ವಿ.ವಿ.ಸಿ ಕುಂದಾಪುರ ಮಡಿಲಿಗೆ ಭಾವಿಕಾ ಟ್ರೋಫಿ-2019

0
243

ಕೋಟ ರಾಮಕೃಷ್ಣ ಆಚಾರ್ಯ

ವಿಶ್ವಕರ್ಮ ಸಮಾಜ ಬಾಂಧವರಿಗಾಗಿ ವಿಶ್ವಕರ್ಮ ಕಲಾವೃಂದ ಹಾಗೂ ಭಾರ್ಗವ ಕ್ರಿಕೆಟರ್ಸ್ ಸಾಲಿಗ್ರಾಮ ತಂಡದ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾದ
ದಿ|ಪಾರಂಪಳ್ಳಿ ವೆಂಕಟರಮಣ ಆಚಾರ್ಯ ಸ್ಮರಣಾರ್ಥ
ಏರ್ಪಡಿಸಲಾದ ರಾಜ್ಯಮಟ್ಟದ
“ಭಾವಿಕಾ ಟ್ರೋಫಿ-2019″ನ್ನು
ವಿ‌.ವಿ.ಸಿ ಕುಂದಾಪುರ ತಂಡ ಜಯಿಸಿತು.

ರಾಜ್ಯದ ನಾನಾ ಭಾಗಗಳಿಂದ ಒಟ್ಟು 22 ತಂಡಗಳು ಭಾಗವಹಿಸಿದ್ದವು.ಲೀಗ್ ಹಂತದ ಕುತೂಹಲಕಾರಿ ಪಂದ್ಯಗಳ ಬಳಿಕ, ಸೆಮಿಫೈನಲ್ ಪ್ರವೇಶ ಪಡೆದಿದ್ದ
ಶ್ರೀವಿಕಾ ಪಾದೆಬೆಟ್ಟು ತಂಡ ಜಾಹ್ನವಿ ಉಡುಪಿ ತಂಡವನ್ನು ಹಾಗೂ ವಿ.ವಿ.ಸಿ ಕುಂದಾಪುರ ತಂಡ
ವಿ.ಬಿ ವಕ್ವಾಡಿ ತಂಡವನ್ನು ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟಿದ್ದರು. ಫೈನಲ್ ನಲ್ಲಿ ಟಾಸ್ ಗೆದ್ದು ವಿ.ವಿ.ಸಿ ಫೀಲ್ಡಿಂಗ್ ಆಯ್ದು ಕೊಂಡರೆ  ಶ್ರೀವಿಕಾ 4 ಓವರ್ ಗಳಲ್ಲಿ
28 ರನ್ ಗಳಿಸಿದರು.ಸ್ಪರ್ಧಾತ್ಮಕ ಗುರಿಯನ್ನು ಬೆಂಬತ್ತಿದ ವಿ.ವಿ.ಸಿ ಕುಂದಾಪುರ 2 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವನ್ನು ಸಾಧಿಸಿತು.

ವಿಜಯಿ ತಂಡ ವಿ.ವಿ.ಸಿ ಕುಂದಾಪುರ 25,000 ನಗದು ಹಾಗೂ ಅತ್ಯಂತ ಉದ್ದಗಲದ ಟ್ರೋಫಿ ಪಡೆದರೆ,
ರನ್ನರ್ಸ್ ಶ್ರೀವಿಕಾ 18,000 ಸಹಿತ ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡರು.
ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿ  ವಿ.ವಿ.ಸಿ ಸುಜಿತ್ ಪಾಲಾದರೆ,ಟೂರ್ನಿಯುದ್ದಕ್ಕೂ ಸರ್ವಾಂಗೀಣ ಪ್ರದರ್ಶನ ನೀಡಿದ ವಿ.ವಿ.ಸಿ ಮೋಹನ್ ಹಾಸನ ಸರಣಿ ಶ್ರೇಷ್ಠ ಪ್ರಶಸ್ತಿ, ಬೆಸ್ಟ್ ಬ್ಯಾಟ್ಸ್‌ಮನ್ ಜಾಹ್ನವಿ ಅರುಣ್ ಆಚಾರ್ಯ, ಬೆಸ್ಟ್ ಬೌಲರ್ ಶ್ರೀವಿಕಾ ಆದೇಶ್,ಬೆಸ್ಟ್ ಫೀಲ್ಡರ್ ನಿತೇಶ್ ವಿ.ವಿ.ಸಿ ಹಾಗೂ ಬೆಸ್ಟ್ ಕೀಪರ್ ಪ್ರಶಸ್ತಿಯನ್ನು ವಿ.ಬಿ.ವಕ್ವಾಡಿಯ ಚಂದ್ರ ಆಚಾರ್ಯ ಹಾಗೂ ಪಂದ್ಯಾಕೂಟದ ಅತಿ ಶಿಸ್ತಿನ ತಂಡ ಪ್ರಶಸ್ತಿಯನ್ನು ಅರ್ಹವಾಗಿ ಜಾಹ್ನವಿ ಉಡುಪಿ ತಂಡ ಪಡೆಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ
ಶ್ರೀಮತಿ ಯಶೋಧಾ ಪರಮೇಶ್ವರ ಆಚಾರ್ಯ ಪಾರಂಪಳ್ಳಿ,ವಿರಾಡಿಶ್ವ ಬ್ರಾಹ್ಮಣ ಸಮಾಜೋದ್ದಾರಕ ಸಂಘ ಚೇಂಪಿ ಅಧ್ಯಕ್ಷರಾದ ಜನಾರ್ಧನ ಆಚಾರ್ಯ ಚೇಂಪಿ,ವಿಶ್ವಕರ್ಮ ಕಲಾವೃಂದದ ಗೌರವಾಧ್ಯಕ್ಷರಾದ ಎಸ್.ರಾಘವೇಂದ್ರ ಆಚಾರ್ಯ ಸಾಯಬ್ರಕಟ್ಟೆ
ಗೋಪಾಲಕೃಷ್ಣ ಆಚಾರ್ ಪಾರಂಪಳ್ಳಿ,ಮನೀಷ್ ನಾಗರಾಜ ಆಚಾರ್,ಪ್ರೇಮ್ ಚಂದ್ರಶೇಖರ್ ಆಚಾರ್ಯ ಪಾರಂಪಳ್ಳಿ ಹಾಗೂ ಭಾರ್ಗವ ಕ್ರಿಕೆಟರ್ಸ್ ನ ಅಧ್ಯಕ್ಷರಾದ ಗಾಯತ್ರಿ ವೆಂಕಟೇಶ್ ಆಚಾರ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ 4 ಮಂದಿ ಅಶಕ್ತರಿಗೆ ಧನಸಹಾಯ ವಿತರಿಸಲಾಯಿತು.ರಾಜ್ಯ ಟೆನ್ನಿಸ್ ಕ್ರಿಕೆಟ್ ನ ಯುವ ಅಂಕಣಕಾರ ಕೋಟ ರಾಮಕೃಷ್ಣ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.
ವಿಶ್ವಕರ್ಮ ಯುವ ಪ್ರತಿಭೆಗಳ ಅನ್ವೇಷಣೆ ಹಾಗೂ ಸಂಘ ಬಲವರ್ಧನೆಯ ಉದ್ದೇಶ ಹೊತ್ತ ಈ ಪಂದ್ಯಾಕೂಟ ಭರ್ಜರಿ ಯಶಸ್ಸನ್ನು ಸಾಧಿಸಿತು, ಅಪಾರ ಜನಮೆಚ್ಚುಗೆಗೆ
ಪಾತ್ರವಾಯಿತು…