ಓಪನ್ ವಿಭಾಗದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳ ತಂಡಗಳು ಪಾಲ್ಗೊಳ್ಳುತ್ತಿದ್ದು, ಈಗಾಗಲೇ ಪ್ರಮುಖ ತಂಡಗಳು ತಮ್ಮ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿವೆ. ಮುಂಬೈ, ಕೇರಳ, ತಮಿಳುನಾಡು, ತೆಲಂಗಾಣ, ಗೋವಾ ಹಾಗೂ ಆಂ‘್ರಪ್ರದೇಶದ ತಂಡಗಳ ಜತೆಯಲ್ಯ್ ರಾಜ್ಯದ ತಂಡಗಳೂ ತಮ್ಮ ಹೆಸರನ್ನು ನೋಂದಾಯಿಸಿವೆ. ಇಂಡಿಯನ್ ಪೋರ್ಟ್ಸ್ ಮುಂಬೈ, ಆಂಧ್ರ  ರಾಯಲ್ ಚಾಲೆಂಜರ್ಸ್, ಸೆಂಟ್ರಲ್ ಆಂಧ್ರ, ತೆಲಂಗಾಣ ಟೈಗರ್ಸ್, ಕೇರಳ ಸ್ಟ್ರೈಕರ್ಸ್, ತಮಿಳುನಾಡು ವಾರಿಯರ್ಸ್, ಚಕ್ರವರ್ತಿ ಕುಂದಾಪುರ, ಡಿಎನ್‌ಐ ಬೆಂಗಳೂರು, ಆಳ್ವಾಸ್ ಮೂಡಬಿದಿರೆ, ಬೆದ್ರಾ ಬುಲ್ಸ್, ಬೆದ್ರಾ ಫ್ರೆಂಡ್ಸ್, ಮಂಗಳೂರು ಡೈನಮೋಸ್, ಸಿವೈಸಿ ಕಾಟಿಪಳ್ಳ, ಬಜ್ಪೆ ಜಾಗ್ವರ್ಸ್, ಎಂಸಿಎ್ ಮಂಗಳೂರು, ಎನ್‌ಐಟಿಕೆ ಸುರತ್ಕಲ್ ಹಾಗೂ ಗೋವನ್ ಕಿಲ್ಲರ್ಸ್  ಅಲ್ಲದೆ ಕರ್ನಾಟಕದ ಇತರ ಪ್ರಮುಖ ತಂಡಗಳು ಪಾಲ್ಗೊಳ್ಳಲಿವೆ.
ಕಾರ್ಪೊರೇಟ್ ವಿಭಾಗದ ಪ್ರಮುಖ ತಂಡಗಳು
ಕಾರ್ಪೊರೇಟ್ ವಿಭಾಗದಲ್ಲಿ ಮಾಹೆ ವಿಶ್ವವಿದ್ಯಾನಿಲಯ ಮಣಿಪಾಲ, ಇಂಡಿಯನ್ ಪೋರ್ಟ್ಸ್ ಮುಂಬೈ, ಬೆಂಗಳೂರಿನ ವಿಜಯ ಬ್ಯಾಂಕ್, ಇನ್ಫೋಸಿಸ್, ಎಂಸಿಎಫ್ ಮಂಗಳೂರು, ಬಿಎಎಸ್‌ಎಫ್  ಮಂಗಳೂರು, ಎಂಆರ್‌ಪಿಎಲ್ ಮಂಗಳೂರು, ಲಕ್ಷ್ಮೀ ಮೆಮೋರಿಯಲ್, ಒಎಂಪಿಎಲ್ ಹಾಗೂ ಆ್ಯಕ್ಸಿಸ್ ಬ್ಯಾಂಕ್ ತಂಡಗಳು ಸೇರಿದಂತೆ ಇತರ ಪ್ರಮುಖ ತಂಡಗಳು ಪಾಲ್ಗೊಳ್ಳಲಿವೆ.

Sudheer Kumar Gautam, Sachin Tendulkar fan

ಉದ್ಘಾಟನಾ ಸಮಾರಂಭ
ಮಂಗಳೂರಿನ ಎನ್‌ಎಂಪಿಟಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೆಂಥಿಲ್ ಕುಮಾರ್ ಕ್ರಿಕೆಟ್ ಸಡಗರಕ್ಕೆ ಚಾಲನೆ ನೀಡುವರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರ ವಿಭಾಗದ ಶಾಸಕ ಡಾ. ವೈ. ಭರತ್ ಶೆಟ್ಟಿ, ಮಾಜಿ ಶಾಸಕ ಮೊಯ್ದಿನ್ ಬಾವಾ, ಕ್ಯಾಪ್ಟನ್ ಎಸ್.ಆರ್. ಪಟ್ನಾಯಕ್, ಕನ್ಸರ್ವೇಟಿವ್ ಪ್ರೆಸಿಡೆಂಟ್, ಎನ್‌ಎಂಪಿಟಿ ಸ್ಪೋರ್ಟ್ಸ್ ಕೌನ್ಸಿಲ್,  ಎನ್‌ಐಟಿಕೆ ಡೀನ್ (ಸ್ಟೂಡೆಂಟ್ಸ್ ಎೈರ್ಸ್) ಡಾ. ಜಗನ್ನಾಥ್ ನಾಯಕ್, ಎಂಎಲ್‌ಸಿ ಹರೀಶ್ ಕುಮಾರ್, ಮಾಜಿ ಕ್ರೀಡಾ ಸಚಿವ ಅಭಯಚಂದ್ರ ಜೈನ್, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, ಎಂಆರ್‌ಪಿಎಲ್‌ನ ಮುಖ್ಯ ಜನರಲ್ ಮ್ಯಾನೇಜರ್ ಸತ್ಯನಾರಾಯಣ ಹಾಗೂ ಪಣಂಬೂರು ವಿಭಾಗದ ಪೊಲೀಸ್ ಉಪ ಆಯುಕ್ತ ಶ್ರೀನಿವಾಸ ಗೌಡ ಅವರು ಪಾಲ್ಗೊಳ್ಳಲಿದ್ದಾರೆ.

Dharmaveer, Known as 12th Man of Indian Cricket

ಸಮಾರೋಪ ಸಮಾರಂಭ
ಮಾರ್ಚ್ 4ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಜ್ಯ ಕಂದಾಯ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಸಂಸದ ನವೀನ್ ಕುಮಾರ್ ಕಟೀಲ್, ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಶಾಸಕ ರಮಾನಾಥ ರೈ, ಎಂಆರ್‌ಪಿಎಲ್‌ನ ಮುಖ್ಯ ಜನರಲ್ ಮ್ಯಾನೇಜರ್ ಶರತ್ ಬುಧಾಳೆ, ಲೆಫ್ಟಿನೆಂಟ್ ಕರ್ನಲ್ ಬಿಜು ವಾರಿಯರ್, ಕಾರ್ಯದರ್ಶಿ ಎನ್‌ಎಂಪಿಟಿ, ಉದ್ಯಮಿ ಹಾಗೂ ಮಾಜಿ ಕ್ರೀಡಾಪಟು ಕಿರಣ್ ಬಿಎನ್, ಮಂಗಳೂರು ಮಹಾನಗರ ಪಾಲಿಗೆ ಉಪಮೇಯರ್ ಮೊಹಮ್ಮದ್ ಕುಂಜತ್ತಬೈಲ್, ಕಾರ್ಪೊರೇಟರ್ ರಘುವೀರ್ ಮುಖ್ಯ  ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭ  ಕೂಡ ಎನ್‌ಎಂಪಿಟಿ ಕ್ರೀಡಾಂಗಣದಲ್ಲಿ ನಡೆಯಲಿದೆ.

Related Articles